ಕೋವಿಡ್ 19 ವೈರಸ್ ಉದ್ಯೋಗ ಧಾರಣಾ ಯೋಜನೆ ವಿಸ್ತರಣೆ
Team Udayavani, Apr 19, 2020, 10:57 PM IST
ಲಂಡನ್: ಬೋರಿಸ್ ಜಾನ್ಸನ್ ಸರಕಾರದ ಕೋವಿಡ್ 19 ವೈರಸ್ ಉದ್ಯೋಗ ಧಾರಣಾ ಯೋಜನೆಯನ್ನು 1 ತಿಂಗಳು ವಿಸ್ತರಿಸಿ ಬ್ರಿಟನ್ ಹಣಕಾಸು ಸಚಿವ ರಿಶಿ ಸುನಕ್ ಶುಕ್ರವಾರ ಆದೇಶ ಹೊರಡಿಸಿದ್ದಾರೆ.
ಕೋವಿಡ್ 19 ವೈರಸ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಉದ್ಯೋಗಿಗಳನ್ನು ಬಲವಂತದ ರಜೆ ಮೇಲೆ ಕಳುಹಿಸುವುದನ್ನು ತಡೆಯಲು ಮಾರ್ಚ್‌ನಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಯಿತು.
ಈ ಸಂಕಷ್ಟದ ಸಮಯದಲ್ಲಿ ಉದ್ಯೋಗಿಗಳಿಗೆ ಜೀವನೋಪಾಯ ಕಲ್ಪಿಸಲು ಹಾಗೂ ಉದ್ಯಮ ಬೆಂಬಲಿಸಲು ಮತ್ತು ಆರ್ಥಿಕ ಪುನಶ್ಚೇತನಕ್ಕೆ ಪ್ರೋತ್ಸಾಹ ನೀಡಲು ಉದ್ಯೋಗ ಧಾರಣಾ ಯೋಜನೆ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿದ್ದೇವೆ.
ಗುರುವಾರ ಲಾಕ್ ಡೌನ್ ವಿಸ್ತರಿಸಿರುವ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಒಂದು ತಿಂಗಳ ಕಾಲ, ಜೂನ್‌ವರೆಗೆ ವಿಸ್ತರಿಸಲಾಗಿದೆ ಎಂದು ಅವರು ತಿಳಿಸಿದರು. ಈ ಯೋಜನೆ, ಸಂಸ್ಥೆಗಳು ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಉದ್ಯೋಗಿಗಳನ್ನು ಬಲವಂತವಾಗಿ ರಜೆ ಮೇಲೆ ಕಳುಹಿಸುವುದನ್ನು ಅಥವಾ ಕೆಲಸದಿಂದ ತೆಗೆದುಹಾಕುವುದನ್ನು ತಡೆಯುತ್ತದೆ. ಉದ್ಯೋಗಿಗಳಿಗೆ ಅವರ ವೇತನದ ಶೇ.80ರಷ್ಟು ಹಣವನ್ನು (ಗರಿಷ್ಠ 2,500 ಪೌಂಡ್‌ವರೆಗೆ) ಸಕಾರವೇ ಭರಿಸುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Udupi: ಜಿಲ್ಲೆಯ ಬ್ಲ್ಯಾಕ್ ಸ್ಪಾಟ್ 30ರಿಂದ 20ಕ್ಕೆ ಇಳಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.