ಉಡುಪಿ ಜಿಲ್ಲೆ: 4 ಕಡೆ ಮಾದರಿ ಸಂಗ್ರಹದ ವಿಸ್ಕ್
Team Udayavani, Apr 20, 2020, 6:08 AM IST
ಉಡುಪಿ: ಕೋವಿಡ್ 19 ಶಂಕಿತರ ಗಂಟಲ ದ್ರವ ಸಂಗ್ರಹದಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿರುವ ಮತ್ತು ಸೋಂಕುಮುಕ್ತ ಜಿಲ್ಲೆ ಎನಿಸಿರುವ ಉಡುಪಿ ಜಿಲ್ಲೆಯಲ್ಲಿ ಗಂಟಲ ದ್ರವ ಮಾದರಿಗಳನ್ನು ಸಂಗ್ರಹಿಸಲು ಅನುಕೂಲವಾಗುವ ನಾಲ್ಕು ವಾಕ್ ಇನ್ ಸ್ಯಾಂಪಲ್ ಕಲೆಕ್ಷನ್ ವಿಸ್ಕ್ ಸ್ಥಾಪನೆ ಮಾಡಲಾಗಿದೆ.
ಎ. 17, 18ರಂದು ಉಡುಪಿಯ ಜಿಲ್ಲಾಸ್ಪತ್ರೆ, ಡಾ| ಟಿಎಂಎ ಪೈ ಆಸ್ಪತ್ರೆಯಲ್ಲಿ, ಕುಂದಾಪುರ ಮತ್ತು ಕಾರ್ಕಳದ ತಾಲೂಕು ಆಸ್ಪತ್ರೆಗಳಲ್ಲಿ ಭಾರತೀಯ ವೈದ್ಯರ ಸಂಘ ಕರಾವಳಿ ಶಾಖೆ ಉಡುಪಿ, ರೋಟರಿ ಕ್ಲಬ್, ರೆಡ್‌ಕ್ರಾಸ್ ಸೊಸೈಟಿ ಸಹಕಾರದಲ್ಲಿ ವಿಸ್ಕ್ ಸ್ಥಾಪಿಸಲಾಗಿದೆ. ಇದು ಗಂಟಲ ದ್ರವ ಸಂಗ್ರಹ ಮಾಡುವಾಗ ರೋಗಿಗೂ ವೈದ್ಯಕೀಯ ಸಿಬಂದಿಗೂ ತಡೆಗೋಡೆಯಾಗಿದ್ದು ಸುರಕ್ಷಿತ ಮಾರ್ಗವಾಗಿದೆ ಮತ್ತು ಪರ್ಸನಲ್ ಪ್ರೊಟೆಕ್ಟಿವ್ ಇಕ್ವಿಪ್‌ಮೆಂಟ್ (ಪಿಪಿಇ) ಅವಲಂಬನೆಯನ್ನು ಕಡಿಮೆ ಮಾಡಲಿದೆ ಎಂದು ಕೋವಿಡ್ 19 ನೋಡಲ್ ಅಧಿಕಾರಿ ಡಾ| ಪ್ರಶಾಂತ್ ಭಟ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಸೋಂಕು ಕಂಡುಬಂದ ಮೂವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು ಹೋಮ್ ಕ್ವಾರಂಟೈನ್‌ನಲ್ಲಿದ್ದಾರೆ. ಭಟ್ಕಳದ ಗರ್ಭಿಣಿಯ ಗಂಟಲುದ್ರವದ ಮಾದರಿಯನ್ನು ಕಳುಹಿಸಿದ್ದು ವರದಿ ಇನ್ನಷ್ಟೇ ಬರಬೇಕಾಗಿದೆ.
26 ಮಾದರಿ ಸಂಗ್ರಹ
ರವಿವಾರ ಒಟ್ಟು 26 ಜನರ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಇವರಲ್ಲಿ ಉಸಿರಾಟದ ಸಮಸ್ಯೆಯ ನಾಲ್ವರು, ಕೋವಿಡ್ 19 ಸಂಪರ್ಕದ 11 ಮಂದಿ, ಜ್ವರದ ಆರು, ಹಾಟ್‌ಸ್ಪಾಟ್ ಸಂಪರ್ಕದ ಐವರು ಇದ್ದಾರೆ. ಇದುವರೆಗೆ 894 ಮಾದರಿಗಳನ್ನು ಜಿಲ್ಲೆಯಲ್ಲಿ ಸಂಗ್ರಹಿಸಲಾಗಿದೆ.
ರವಿವಾರದ ಎಲ್ಲ ವರದಿ ನೆಗೆಟಿವ್
ರವಿವಾರ ಬಂದ ಎಲ್ಲ 118 ವರದಿಗಳೂ ನೆಗೆಟಿವ್ ಆಗಿದ್ದು ಇದುವರೆಗೆ 796 ವರದಿಗಳು ನೆಗೆಟಿವ್ ಆಗಿವೆ. 95 ವರದಿಗಳನ್ನು ನಿರೀಕ್ಷಿಸಲಾಗುತ್ತಿದೆ.
57 ಮಂದಿ ಐಸೊಲೇಶನ್ ವಾರ್ಡ್‌ನಲ್ಲಿ
ರವಿವಾರ ತೀವ್ರ ಉಸಿರಾಟ ಸಮಸ್ಯೆಯ ಮೂವರು ಪುರುಷರು, ಕೋವಿಡ್ 19 ಶಂಕೆ, ಜ್ವರದ ತಲಾ ಒಬ್ಬರು ಒಟ್ಟು ಐವರು ಆಸ್ಪತ್ರೆಗಳ ಐಸೊಲೇಶನ್ ವಾರ್ಡ್‌ಗೆ ಸೇರ್ಪಡೆಯಾಗಿದ್ದಾರೆ. ಪ್ರಸ್ತುತ 57 ಮಂದಿ ಐಸೊಲೇಶನ್ ವಾರ್ಡ್‌ನಲ್ಲಿದ್ದಾರೆ. ರವಿವಾರ ನಾಲ್ವರು ಬಿಡುಗಡೆಗೊಂಡಿದ್ದಾರೆ.
109 ಮಂದಿ ನೋಂದಣಿ
ರವಿವಾರ ಒಟ್ಟು 109 ಮಂದಿ ನೋಂದಣಿ ಮಾಡಿಸಿಕೊಂಡಿದ್ದಾರೆ. ರವಿವಾರ 63 ಮಂದಿ 28 ದಿನಗಳ, 25 ಮಂದಿ 14 ದಿನಗಳ ಕ್ವಾರಂಟೈನ್ ಮುಗಿಸಿದ್ದಾರೆ. ಇದುವರೆಗೆ 1,825 ಮಂದಿ 28 ದಿನಗಳ, 2,162 ಮಂದಿ 14 ದಿನಗಳ ಕ್ವಾರಂಟೈನ್ ಮುಗಿಸಿದ್ದಾರೆ. ಪ್ರಸ್ತುತ 572 ಮಂದಿ ಮನೆಗಳಲ್ಲಿ ಮತ್ತು 35 ಮಂದಿ ಆಸ್ಪತ್ರೆ ಕ್ವಾರಂಟೈನ್‌ನಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ
Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Udupi:ಗೀತಾರ್ಥ ಚಿಂತನೆ 103: ಪಂಡಿತರೆಂದರೇನು?ಅಥವ ಪಂಡಿತರೆಂದರೆ ಯಾರು?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Police Raid: ಮಾದಕವಸ್ತು, ಅಕ್ರಮ ಮದ್ಯಮಾರಾಟದ ವಿರುದ್ಧ ವಿಶೇಷ ಕಾರ್ಯಾಚರಣೆ: ಪ್ರಕರಣ ದಾಖಲು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.