ತನಿಖೆಗೆ ಸರ್ವ ಸಹಕಾರ : ದಿಲ್ಲಿ ಪೊಲೀಸರಿಗೆ ತಬ್ಲೀಘಿ ಮುಖ್ಯಸ್ಥ ಮೌಲಾನಾ ಸಾದ್ ಪತ್ರ
Team Udayavani, Apr 20, 2020, 8:10 AM IST
ನವದೆಹಲಿ : ಸರಕಾರದ ಸೂಚನೆಗಳನ್ನು ಉಲ್ಲಂಘಿಸಿ ಬೃಹತ್ ಧಾರ್ಮಿಕ ಸಮಾವೇಶವನ್ನು ನಡೆಸುವ ಮೂಲಕ ಒಂದು ಬೃಹತ್ ಸಮೂಹವನ್ನೇ ಆರೋಗ್ಯದ ಅಪಾಯಕ್ಕೆ ತಳ್ಳಿದ್ದ ತಬ್ಲಿಘಿ ಜಮಾತ್ ಮುಖ್ಯಸ್ಥರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲುಗೊಂಡ ಬಳಿಕ ತಬ್ಲೀಘಿ -ಎ-ಜಮಾತ್ ಮುಖ್ಯಸ್ಥ ಮೌಲಾನಾ ಸಾದ್ ಖಂಧಾಲ್ವಿ ಮೆತ್ತಗಾದಂತೆ ತೋರುತ್ತಿದೆ.
ಇದೀಗ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಮೌಲಾನಾ ಸಾದ್, ತಮ್ಮ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ದಿಲ್ಲಿಯ ಕ್ರೈಂ ಬ್ರಾಂಚ್ಗೆ ಪತ್ರ ಬರೆದಿದ್ದಾರೆ. ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆಗೆ ತಾವೂ ಕೈ ಜೋಡಿಸಿದ್ದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಜತೆಗೆ, ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ನಲ್ಲಿ ಯಾವುದಾದರೂ ಹೊಸ ಆರೋಪಗಳು ಸೇರ್ಪಡೆಯಾಗಿದ್ದರೆ, ಆ ಎಫ್ಐಆರ್ ಪ್ರತಿಯನ್ನು ತಮಗೆ ಕಳುಹಿಸಿಕೊಡಬೇಕು ಎಂದು ಕೋರಿದ್ದಾರೆ. ಎ. 1 ಹಾಗೂ 2ರಂದು ತಮಗೆ ಕಳುಹಿಸಲಾಗಿದ್ದ ಎರಡು ನೋಟಿಸ್ಗಳಿಗೆ ತಾನು ಈಗಾಗಲೇ ಉತ್ತರ ನೀಡಿದ್ದು, ಆ ಮೂಲಕ ತಾವು ತನಿಖೆಗೆ ಸಹಕರಿಸುತ್ತಿರುವುದಾಗಿ ಪತ್ರದಲ್ಲಿ ಹೇಳಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.