ಪತ್ನಿಯ ಚಿಕಿತ್ಸೆಗಾಗಿ ಕ್ರಿಕೆಟಿಗ ಶಹಾಬಾಜ್ ನದೀಂ ಪರದಾಟ
Team Udayavani, Apr 20, 2020, 10:32 AM IST
ಜಾರ್ಖಂಡ್: ವೇಗದ ಬೌಲರ್ ಜಾರ್ಖಂಡ್‌ನ ಶಹಾಬಾಜ್ ನದೀಂ ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಪತ್ನಿಗೆ ಚಿಕಿತ್ಸೆ ಕೊಡಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
“ಪತ್ನಿಯ ಪಿತ್ತಜನಕಾಂಗದಲ್ಲಿ ಕೊಬ್ಬು ತುಂಬಿಕೊಂಡಿದ್ದು ಇದಕ್ಕೆ ಕಳೆದ 5 ತಿಂಗಳಿನಿಂದ ಕೋಲ್ಕತದಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಇದೀಗ ಲಾಕ್‌ಡೌನ್ ಇರುವುದರಿಂದ ವೈದ್ಯರಲ್ಲಿ ಹೋಗಲು ಸಾಧ್ಯವಾಗುತ್ತಿಲ್ಲ, ಆಕೆಗೆ ಈಗ ಹೆಚ್ಚು ಸುಸ್ತು, ವಾಂತಿ ಕೂಡ ಆಗುತ್ತಿದೆ. ತುರ್ತು ಪರಿಸ್ಥಿತಿಯಲ್ಲಿ ವೈದ್ಯರಲ್ಲಿ ತೆರಳಬೇಕಾಗಿರುವ ಅನಿವಾರ್ಯತೆ ಇದೆ.
ಸದ್ಯ ಲಾಕ್‌ಡೌನ್ ಇರುವುದರಿಂದ ಕೋಲ್ಕತಕ್ಕೆ ತೆರಳಿ ಚಿಕಿತ್ಸೆ ಪಡೆಯಲು ಅನುಮತಿ ಸಿಗುತ್ತಿಲ್ಲ’ ಎಂದು ನದೀಂ ಅಳಲು ತೋಡಿಕೊಂಡಿದ್ದಾರೆ.
ನದೀಂ ಐಪಿಎಲ್‌ನಲ್ಲಿ 64 ಪಂದ್ಯವನ್ನಾಡಿದ್ದಾರೆ. ಇದರಲ್ಲಿ 42 ವಿಕೆಟ್ ಪಡೆದಿದ್ದಾರೆ. ಉತ್ತಮ ಆಲ್ ರೌಂಡರ್ ಅಗಿರುವ ಶಹಬಾಜ್ ನದೀಂ ಐಪಿಎಲ್ ನಲ್ಲಿ 1570 ರನ್ ಗಳಿಸಿದ್ದಾರೆ. ಭಾರತದ ಪರ ಒಂದು ಟೆಸ್ಟ್ ಆಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.