ಕೋವಿಡ್ ಪೊಲೀಸ್ ಜಾಗೃತಿಯಲ್ಲಿ ಯಮ
Team Udayavani, Apr 20, 2020, 12:35 PM IST
ಬೆಂಗಳೂರು: ಲಾಕ್‌ಡೌನ್ ನಡುವೆಯೂ ಅನಗತ್ಯವಾಗಿ ಮನೆಯಿಂದ ಹೊರಗಡೆ ಬರುವ ಸಾರ್ವಜನಿಕರಿಗೆ ವಿವಿಧ ರೀತಿಯಲ್ಲಿ ಜಾಗೃತಿ ಮೂಡಿಸುತ್ತಿರುವ ಪೊಲೀಸರು, ಇದೀಗ “ಯಮ’ನನ್ನೆ ಕರೆ ತಂದು ಎಚ್ಚರಿಕೆ ನೀಡುತ್ತಿದ್ದಾರೆ. ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣಾಧಿಕಾರಿ ಎಸ್. ಆರ್.ರಾಘವೇಂದ್ರ ವಿಶೇಷ ಪ್ರಯೋಗ ನಡೆಸುತ್ತಿದ್ದು, ಯಮ ಹಾಗೂ ಯಮನ ಅಂಗರಕ್ಷಕರ ವೇಷಧಾರಿಗಳ ಮೂಲಕ ಸಾರ್ವಜನಿಕರಿಗೆ ಕೋವಿಡ್ ಪೊಲೀಸ್ ಜಾಗೃತಿಯಲ್ಲಿ ಯಮ ಎಚ್ಚರಿಕೆ ನೀಡುತ್ತಿದ್ದಾರೆ. ಪೊಲೀಸ್ ಜೀಪಿನ ಮುಂದೆ ಯಮ ಗದೆ ಹಿಡಿದು ಕುಳಿತಿದ್ದರೆ, ಇಬ್ಬರು ಯಮನ ಅಂಗರಕ್ಷಕರು ಜೀಪಿನ ಎರಡೂ ಬಾಗಿಲ ಬಳಿ ನಿಂತು ಎಚ್ಚರಿಕೆ ನೀಡುತ್ತಿದ್ದಾರೆ. ಠಾಣೆ ಸಿಬ್ಬಂದಿ ಶಂಕರ್ ಯಮ ವೇಷಧಾರಿಯಾದರೆ, ಕಾನ್ಸ್ ಸ್ಟೇಬಲ್‌ಗಳಾದ ಬಸವರಾಜು ಕಲ್ಲಳ್ಳಿ ಮತ್ತು ಶಾಂತಕುಮಾರ್ ಯಮನ ಅಂಗರಕ್ಷಕರ ವೇಷ ಧರಿಸಿದ್ದರು. ಠಾಣಾ ಸಿಬ್ಬಂದಿ ಪೌರಾಣಿಕ ಜಾಗೃತಿಗೆ ಸಾಮಾಜಿಕ ಜಾಲ ತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಹೆಡ್ ಕಾನ್ಸ್‌ಸ್ಟೇಬಲ್‌ರಿಂದ ಜಾಗೃತಿ: ನಗರದ ಹೆಬ್ಟಾಳ ಸಂಚಾರ ಠಾಣೆ ಹೆಡ್ ಕಾನ್ಸ್ ಸ್ಟೇಬಲ್ ನಂದೀಶ್ ತಮ್ಮ ಜಾದೂ ಮೂಲಕ ಕೋವಿಡ್ ಜಾಗೃತಿ ಮೂಡಿಸುತ್ತಿದ್ದಾರೆ.ಕೊರೊನಾ ಹರಡುವ ರೀತಿ, ಮಾಸ್ಕ್, ಸ್ಯಾನಿಟೈಸರ್ ಬಳಕೆ, ವಿಲೇವಾರಿ ಕ್ರಮ, ಸೋಂಕು ಹರಡದಂತೆ ಎಚ್ಚರಿಕೆ ಹೇಗೆ ಎಂಬೆಲ್ಲ ಮಾಹಿತಿ ನೀಡುತ್ತಿದ್ದಾರೆ. ಈ ಕುರಿತು ವಿಡಿಯೋ ವೈರಲ್ ಆಗಿದ್ದು, ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಡ್ರೋನ್ ಬಂತು ಓಡು
ಹದ್ದಿನಕಣ್ಣಿಡಲು ಪೊಲೀಸರು ಇದೀಗ ಡ್ರೋನ್ ಮೊರೆ ಹೋಗಿದ್ದಾರೆ. ನಗರದ ಎಲ್ಲ ಠಾಣಾ ವ್ಯಾಪ್ತಿಗಳಲ್ಲಿ ಪ್ರತಿ ರಸ್ತೆಗಳನ್ನು ಸೆರೆ ಹಿಡಿಯಲಾಗುತ್ತಿದೆ. ಅನಗತ್ಯವಾಗಿ ಓಡಾಡುವುದು, ಗುಂಪು ಕಟ್ಟಿ ನಿಂತಿದ್ದರೆ ಅವರನ್ನು ಪತ್ತೆ ಹಚ್ಚಿ ಎಚ್ಚರಿಕೆ ನೀಡುತ್ತಿದ್ದಾರೆ. ಇನ್ನು ಡ್ರೋನ್ ಕ್ಯಾಮೆರಾ ಆಕಾಶದಲ್ಲಿ ಹಾರಾಡುತ್ತಿರುವ ಸದ್ದು ಕೇಳುತ್ತಿದ್ದಂತೆ ಸಾರ್ವಜನಿಕರು ಮನೆಯೊಳಗೆ ಓಡಿ
ಹೋಗುತ್ತಿದ್ದಾರೆ. ಇತ್ತೀಚೆಗೆ ದಕ್ಷಿಣ ವಿಭಾಗದಲ್ಲಿ ಡ್ರೋನ್ ಹಾರಾಟದ ಸದ್ದು ಕೇಳಿದ ತಕ್ಷಣ ಜನ ಮನೆ ಸೇರಿಕೊಳ್ಳುವ ದೃಶ್ಯವನ್ನೂ ಸೆರೆ ಹಿಡಿದಿದೆ. ಇನ್ನು ಕ್ರಿಕೆಟ್ ಬ್ಯಾಟ್ ಬಿಸಾಡಿ ಮನೆಯೊಳಗೆ ಓಡುವ ದೃಶ್ಯ ದಾಖಲಾಗಿದೆ. ಮತ್ತೂಂದೆಡೆ ಹೊಯ್ಸಳ ವಾಹನದ ಮೈಕ್‌ಗೂ ಡ್ರೋನ್‌ಗೂ ಸಂಪರ್ಕವಿದ್ದು ಸೆರೆ ಹಿಡಿಯುವ ದೃಶ್ಯ ಹೊಯ್ಸಳ ವಾಹನದಲ್ಲೇ ಕುಳಿತು
ನಿಗಾ ಇಡುತ್ತಿರುವ ಸಿಬ್ಬಂದಿ ಕಾರಲ್ಲೇ ಕುಳಿತು, ಧ್ವನಿವರ್ಧಕಗಳ ಮೂಲಕ ಎಚ್ಚರಿಕೆ ನೀಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.