ತಮಿಳುನಾಡು ಸಮೀಪದ ಹಳ್ಳಿಗಳಲ್ಲಿ ನಿಗಾ
Team Udayavani, Apr 20, 2020, 12:54 PM IST
ಬೆಂಗಳೂರು: ಕೋವಿಡ್ ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಬೆಂಗಳೂರು ನಗರ ಜಿಪಂ ವ್ಯಾಪ್ತಿಯಲ್ಲಿ ಮನೆ ಮನೆ ಸಮೀಕ್ಷೆ ಆರಂಭವಾಗಿದೆ. ಬೆಂಗಳೂರು ನಗರ ಜಿಪಂ ವ್ಯಾಪ್ತಿಯಲ್ಲಿ
ಸುಮಾರು 96 ಗ್ರಾಪಂಗಳಿವೆ. ಕೆಲ ಹಳ್ಳಿಗಳು ನೆರೆ ತಮಿಳುನಾಡಿಗೆ ಹತ್ತಿರದಲ್ಲಿದ್ದು ಆ ಪ್ರದೇಶದಿಂದ ಕರ್ನಾಟಕದ ಭಾಗದ ಹಳ್ಳಿಗಳಿಗೆ ಬಾರದ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಲಾಗಿದ್ದು, ಈ ಬಗ್ಗೆ ಆಯಾ ಹಳ್ಳಿಗಳಲ್ಲಿ ಹೊರಗಿನಿಂದ ಬಂದ ವರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತದೆ. ಈ ಎಲ್ಲಾ ಗ್ರಾಪಂಗಳಲ್ಲೂ ಸಮುದಾಯಕ್ಕೆ ಕೋವಿಡ್ ಹರಡದ ರೀತಿಯಲ್ಲಿ ಸರ್ಕಾರ ಹಲವು ಕ್ರಮ ರೂಪಿಸಿದ್ದು ಇದರಲ್ಲಿ ಗ್ರಾಮ ಮಟ್ಟದ ಸಮುದಾಯ ಸರ್ವೇಕ್ಷಣೆಯೂ ಒಂದಾಗಿದೆ. ಸೋಂಕಿತರ ಸಂಖ್ಯೆ ನಗರ ಪ್ರದೇಶದಲ್ಲಿ ಅಧಿಕ. ಇದು ಗ್ರಾಮಾಂತರ ಪ್ರದೇಶ ದವರೆಗೂ ಹೋಗಬಾರದೆಂಬ ನಿಟ್ಟಿನಲ್ಲಿ ಸರ್ಕಾರ ಈ ಕಾರ್ಯಕ್ಕೆ ಮುಂದಾಗಿದೆ. ಬೆಂ.ನಗರ ಜಿಪಂ ವ್ಯಾಪ್ತಿಯ ಎಲ್ಲಾ ಗ್ರಾಪಂ ಮಟ್ಟದ ಹಳ್ಳಿಗಳಲ್ಲಿ ಮನೆ-ಮನೆ ಸಮೀಕ್ಷೆ ನಡೆದಿದೆ. ಈ ಸಂಬಂಧ ಗ್ರಾಮ ಮಟ್ಟದಲ್ಲಿ ತಂಡ ರಚನೆ ಮಾಡಲಾಗಿದೆ. ಪ್ರತಿ ಹಳ್ಳಿಯ ಮನೆಗೆ ಭೇಟಿ ನೀಡಲಿರುವ ತಂಡ ಮನೆಯ ಎಲ್ಲಾ ಸದಸ್ಯರ ಜ್ವರ ಸಮೀಕ್ಷೆ ನಡೆಸಲಿದೆ.
ಪ್ರತಿ ದಿನ ಸಂಜೆ 3ಕ್ಕೆ ವರದಿ: ಸಮೀಕ್ಷೆ ವೇಳೆ ಜ್ವರ, ಕೆಮ್ಮು ಸೇರಿ ಮತ್ತಿತರ ಲಕ್ಷಣ ಕಂಡು ಬಂದರೆ ಸ್ಥಳೀಯ ಜ್ವರ ತಪಾಸಣಾ ಸ್ಥಳಕ್ಕೆ ಕಳುಹಿಸಲಿದೆ. ಹಾಗಾಗಿ ಈ ತಂಡ ಪ್ರತಿ ದಿನ
ಸಂಜೆ 3 ಗಂಟೆಯೊಳಗೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಾಹಿತಿ ನೀಡಲಿದೆ ಎಂದು ಬೆಂಗಳೂರು ನಗರ ಜಿಪಂನ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಮಿತಿಯಲ್ಲಿ ಯಾರಿರುತ್ತಾರೆ?
ಗ್ರಾಮಮಟ್ಟದ ತಂಡದಲ್ಲಿ ಗ್ರಾಮ ಮಟ್ಟದ ಆಶಾ- ಅಂಗನವಾಡಿ ಕಾರ್ಯಕರ್ತೆ, ಶಿಕ್ಷಕರು ಸದಸ್ಯರಾಗಿರುತ್ತಾರೆ. ಕಿರಿಯ ಆರೋಗ್ಯ ಸಹಾಯಕರು ತಂಡದ ಮೇಲುಸ್ತುವಾರಿ ಆಗಿದ್ದಾರೆ. ಹಾಗೆಯೇ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿ ಈ ತಂಡ ರಚನೆ ಮಾಡಲಿದ್ದಾರೆ. ಆಗತ್ಯ ಬಿದ್ದಲ್ಲಿ ಆರೋಗ್ಯಾಧಿಕಾರಿ ತಂಡದ ಸದಸ್ಯರಿಗೆ ತರಬೇತಿ ನೀಡಬಹುದಾಗಿದೆ.
ಕೊರೊನಾ ಪತ್ತೆ ಹಚ್ಚುವ ನಿಟ್ಟಿನಲ್ಲಿ ಮನೆ ಮನೆ ಸಮೀಕ್ಷೆ ನಡೆದಿದೆ. ಆನೇಕಲ್ ತಾಲೂಕಿನ ಕೆಲವು ಹಳ್ಳಿಗಳು ತಮಿಳುನಾಡಿಗೆ ಹತ್ತಿರದಲ್ಲಿದ್ದು ಹೊರಗಿನಿಂದ ಬಂದಿರುವವರ ಬಗ್ಗೆಯೂ ಮಾಹಿತಿ ಕಲೆ ಹಾಕುವ ಕೆಲಸ ನಡೆಡಿದೆ.
ಡಾ.ಸತೀಶ್, ಪ್ರಾಥಮಿಕ ಆರೋಗ್ಯ ಕೇಂದ್ರ ಮರಸೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್
Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ
Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?
Bengaluru: ಕ್ಯಾಬ್ ಡಿಕ್ಕಿ;ಬುಲೆಟ್‌ನಲ್ಲಿ ತೆರಳುತ್ತಿದ್ದ ಸಾಫ್ಟ್ವೇರ್ ಎಂಜಿನಿಯರ್ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.