ಟಿ.ವಿ.ಯ ಅಕ್ಕಪಕ್ಕ ಚೂಪಾದ ವಸ್ತುಗಳು ಇಲ್ಲದಂತೆ ಎಚ್ಚರಿಕೆ ವಹಿಸಿ
ಉಪಕರಣಗಳ ದೀರ್ಘ ಬಾಳಿಕೆಗೆ ಮೇಂಟೆನೆನ್ಸ್ ಟಿಪ್ಸ್
Team Udayavani, Apr 20, 2020, 3:11 PM IST
ಸಾಂದರ್ಭಿಕ ಚಿತ್ರ
ಟಿ.ವಿ.
?ಟಿ.ವಿ ಆನ್ ಮಾಡಿಟ್ಟು ಮನೆಯ ಇತರೆ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಅಭ್ಯಾಸ ಹಲವರಿಗೆ ಇರುತ್ತದೆ. ಟಿ.ವಿ.ಯನ್ನು ನೋಡುವ ಅಥವಾ ಕೇಳುವ ಇರಾದೆ
ಇಲ್ಲ ಎಂದರೂ, ಟಿ.ವಿ.ಯನ್ನು ಆನ್ ಮಾಡುವುದು ವ್ಯರ್ಥ. ಟಿ.ವಿ.ಯ ಆಯುಷ್ಯ ಟಿ.ವಿ.ಗೆ ತಗುಲಬಹುದಾದ ಹಾನಿಯನ್ನು ತಡೆಯಬಹುದು. ವಿದ್ಯುತ್ ವೋಲ್ಟೇಜ್‌ನಲ್ಲಿನ ವ್ಯತ್ಯಯದಿಂದ ಎಲೆಕ್ಟ್ರಾನಿಕ್ ಉಪಕರಣಗಳು ಹಾಳಾಗುವ ಸಾಧ್ಯತೆ ಹೆಚ್ಚು. ಸಾಮಾನ್ಯವಾಗಿ, ವಿದ್ಯುತ್ ಕಡಿತಗೊಂಡು ಮತ್ತೆ ಬರುವಾಗ ವೋಲ್ಟೇಜ್ ವ್ಯತ್ಯಯವಾಗುತ್ತದೆ. ಅಲ್ಲದೆ, ಸಿಡಿಲು- ಮಿಂಚು ಬರುವ ಸಂದರ್ಭದಲ್ಲಿಯೂ ವೋಲ್ಟೇಜ್ ವ್ಯತ್ಯಯವಾಗುತ್ತದೆ.
?ಟಿ.ವಿ.ಯಲ್ಲಿ ಬ್ರೈಟ್‌ನೆಸ್, ಕಾಂಟ್ರಾಸ್ಟ್ ಸವಲತ್ತನ್ನು ಅಡ್ಜಸ್ಟ್ ಮಾಡುವ ಸವಲತ್ತು ನೀಡಲಾಗಿರುತ್ತದೆ. ನಮಗೆ ಬೇಕಾಗಿರುವಷ್ಟು ಪ್ರಖರತೆಯನ್ನು ನಾವು ಅಡ್ಜಸ್ಟ್
ಮಾಡಿಕೊಳ್ಳಬಹುದು. ಕಡಿಮೆ ಬ್ರೈಟ್‌ನೆಸ್ ಮತ್ತು ಕಾಂಟ್ರಾಸ್ಟ್ ಅನ್ನು ಸೆಟ್ ಮಾಡುವುದರಿಂದ ಕಣ್ಣಿಗೂ ಹಿತ. ಟಿ.ವಿ.ಯ ಜೀವಿತಾವಧಿಯೂ ಹೆಚ್ಚುವುದು.
??ಟಿ.ವಿ.ಯನ್ನು ಗೂಡಿನಂಥ ಜಾಗದಲ್ಲಿ ಇಡುವುದಕ್ಕಿಂತ ವಿಶಾಲವಾದ, ತೆರೆದಂಥ ಜಾಗದಲ್ಲಿಟ್ಟರೆ ಒಳ್ಳೆಯದು. ಗಾಳಿಯಾಡುವ ಜಾಗದಲ್ಲಿಡುವುದರಿಂದ ಟಿ.ವಿ.ಯ ಆರೋಗ್ಯಕ್ಕೆ ಹಲವು ಉಪಯೋಗಗಳಿವೆ. ಟಿ.ವಿ.ಯನ್ನು ನಾವೆಲ್ಲರೂ ದಿನದ ಬಹುತೇಕ ಸಮಯ ಆನ್ ಮಾಡಿರುತ್ತೇವೆ. ಇದರಿಂದಾಗಿ, ಟಿ.ವಿ.ಯಲ್ಲಿ ಶಾಖ
ಉತ್ಪಾದನೆಯಾಗುತ್ತದೆ. ಗಾಳಿಯಾಡುವ ಸ್ಥಳದಲ್ಲಿಡುವುದರಿಂದ, ಶಾಖ ಹೀರಲ್ಪಟ್ಟು, ಟಿ.ವಿ. ಕೂಲ್ ಆಗಲು ಸಹಾಯವಾಗುತ್ತದೆ.
?ಟಿ.ವಿ.ಯ ಅಕ್ಕಪಕ್ಕ ಚೂಪಾದ ವಸ್ತುಗಳು ಇಲ್ಲದಂತೆ ಎಚ್ಚರಿಕೆ ವಹಿಸಿ. ಇಲ್ಲದೇ ಹೋದಲ್ಲಿ ಆ ವಸ್ತುಗಳಿಂದ ರಿಪೇರಿ ಮಾಡಲಾಗದ ಹಾನಿಯನ್ನು ಉಂಟುಮಾಡಬಹುದು.
ಇಂದಿನ ಎಲ್ಸಿ.ಡಿ ಟಿ.ವಿ. ಮಾನಿಟರ್ ಪರದೆಗಳು ಬಹಳ ತೆಳುವಾಗಿರುತ್ತದೆ. ಇವುಗಳು ಸೂಕ್ಷ್ಮವಾಗಿದ್ದು, ಗ್ರತೆಯಿಂದ
ಮೆಂಟೇನ್ ಮಾಡಬೇಕಾಗುತ್ತದೆ.
?ಟಿ.ವಿ.ಯನ್ನು ಆಗಾಗ್ಗೆ ಶುಚಿಗೊಳಿಸಿ. ಧೂಳು ಅಥವಾ ಇನ್ಯಾವುದೇ ಕಲೆ ನಿಲ್ಲುವುದರಿಂದ ಪರದೆ ಮೇಲೆ ಕಾಣಿಸುವ ದೃಶ್ಯಾವಳಿ ಮಸುಕಾಗಬಹುದು, ಪರದೆಯ ಗುಣಮಟ್ಟ ಕಡಿಮೆಯಾಗಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.