ಮೊಬೈಲ್ ಹಾಟ್‌ಸ್ಪಾಟ್ ಟಿಪ್ಸ್
Team Udayavani, Apr 20, 2020, 5:12 PM IST
ಸಾಂದರ್ಭಿಕ ಚಿತ್ರ
ಈ ಸಮಯದಲ್ಲಿ ಕಚೇರಿ ಕೆಲಸಗಳಿಗೆ ಇಂಟರ್‌ನೆಟ್ ಅವಶ್ಯವಾಗಿ ಬೇಕಾಗಿದೆ. ಮನೆಯಲ್ಲಿ ಬ್ರಾಡ್ ಬ್ಯಾಂಡ್ ಇಂಟರ್‌ನೆಟ್ ಸೌಲಭ್ಯ ಇರಬಹುದು, ಪೋರ್ಟೆಬಲ್ ವೈಫೈ ಇರಬಹುದು. ಇದು ಹೈಸ್ಪೀಡ್ ಇಂಟರ್‌ನೆಟ್ ಒದಗಿಸುತ್ತದೆ. ಇನ್ನು ಮೊಬೈಲ್ ಹಾಟ್‌ಸ್ಪಾಟ್ ಅನ್ನು ಕೂಡಾ ಕಚೇರಿ ಕೆಲಸಗಳಿಗೆ ಬಳ ಸಿಕೊಳ್ಳಬಹುದು. ಇಂದು ಮೊಬೈಲ್ ಡಾಟಾ ಪ್ಲ್ಯಾನುಗಳು ಭರ್ಜರಿ ಡಾಟಾ ಒದಗಿಸುವುದರಿಂದ, ಮೊಬೈಲನ್ನೂ ಲ್ಯಾಪ್‌ಟಾಪಿಗೆ ಅಥವಾ ಡೆಸ್ಕ್ ಟಾಪಿಗೆ ಕನೆಕ್ಟ್ ಮಾಡಿ ಇಂಟರ್‌ನೆಟ್ ಸೇವೆ ಹೊಂದಬಹುದಾಗಿದೆ. ಮೊಬೈಲ್ ಹಾಟ್‌ಸ್ಪಾಟ್ ಬಳಸಿ ಕೆಲಸ ಮಾಡುವಾಗ, ಕೆಲ ಸೂಚನೆಗಳನ್ನು ಅನುಸರಿಸಿದ್ದರೆ, ಹಾಟ್‌ಸ್ಪಾಟ್ ಸವಲತ್ತಿನ ಅಧಿಕ ಉಪಯೋಗ ಪಡೆದುಕೊಳ್ಳಬಹುದು.
?ಮೊಬೈಲನ್ನು ಕಂಪ್ಯೂಟರ್ ಸನಿಹವೇ ಇರಿಸಿ. ಜೊತೆಗೆ ಅವೆರಡರ ನಡುವೆ ಹೆಚ್ಚಿನ ಅಡೆತಡೆಗಳಿಲ್ಲದಂತೆ ಎಚ್ಚರಿಕೆ ವಹಿಸಿ. ಇದರಿಂದ ಕಂಪ್ಯೂಟರ್ ಸದಾ ಮೊಬೈಲ್ ಹಾಟ್‌ಸ್ಪಾಟ್ ವ್ಯಾಪ್ತಿಯೊಳಗೇ ಬರುತ್ತದೆ. ಅಲ್ಲದೆ, ಅದರ ಸಿಗ್ನಲ್‌ಗಳು ಸರಾಗವಾಗಿ ಕಂಪ್ಯೂಟರನ್ನು ತಲುಪುವುದು ಸಾಧ್ಯವಾಗುತ್ತದೆ.
??ಕೆಲ ಮೊಬೈಲುಗಳಲ್ಲಿ ಹಾಟ್ ಸ್ಪಾಟ್ ರೇಂಜನ್ನು ನಿಯಂತ್ರಿಸುವ ಸವಲತ್ತನ್ನು ನೀಡಲಾಗಿರುತ್ತದೆ. ಮೊಬೈಲನ್ನು ಕಂ ಪ್ಯೂಟರ್ ಸನಿಹವೇ ಇರಿಸುವುದರಿಂದ, ಹೆಚ್ಚಿನ ವ್ಯಾಪ್ತಿಯನ್ನು ಹಾಟ್‌ಸ್ಪಾಟ್ ಇಂಟರ್‌ನೆಟ್ ಕವರ್ ಮಾಡುವ ಅಗತ್ಯ ಇರುವುದಿಲ್ಲ. ಹೀಗಾಗಿ, ಅದರ ರೇಂಜನ್ನು ಕಡಿಮೆ ಮಾಡುವುದರಿಂದಲೂ ಉತ್ತಮ ಇಂಟರ್‌ನೆಟ್ ಸಂಪರ್ಕ ಹೊಂದಬಹುದು. ಇದರ ಉಪಯೋಗವೆಂದರೆ ಮೊಬೈಲಿನ ಬ್ಯಾಟರಿ ದೀರ್ಘ ಕಾಲ ಬರುತ್ತದೆ.
?ನೀವು ಯಾವ ಸ್ಥಳದಲ್ಲಿ ಮೊಬೈಲನ್ನು ಇರಿಸುತ್ತೀರೋ ಅಲ್ಲಿ ಎಲ್.ಟಿ.ಇ. ಕವರೇಜ್ ಇದೆಯಾ ಎಂಬುದನ್ನು ಚೆಕ್ ಮಾಡಿಕೊಂಡರೆ ಚೆನ್ನ. ಮೊಬೈಲ್ ಪರದೆ ಮೇಲೆ ಮೇಲ್ಗಡೆ ಸಿಗ್ನಲ್ ಸೂಚಕದ ಬಳಿ 4ಜಿ/ ಎಲ್.ಟಿ.ಇ. ಎಂಬ ಸಂಕೇತ ಕಂಡು ಬಂದರೆ ಆ ಜಾಗದಲ್ಲಿ 4ಜಿ ಕವರೇಜ್ ಇದೆ ಎಂದರ್ಥ. ಆಗ ಹೈ ಸ್ಪೀಡ್ ಇಂಟರ್‌ನೆಟ್ ಪಡೆಯಬಹುದು.
?ಮೊಬೈಲಿನಲ್ಲಿ ಕೆಲ ಆ್ಯಪ್ ಗಳು ಬ್ಯಾಕ್ ಗ್ರೌಂಡ್‌ನಲ್ಲಿ ಕಾರ್ಯಾಚರಿಸುತ್ತಿರುತ್ತವೆ. ಲೊಕೇಷನ್ ಬೇಸ್ಡ್ ಆ್ಯಪ್‌ಗಳು, ಸೋಷಿಯಲ್ ಮೀಡಿಯಾ ಆ್ಯಪ್‌ಗ್ಳು, ಇಮೇಲ್ ಮುಂತಾದ ಆ್ಯಪ್‌ಗಳು ನಮಗೆ ಗೊತ್ತಿಲ್ಲದಂತೆಯೇ ಇಂಟರ್‌ನೆಟ್ ಅನ್ನು ಬಳಸುತ್ತಿರುತ್ತವೆ. ಹೀಗಾಗಿ ಆ ಆ್ಯಪ್‌ಗಳು ಕಡಿಮೆ ಇಂಟರ್‌ನೆಟ್ ಬಳಸುವಂತೆ ಸೆಟ್ಟಿಂಗ್ಸ್ ನಲ್ಲಿ ನಿಯಂತ್ರಿಸ ಬಹುದು. ಇಲ್ಲದೇ ಹೋದಲ್ಲಿ, ಆಯಾ ಬ್ಯಾಕ್ ಗ್ರೌಂಡ್ ಆ್ಯಪ್‌ಗ್ಳನ್ನು ತಾತ್ಕಾಲಿಕವಾಗಿ ಡಿಸೇಬಲ್ ಮಾಡಬಹುದು. ಇದರಿಂದ ಅವು ಬ್ಯಾಕ್‌ಗ್ರೌಂಡಿನಲ್ಲಿ ಕಾರ್ಯಾಚರಿಸುವುದಿಲ್ಲ. ಆ ಮೂಲಕ ಇಂಟರ್‌ನೆಟ್ ಸ್ಪೀಡ್ ಹೆಚ್ಚುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಪದವು ಜಂಕ್ಷನ್- ಶರ್ಬತ್ ಕಟ್ಟೆ ರಸ್ತೆಗೆ ಅಗತ್ಯವಿದೆ ಫುಟ್‌ಪಾತ್
Padil: ಡಿಸಿ ಕಚೇರಿ ಸಂಕೀರ್ಣಕ್ಕೆ ಚಿನ್ನದ ಬಣ್ಣದ ರಾಷ್ಟ್ರ ಲಾಂಛನ
Uppunda: ಪಾಳು ಕೆರೆ ಈಗ ಈಜುಕೊಳ!; ಚೌಂಡಿ ಕೆರೆಗೆ ಊರಿನ ಯುವಕರಿಂದ ಕಾಯಕಲ್ಪ
Bajpe: ತಂಗುದಾಣ ತೆರವು, ಪ್ರಯಾಣಿಕರು ಅನಾಥ!
Perfect: ಎಡ್ ಶಿರನ್ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್ ಆದ ಉಡುಪಿಯ ಹುಡುಗ | Video
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.