ಲಾಕ್‌ಡೌನ್ ಮಾಡದ ಸ್ವೀಡನ್‌ಗೆ ವಿದೇಶಿಗರ ಚಿಂತೆ
Team Udayavani, Apr 20, 2020, 6:05 PM IST
ಮಣಿಪಾಲ: ಸ್ವೀಡನ್ ಅತೀ ಹೆಚ್ಚು ವಿದೇಶಿಗರು ವಾಸವಾಗಿರುವ ಪ್ರದೇಶ. ಇಲ್ಲಿನ ಜನರು ಈಗ ಕೋವಿಡ್ ವೈರಸ್‌ನ ತಡೆಗಟ್ಟುವ ಅಸಮರ್ಪಕ ಕ್ರಮದಿಂದಾಗಿ ಸಮಸ್ಯೆ ಎದುರಿಸುತ್ತಿದ್ದಾರೆ. ಅಸಮರ್ಪಕಗೊಳ್ಳಲು ವಿದೇಶಿ ಪ್ರಜೆಗಳ ಇರುವಿಕೆ ಒಂದು ಸವಾಲಾಗಿ ಪರಿಣಮಿಸಿದೆ. ಕೆಲವು ಸಮುದಾಯದಲ್ಲಿ ಕೋವಿಡ್ ವೈರಸ್ ಬ್ಲೆ„ಂಡ್ ಸ್ಪಾಟ್ ಆಗಿ ಪರಿಣಮಿಸಿದೆ ಎಂದು ದೇಶದ ಸಾರ್ವಜನಿಕ ಆರೋಗ್ಯ ಸಂಸ್ಥೆ ತಿಳಿಸಿದೆ. ಸ್ವೀಡನ್‌ನಲ್ಲಿ 13 ಸಾವಿರಕ್ಕಿಂತ ಹೆಚ್ಚು ಕೋವಿಡ್ ಪ್ರಕರಣಗಳು ಕಂಡು ಬಂದಿದ್ದು, ಶೇ. 40ರಷ್ಟು ಪ್ರಕರಣಗಳು ಸ್ಟಾಕ್‌ಹೋಮ್‌ನಲ್ಲಿ ದಾಖಲಾಗಿದೆ.ಈ ಪ್ರದೇಶಗಳಲಿನ ಸರಾಸರಿ ಶೇ. 74ರಷ್ಟು ಜನರು ವಲಸೆ ಹಿನ್ನೆಲೆ ಹೊಂದಿದ್ದಾರೆ. ಅಂದರೆ ಅವರು ಅಥವಾ ಪೋಷಕರು ಇಬ್ಬರೂ ವಿದೇಶದಲ್ಲಿ ಜನಿಸಿದ್ದರು. ಈ ಕಾರಣಕ್ಕೆ ಸ್ಥಳೀಯ ಅಧಿಕಾರಿಗಳು ಈ ಪ್ರದೇಶಗಳಲ್ಲಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ವಿಶೇಷ ಎಂದರೆ ಸ್ವೀಡಿಷ್ ಹೊರತುಪಡಿಸಿ ಉಳಿದ 26 ಭಾಷೆಗಳಲ್ಲಿ ಅಧಿಕಾರಿಗಳು ಸರ್ವೆ ನಡೆಸುತ್ತಿದ್ದಾರೆ. ರಷ್ಯನ್, ಫಿನ್ನಿಷ್, ಅರೇಬಿಕ್, ಟಿಗ್ರಿನ್ಯಾ, ಸೊಮಾಲಿ ಮತ್ತು ಪರ್ಷಿಯನ್ ಜನರಿದ್ದಾರೆ.
ಯುರೋಪಿನ ಬೇರೆಡೆ ಕಂಡು ಬರುವ ಕಠಿನ ಲಾಕ್‌ಡೌನ್‌ಗಳನ್ನು ಸ್ವೀಡನ್ ದೇಶ ಪಾಲಿಸುತ್ತಿಲ್ಲ. ಆದರೆ ನಾಗರಿಕರು ತಮ್ಮ ಹೊಣೆಯನ್ನು ತೆಗೆದುಕೊಳ್ಳಬೇಕು. ಸಾಮಾಜಿಕ ದೂರವನ್ನು ಅಭ್ಯಾಸ ಮಾಡಬೇಕೆಂದು ಅಧಿಕಾರಿಗಳು ಒತ್ತಾಯಿಸಿ¨ªಾರೆ. ಈಗಾಗಲೇ 50ಕ್ಕೂ ಹೆಚ್ಚು ಜನರು ಗುಂಪು ಕೂಡುವಂತಿಲ್ಲ ಎಂದು ಸೂಚಿಸಿದ್ದಾರೆ. ಆದರೆ ಅಂಗಡಿಗಳು, ಬಾರ್‌ಗಳು ಮತ್ತು ರೆಸ್ಟೋರೆಂಟ್‌ಗಳನ್ನು ಮುಚ್ಚಲಾಗಿಲ್ಲ. ಶಾಲೆಗಳು ಎಂದಿನಂತೆ ತೆರೆದಿವೆ. ಮಾರ್ಚ್ ಅಂತ್ಯದಲ್ಲಿ ಸ್ಟಾಕ್ ಹೋಮ್‌ನಲ್ಲಿ ಸಂಭವಿಸಿದ 15 ಸಾವುಗಳಲ್ಲಿ ಆರು ಮಂದಿ ಸೊಮಾಲಿ ಮೂಲದ ಜನರು ಎಂದು ವರದಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Drama ಬಿಟ್ಟು ಅಂಬೇಡ್ಕರ್ ಅವರಿಗೆ ನಿರಂತರ ಅವಮಾನ ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಲಿ
You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್
UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.