ಕಾಪು ಶಾಸಕರಿಂದ ಆಹಾರ ಸಾಮಗ್ರಿ ವಿತರಣೆ
Team Udayavani, Apr 21, 2020, 4:46 AM IST
ಶಿರ್ವ: ಮಟ್ಟಾರು ವಿಶ್ವ ಹಿಂದು ಪರಿಷದ್ ಮತ್ತು ಬಜರಂಗ ದಳ ಶಿರ್ವ, ಮಾತೃಶಕ್ತಿ ಮಟ್ಟಾರು, ಕೈವಲ್ಯ ಫ್ರೆಂಡ್ಸ್ ನೇತೃತ್ವದಲ್ಲಿ ದಾನಿ ಗಳ ಸಹಯೋಗದೊಂದಿಗೆ ಕೋವಿಡ್ 19 ಲಾಕ್ಡೌನ್ ನಿಂದಾಗಿ ತೊಂದರೆ ಗೊಳ ಗಾದ ಮಟ್ಟಾರು, ಬೆಳಂಜಾಲೆ, ಮಾಣಿ ಬೆಟ್ಟು, ಪರಿಸರದ 200 ಕುಟುಂಬಗಳಿಗೆ ಅಗತ್ಯವಿರುವ ದಿನಸಿ ಹಾಗೂ ಪಡಿತರ ವಸ್ತುಗಳ ಕಿಟ್ಗಳ ವಿತರಣೆಗೆ ಕಾಪು ಕ್ಷೇತ್ರದ ಶಾಸಕ ಲಾಲಾಜಿ ಆರ್. ಮೆಂಡನ್ ಶನಿವಾರ ಚಾಲನೆ ನೀಡಿದರು.
ಸಾಮಾಜಿಕ ಅಂತರವಿರಿಸಿ ಅರ್ಹರಿಗೆ ಕಿಟ್ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಬಿಜೆಪಿ ಕಾಪು ಕ್ಷೇತ್ರಾಧ್ಯಕ್ಷ ಶ್ರೀಕಾಂತ್ ನಾಯಕ್, ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷೆ ವಾರಿಜಾ ಪೂಜಾರ್ತಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನಂತಪದ್ಮನಾಭ ನಾಯಕ್, ಗ್ರಾಮ ಕರಣಿಕ ವಿಜಯ್, ಗ್ರಾ.ಪಂ. ಸದಸ್ಯರಾದ ಸುರೇಶ ನಾಯಕ್, ಆಶಾ ಆಚಾರ್ಯ, ವಿನೋದಾ ಪೂಜಾರ್ತಿ, ಗೋಪಾಲ ಆಚಾರ್ಯ, ಪ್ರವೀಣ್ ಪೂಜಾರಿ, ರಮೇಶ ಪೂಜಾರಿ, ರಾಜೇಶ್ ಕುಲಾಲ್, ಸಾಮಾಜಿಕ ಕಾರ್ಯಕರ್ತ ಗಿರಿಧರ್ ಪ್ರಭು ಶಿರ್ವ, ವಿಶ್ವಹಿಂದು ಪರಿಷದ್ ಕಾಪು ಪ್ರಖಂಡ ಕಾರ್ಯದರ್ಶಿ ಜಯಪ್ರಕಾಶ್ ಪ್ರಭು, ಮಟ್ಟಾರು ಘಟಕಾಧ್ಯಕ್ಷ ಪ್ರಕಾಶ್ ಶೆಟ್ಟಿ, ಬಿಜೆಪಿ ಕಾಪು ಹಿಂದುಳಿದ ಮೋರ್ಚಾ ಅಧ್ಯಕ್ಷ ಸಂತೋಷ್ ಕುಮಾರ್, ವಿಜಯ ಪೂಜಾರಿ, ಜಗದೀಶ ಆಚಾರ್ಯ, ರಂಜಿತ್ ಶೆಟ್ಟಿ, ಶೈಲೇಶ್ ನಾಯಕ್, ಸುನಿಲ್, ನಿತೇಶ್ ಶೆಟ್ಟಿ, ಸಂದೀಪ್ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.