ಸಾಮಾಜಿಕ ಅಂತರದಲ್ಲೇ ಮೀನು ಮಾರಾಟ
Team Udayavani, Apr 21, 2020, 4:04 AM IST
ಕುಂದಾಪುರ: ಇಲ್ಲಿನ ಸಂಗಂ ಬಳಿ ಮೀನು ಮಾರಾಟ ಸ್ಥಳದಲ್ಲಿ ರವಿವಾರ ಜನಜಂಗುಳಿ ಸೇರಿ ಗೊಂದಲ ಉಂಟಾದ ಕಾರಣ ಸಹಾಯಕ ಕಮಿಷನರ್,ಎಎಸ್ಪಿ ಅವರ ಸೂಚನೆಯಂತೆ ಎಸ್ಐ ಅವರು ಪುರಸಭೆ ಮೂಲಕ ರವಿವಾರ ರಾತ್ರಿ ಸಾಮಾಜಿಕ ಅಂತರ ಕಾಪಾಡಲು ವ್ಯವಸ್ಥೆ ಮಾಡಿದ್ದರು.
ಸೋಮವಾರ ಹೊಸ ವ್ಯವಸ್ಥೆಯಲ್ಲಿ ಮೀನು ಮಾರಾಟ ನಡೆಯಿತು. ಹೊಸ ಪ್ರದೇಶದಲ್ಲಿ ಮೀನು ಮಾರಾಟಕ್ಕೆ ಅನುವು ಮಾಡಿ ಕೊಡಲು ಸ್ಥಳ ಪರಿಶೀಲನೆ ನಡೆಸಲಾಯಿ ತಾದರೂ ಎಲ್ಲೂ ಸರಿಯಾದ ಜಾಗ ದೊರೆತಿರಲಿಲ್ಲ. ಆದ್ದರಿಂದ ಈಗ ಮಾರಾಟ ಮಾಡುತ್ತಿರುವಲ್ಲೇ ಸೂಕ್ತ ವ್ಯವಸ್ಥೆ ಮಾಡಲಾಯಿತು. ಜನ ದೈಹಿಕ ಅಂತರ ಕಾಯ್ದು ಕೊಂಡು ಮೀನು ಖರೀದಿ ನಡೆಸಿದರು.
ರಸ್ತೆ ಬದಿ ಮೀನು ಮಾರಾಟ ಮಾಡುತ್ತಿರುವವರಿಗೆ ಈ ರೀತಿ ವ್ಯವಸ್ಥೆ ಮೂಲಕ ಅಂತರ ಕಾಪಾಡಲು ಸೂಚಿಸಿ ದ್ದರೂ ಇನ್ನೊಂದು ಮಗ್ಗುಲಲ್ಲಿ ಮೀನು ಮಾರಾಟದ ಅಂಗಡಿಯವರು ಇಂತಹ ವ್ಯವಸ್ಥೆಗಳಿಲ್ಲದೇ ಮಾರಾಟ ಮಾಡುತ್ತಿದ್ದಾರೆ ಎಂದು ಮಾರಾಟಗಾರರು ಆರೋಪಿಸಿದ್ದಾರೆ. ಇಲ್ಲಿಯೂ ಮಂಗಳವಾರದಿಂದ ಇಂತಹ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಸಂಗಂ ಬಳಿ ಮೀನು ಮಾರಾಟ ಮಾಡುತ್ತಿದ್ದಲ್ಲಿಗೆ ಸಹಾಯಕ ಕಮಿಷನರ್ ಕೆ. ರಾಜು ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ಜನಸಂದಣಿ ಸೇರದಂತೆ ನೋಡಿಕೊಳ್ಳಲು ಪೊಲೀಸರಿಗೆ ಸೂಚನೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
IRCTC Down: ತಾಂತ್ರಿಕ ದೋಷ- ರೈಲು ಟಿಕೆಟ್ ಬುಕ್ಕಿಂಗ್ ಸಮಸ್ಯೆ-ಪ್ರಯಾಣಿಕರ ಆಕ್ರೋಶ
Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…
Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
Tragic: ಮದುವೆ ಹರಕೆ ಹೊತ್ತು ಘಾಟಿ ದೇಗುಲಕ್ಕೆ ಬಂದಿದ್ದ ಯುವತಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.