ದೇಶವನ್ನು ಕಾಡುತ್ತಿದೆ ಲಕ್ಷಣರಹಿತ ಸೋಂಕಿನ ಭೀತಿ
ಶೇ.80ರಷ್ಟು ಸೋಂಕುಪೀಡಿತರಲ್ಲಿ ಕೋವಿಡ್-19 ತಥಾಕಥಿತ ಲಕ್ಷಣಗಳೇ ಇಲ್ಲ !
Team Udayavani, Apr 21, 2020, 6:00 AM IST
ಹೊಸದಿಲ್ಲಿ: ಕೋವಿಡ್-19 ವಿರುದ್ಧ ದೇಶವು ಯಶಸ್ವಿಯಾಗಿ ಹೋರಾಡುತ್ತಿರುವ ನಡುವೆಯೇ ಹೊಸ ತಲೆನೋವೊಂದು ಆರಂಭ ವಾಗಿದೆ. ಕೋವಿಡ್-19 ಸೋಂಕಿನ ಲಕ್ಷಣಗಳು ಎಂದು ಯಾವುದನ್ನು ವೈದ್ಯರು ಗುರುತಿಸು ತ್ತಿದ್ದಾರೆಯೋ ಅವೇ ಇಲ್ಲದ ಸೋಂಕು ಪೀಡಿತರು ಪತ್ತೆ ಯಾಗುತ್ತಿರುವುದೇ ಈ ಹೊಸ ತಲೆಶೂಲೆ!
ದೇಶದ ಒಟ್ಟಾರೆ ಸೋಂಕುಪೀಡಿತರ ಪೈಕಿ ಶೇ.80ರಷ್ಟು ಮಂದಿಗೆ ಕೋವಿಡ್-19 ರೋಗದ ಯಾವುದೇ ಲಕ್ಷಣ ಕಂಡುಬಂದಿಲ್ಲ ಎಂಬ ಮಾಹಿತಿ ಬಹಿರಂಗವಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ಸೋಂಕಿನ ಮೌನ ವಾಹಕರು ಎಂದು ಗುರುತಿಸಬಹುದಾದ ಇವರು ತಮಗರಿ ವಿಲ್ಲದಂತೆಯೇ ಇತರರಿಗೂ ಸೋಂಕು ಪ್ರಸಾರ ಮಾಡುತ್ತ ಸಾಗುತ್ತಿರುವರೇ ಎಂಬ ಆತಂಕವನ್ನು ಇತ್ತೀಚೆಗೆ ಕೆಲವು ತಜ್ಞರು ವ್ಯಕ್ತಪಡಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಮೃತಪಟ್ಟ ಮಹಿಳೆಯ ಸಹಿತ ಹಲವು ಪ್ರಕರಣಗಳ ಬಳಿಕ ಈಗ ಅದು ನಿಜವಾಗಿರುವಂತೆ ತೋರುತ್ತಿದೆ. ಈಕೆಯ 23 ವರ್ಷದ ಪುತ್ರ ವಿದೇಶದಿಂದ ಬಂದವರಾಗಿದ್ದರೂ ಅವರಿಗೆ ರೋಗಲಕ್ಷಣ ಕಂಡುಬಂದಿಲ್ಲ. ಉಪ್ಪಿನಂಗಡಿ ಪ್ರಕರಣದಲ್ಲಿಯೂ ದಿಲ್ಲಿ ಪ್ರವಾಸ ಕೈಗೊಂಡಿದ್ದ ಮಧ್ಯವಯಸ್ಕ ವಕೀಲರಿಗೆ ಆರಂಭಿಕ ಪರೀಕ್ಷೆಯಲ್ಲಿ ಕೋವಿಡ್-19 ನೆಗೆಟಿವ್ ಆಗಿತ್ತು.
ಕರ್ನಾಟಕದ ಶೇ.50 ಪ್ರಕರಣಗಳ ಸಹಿತ 10 ಪ್ರಮುಖ ರಾಜ್ಯಗಳ 3ನೇ 2ರಷ್ಟು ಸೋಂಕು ಪೀಡಿತರಲ್ಲಿ ರೋಗ ಲಕ್ಷಣವೇ ಕಂಡುಬಂದಿಲ್ಲ ಎಂದು ಸ್ವತಃ ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿ (ಐಸಿಎಂಆರ್)ಯ ವಿಜ್ಞಾನಿ ಡಾ| ರಮಣ್ ಆರ್. ಗಂಗಾಖೇಡ್ಕರ್ ತಿಳಿಸಿದ್ದಾರೆ. ಇಂಥವ ಪತ್ತೆ ಸವಾಲಾಗಿದ್ದು, ಸೋಂಕುಪೀಡಿತ ವ್ಯಕ್ತಿಗಳ ಸಂಪರ್ಕ ಹೊಂದಿ ದವರನ್ನು ಕ್ಷಿಪ್ರಗತಿಯಲ್ಲಿ ಕಂಡುಹಿಡಿದು ಪರೀಕ್ಷೆ ಗೊಳಪಡಿಸುವುದೇ ಏಕೈಕ ದಾರಿ ಎಂದಿದ್ದಾರೆ.
ಲಕ್ಷಣರಹಿತರು 45ರ ಒಳಗಿನವರು
ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆಯ ನಿರ್ದೇಶಕ ಡಾ| ಸಿ.ನಾಗರಾಜ್ ಪ್ರಕಾರ, ಉತ್ತಮ ರೋಗ ನಿರೋಧಕ ಶಕ್ತಿ ಇರುವ ಯುವ ಜನರಲ್ಲಿ ಹೆಚ್ಚಾಗಿ ಕೋವಿಡ್-19 ಸೋಂಕಿನ ಲಕ್ಷಣ ಕಂಡುಬರುವುದಿಲ್ಲ. ಅಲ್ಲದೆ, ಲಕ್ಷಣ ರಹಿತ ರೋಗಿಗಳು ಬಹುತೇಕ 20ರಿಂದ 45ರೊಳಗಿನ ವಯೋಮಾನದವರಾಗಿರುತ್ತಾರೆ. ಕೆಲವರು ಇದಕ್ಕಿಂತ ಹೆಚ್ಚು ವಯಸ್ಕರಾಗಿದ್ದರೂ ಕೆಲವು ನಿರ್ದಿಷ್ಟ ಔಷಧಗಳನ್ನು ಸೇವಿಸುವವರಾಗಿದ್ದರೆ, ಅಂಥ ವರಲ್ಲೂ ರೋಗ ಲಕ್ಷಣ ಕಂಡುಬಾರದು.
53 ಪತ್ರಕರ್ತರಿಗೆ ಸೋಂಕು
ಮಹಾರಾಷ್ಟ್ರದಲ್ಲಿ 53 ಪತ್ರಕರ್ತರಿಗೆ ಸೋಂಕು ತಗಲಿದೆ. ವಿಚಿತ್ರವೆಂದರೆ,ಇವರಲ್ಲಿ ಯಾರಿಗೂ ರೋಗ ಲಕ್ಷಣ ಕಾಣಿ ಸಿರಲಿಲ್ಲ.ದಿಢೀರನೇ ಪರೀಕ್ಷೆ ನಡೆಸಿದಾಗ ಇದು ಬಯ ಲಾಗಿದೆ. ಇದೂ ಆತಂಕಕ್ಕೆ ಕಾರಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.