ಕೊಂಕಣ ರೈಲ್ವೇ: ಅಗತ್ಯ ವಸ್ತು ಸಾಗಾಟಕ್ಕೆ ವಿಶೇಷ ರೈಲು
Team Udayavani, Apr 21, 2020, 6:15 AM IST
ಉಡುಪಿ: ದೇಶ ಲಾಕ್‌ಡೌನ್ ಆಗಿರುವ ಸಂದರ್ಭದಲ್ಲಿ ಕೊಂಕಣ ರೈಲ್ವೇಯು ಸಾರ್ವಜನಿಕರಿಗೆ ಅಗತ್ಯವಿರುವ ವಸ್ತುಗಳ ಪೂರೈಕೆಗೆ ಓಖಾ- ತಿರುವನಂತಪುರ ನಡುವೆ ವಿಶೇಷ ರೈಲನ್ನು ಓಡಿಸುತ್ತಿದೆ.
ಎ. 20ರ ಮಧ್ಯಾಹ್ನ 1.10ಕ್ಕೆ ಓಖಾದಿಂದ ಹೊರಟ (00933) ರೈಲು ಎ. 22ರ ಮಧ್ಯಾಹ್ನ 12ಕ್ಕೆ ತಿರುವನಂತಪುರಕ್ಕೆ ತಲುಪಲಿದೆ. ಎ. 22ರಂದು ತಿರುವನಂತಪುರದಿಂದ ರಾತ್ರಿ 11ಕ್ಕೆ ಹೊರಡುವ (00934) ರೈಲು ಎ. 24ರ ರಾತ್ರಿ 9.30ಕ್ಕೆ ಓಖಾ ಜಂಕ್ಷನ್ ತಲುಪಲಿದೆ.
ಓಖಾದಿಂದ ಹೊರಟ ರೈಲು ಎ. 21ರ ರಾತ್ರಿ 9.10ಕ್ಕೆ ಹಾಗೂ ತಿರುವನಂತಪುರದಿಂದ ಹೊರಟ ರೈಲು ಎ. 23ರ ಮಧ್ಯಾಹ್ನ 1.20 ಉಡುಪಿ ನಿಲ್ದಾಣಕ್ಕೆ ಬರಲಿವೆ. ಈ ಎರಡು ವಿಶೇಷ ರೈಲುಗಳು ಔಷಧಗಳು, ಮೆಡಿಕಲ್ ಸಂಬಂಧಿತ ಸರ್ಜಿಕಲ್ ಉಪಕರಣ, ಮಾವು ಹಾಗೂ ಇತರ ಹಾಳಾಗದ ವಸ್ತುಗಳನ್ನು ಸಾಗಿಸಲಿವೆ. ವಿವಿಧ ಸ್ಥಳಗಳಿಗೆ ವಸ್ತು ಸಾಗಾಟ ಮಾಡಲು ಬಯಸುವವರು ರೈಲು ನಿಲ್ದಾಣಗಳಲ್ಲಿ ಬುಕ್ ಮಾಡಬಹುದಾಗಿದೆ.
ನಿಲುಗಡೆಗಳು
ಈ ವಿಶೇಷ ರೈಲುಗಳು ಜಾಮ್‌ನಗರ್, ರಾಜ್‌ಕೋಟ್, ಸುರೇಂದ್ರನಗರ್, ಅಹ್ಮದಾಬಾದ್, ಆನಂದ್, ವಡೋದರ, ಭರೂಚ್, ಸೂರತ್, ವಸಾೖರೋಡ್, ಪನ್ವೇಲ್, ರೋಹಾ, ರತ್ನಾಗಿರಿ, ಕಂಕಾವಿÛ, ಮಡ್ಗಾಂವ್, ಉಡುಪಿ, ಮಂಗಳೂರು ಜಂಕ್ಷನ್, ಕಣ್ಣೂರು, ಕೋಯಿಕ್ಕೋಡ್, ಶೋರ್ನೂರ್, ತೃಶ್ಶೂರ್, ಎರ್ನಾಕುಲಂ ಟೌನ್, ಕೊಟ್ಟಾಯಂ ಮತ್ತು ಕೊಲ್ಲಂ ಜಂಕ್ಷನ್‌ಗಳಲ್ಲಿ ನಿಲುಗಡೆ ಹೊಂದಿರುತ್ತವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.