ಸಿದ್ಧವಾಗಲಿದೆ ಮುಂಬಯಿಯ ಮೊದಲ ಪಿಇಬಿ ಆಸ್ಪತ್ರೆ!
Team Udayavani, Apr 21, 2020, 5:58 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಕೋವಿಡ್ 19 ವೈರಸ್ ಕಟ್ಟಿಹಾಕುವ ನಿಟ್ಟಿನಲ್ಲಿ ಸಮರೋಪಾದಿ ಕ್ರಮ ಕೈಗೊಂಡ ಚೀನಾ ಹತ್ತೇ ದಿನಗಳಲ್ಲಿ ಆಸ್ಪತ್ರೆ ನಿರ್ಮಿಸಿತ್ತು.
ಇದರಿಂದ ಪ್ರಭಾವಿತವಾಗಿರುವ ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ), ಪ್ರೀ ಎಂಜಿನೀರ್ಡ್ ಬಿಲ್ಡಿಂಗ್ (ಪಿಇಬಿ) ತಂತ್ರಜ್ಞಾನದ ಮೂಲಕ ನಗರದ ಕಸ್ತೂರಬಾ ಆಸ್ಪತ್ರೆ ಆವರಣದಲ್ಲಿ ಮೂರು ಮಹಡಿಗಳ ಕೋವಿಡ್ ಐಸೊಲೇಶನ್ ಕಟ್ಟಡ ನಿರ್ಮಿಸಲು 90 ದಿನಗಳ ಗಡುವು ಹಾಕಿಕೊಂಡಿದೆ.
ಏನಿದು ಪಿಇಬಿ?
ಪಿಇಬಿ ಎಂದರೆ ಪೂರ್ವ ವಿನ್ಯಾಸಿತ ಕಟ್ಟಡ. ಮೊದಲು ಕಟ್ಟಡ ನಕ್ಷೆ ತಯಾರಿಸಿ, ಯಾವ ಗೋಡೆ ಎಷ್ಟು ಉದ್ದ, ಎತ್ತರ ಇರಬೇಕು, ಎಷ್ಟು ಕಿಟಿಕಿ ಮತ್ತು ಬಾಗಿಲುಗಳು ಬೇಕು ಎಂದು ನಿರ್ಧರಿಸಿ, ಫ್ಯಾಕ್ಟರಿಯೊಂದರಲ್ಲಿ ಅವುಗಳನ್ನು ಸಿದ್ಧಪಡಿಸಲಾಗುತ್ತದೆ. ಬಳಿಕ ಅವುಗಳನ್ನು ನಿರ್ಮಾಣ ಸ್ಥಳಕ್ಕೆ ತಂದು ನಟ್, ಬೋಲ್ಟ್ ಮೂಲಕ ಜೋಡಿಸಲಾಗುತ್ತದೆ.
ಆಸ್ಪತ್ರೆಯಲ್ಲಿ ಏನೆಲ್ಲ ಇರಲಿದೆ?
– ವಾರದೊಳಗೆ ಕಟ್ಟಡದ ವಿನ್ಯಾಸ . ಮೇ 1ರಿಂದ ನಿರ್ಮಾಣ ಶುರು.
– ಆಸ್ಪತ್ರೆಯು ಐಸಿಯು ಸೇರಿ 60 ಹಾಸಿಗೆಗಳನ್ನು ಹೊಂದಲಿದೆ.
– ವೈದ್ಯಕೀಯ ಪ್ರಯೋಗಾಲಯ ಮತ್ತು ಔಷಧಾಲಯ.
– ಸದ್ಯ ನಗರದ ಹೊಸ ಐಸೊಲೇಶನ್ ಕೇಂದ್ರವಾಗಲಿರುವ ಈ ಕಟ್ಟಡ, ಮುಂದೆ ಶಾಶ್ವತ ಆಸ್ಪತ್ರೆಯಾಗಲಿದೆ.
ಪಿಇಬಿ ಬಳಕೆ ಎಲ್ಲಿ ಹೆಚ್ಚು?
– ಪಿಇಬಿ ತಂತ್ರಜ್ಞಾನ ಹೆಚ್ಚು ಬಳಕೆಯಾಗುವುದು ಕೈಗಾರಿಕಾ ಕಟ್ಟಡ, ಮೆಟ್ರೋ ನಿಲ್ದಾಣ ಮತ್ತು ಗೋದಾಮುಗಳ ನಿರ್ಮಾಣದಲ್ಲಿ.
– ಇಲ್ಲಿ ಸ್ಟೈನ್‌ಲೆಸ್ ಸ್ಟೀಲ್ ಪ್ರಮುಖ ನಿರ್ಮಾಣ ಸಾಮಗ್ರಿ.
– ಈ ಕಟ್ಟಡಗಳು ಕನಿಷ್ಠ 30 ವರ್ಷ ಬಾಳಿಕೆ ಬರುತ್ತವೆ.
ಯೋಜನೆ ಸ್ಥಿತಿಗತಿ: ನಿರ್ಮಾಣ ಸ್ಥಳದಲ್ಲಿನ ಮಣ್ಣಿನ ಪರೀಕ್ಷೆ ಮುಗಿದಿದ್ದು, ವಿನ್ಯಾಸಕ್ಕಾಗಿ ಈಗಾಗಲೇ ಹರಾಜು ಕರೆಯಲಾಗಿದೆ. ಐಐಟಿ ಮತ್ತು ಬಿಎಂಸಿ ಎಂಜಿನಿಯರುಗಳು ವಿನ್ಯಾಸಗಳನ್ನು ಪರಿಶೀಲಿಸಲಿದ್ದಾರೆ.
ಕಟ್ಟಡ ನಿರ್ಮಾಣಕ್ಕೆ ವಿಧಿಸಿಕೊಂಡ ಗಡುವು: 90ದಿನ
ಹೊಸ ಆಸ್ಪತ್ರೆಯಲ್ಲಿ ಇರಲಿರುವ ವಾರ್ಡ್‌ಗಳು: 60
ಸಾಮಾನ್ಯ ವಾರ್ಡ್ ಗಳಲ್ಲಿನ ಹಾಸಿಗೆಗಳು: 47
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ
NCB ನಿರಂತರ ಕಾರ್ಯಾಚರಣೆ: ಡ್ರಗ್ಸ್ ಜಾಲ ಮುರಿಯಲು ಆಪರೇಷನ್ ಸಾಗರ ಮಂಥನ
J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ
Delhi: ಮಿತಿ ಮೀರಿದ ಮಾಲಿನ್ಯ: ಟ್ರಕ್‌ಗಳ ಪ್ರವೇಶಕ್ಕೆ ನಿರ್ಬಂಧ
Maharashtra: ಕಾಂಗ್ರೆಸ್ ಸರಕಾರ ಬಂದರೆ ಮುಸ್ಲಿಂ ಮೀಸಲು: ರೇವಂತ್ ರೆಡ್ಡಿ
MUST WATCH
ಹೊಸ ಸೇರ್ಪಡೆ
Kanakadasa Jayanthi ಇಂದು; ಕನಕದಾಸರ ತಣ್ತೀಗಳು ಹಿಂದೆಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.