ಕಾದಂಬರಿ ಎಂಬ ಹೆಸರು ಹೇಗೆ ಬಂತು ಗೊತ್ತಾ ?


Team Udayavani, Apr 21, 2020, 12:18 PM IST

ಕಾದಂಬರಿ ಎಂಬ ಹೆಸರು ಹೇಗೆ ಬಂತು ಗೊತ್ತಾ ?

“ನಾವೆಲ್’ ಎಂಬ ಇಂಗ್ಲಿಷ್‌ ಪದಕ್ಕೆ, ಹಿಂದಿಯಲ್ಲಿ “ಉಪನ್ಯಾಸ’ ಎಂಬ ಅರ್ಥ ನೀಡಲಾಯಿತು.

ಕಾದಂಬರಿಗೆ ಇಂಗ್ಲೀಷಿನಲ್ಲಿ ನಾವೆಲ್‌ ಅನ್ನುತ್ತಾರೆ. ಆದರೆ, ಅದು ಇಂಗ್ಲಿಷ್‌ನ ಪದವಲ್ಲ. ನಾವೆಲ್‌ ಎಂಬುದರ ಮೂಲ, ಫ್ರೆಂಚ್‌ನದ್ದು. “ಹೊಸದು’ ಎಂಬ ಅರ್ಥ ಕೊಡುವ ಲ್ಯಾಟಿನ್‌ ಪದ “ನೊವೆಲ್ಲಸ್‌’, ಇಂಗ್ಲಿಷ್‌ಗೆ ಬಂದಾಗ ನಾವೆಲ್‌ ಆಗಿದೆ. ನೊವೆಲ್ಲಸ್‌ ಅಂದರೆ, ಹೊಸ ಮಾದರಿಯ ಕಥೆ ಎಂದಷ್ಟೇ ಅರ್ಥ. ಯುರೋಪ್‌ನಲ್ಲಿ ತುಂಬಾ ಹಿಂದೆಯೇ, ಹಳೆಗಾಲದ ಕಾಲ್ಪನಿಕ ರೊಮ್ಯಾನ್ಸ್ ಕಥೆಗಳು ಸಾಕಷ್ಟಿದ್ದವು. ನಂತರದ ದಿನಗಳಲ್ಲಿ, ಅವುಗಳಿಗಿಂತ ಭಿನ್ನವಾದ ಸಾಹಿತ್ಯ ಸೃಷ್ಟಿಯಾಯಿತು. ಅದನ್ನು, “ನವೀನ ಕಥೆಗಳು’ ಎಂಬ ಅರ್ಥದಲ್ಲಿ “ನಾವೆಲ್‌’ ಎಂದು ಕರೆಯಲಾಯಿತು.

“ನಾವೆಲ್‌’ಗೆ ಇತರೆ ಭಾರತೀಯ ಭಾಷೆಗಳಲ್ಲಿ “ಕಾದಂಬರಿ’ ಎಂಬ ಹೆಸರಿಲ್ಲ. ಹಿಂದಿಯಲ್ಲಿ ಅದಕ್ಕೆ “ಉಪನ್ಯಾಸ’ ಎಂಬ ಹೆಸರಿದೆ. ಕನ್ನಡದ ಅರ್ಥದಲ್ಲಿ, ಉಪನ್ಯಾಸ ಎಂದರೆ ಭಾಷಣ ಎಂದು ಅರ್ಥ. ಆದರೆ, ಹಿಂದಿಯವರು “ನ್ಯಾಸ’ ಶಬ್ದಕ್ಕಿರುವ ರಚನೆ, ರೀತಿ ಎಂಬ ಅರ್ಥವನ್ನು ಅನುಸರಿಸಿ, ನಾವೆಲ್‌ ಎಂಬುದಕ್ಕೆ “ಉಪನ್ಯಾಸ’ ಎಂಬುದೇ ಸರಿಯಾದ ಅರ್ಥ ಎಂದು ಭಾವಿಸಿದರು. ಹಿಂದಿಯಲ್ಲಿ ಇರುವುದೇ ನಮಗೂ ಒಪ್ಪಿತ ಎಂದು ಬೆಂಗಾಲಿಯವರೂ ಹೇಳಿದರು.

ಪರಿಣಾಮ- ಹಿಂದಿ ಮತ್ತು¸ ಬೆಂಗಾಲಿಯಲ್ಲಿ, ಕಾದಂಬರಿಗೆ ಉಪನ್ಯಾಸ ಎಂದೇ ಕರೆಯಲಾಯಿತು. ಸುದೀರ್ಘ‌ ವಿವರಣೆಯ ಬರಹಕ್ಕೆ, ಕನ್ನಡದಲ್ಲಿ ಏನೆಂದು ಕರೆಯಬೇಕು ಎಂಬ ಪ್ರಶ್ನೆ ಎದುರಾದಾಗ, ನಾವೆಲ್‌ ಮತ್ತು ಉಪನ್ಯಾಸ ಎಂಬ ಎರಡೂ ಪದಗಳಿಂದ ಅರ್ಧರ್ಧ ಎತ್ತಿಕೊಂಡು “ನವನ್ಯಾಸ’ ಎಂಬ ಹೆಸರು ಸೃಷ್ಟಿಸಿದ್ದೂ ಆಯ್ತು. ಆದರೆ, ಮುಂದೆ ಗಳಗನಾಥರು, ಮರಾಠಿಯನ್ನು ಅನುಸರಿಸಿ, ಸುದೀರ್ಘ‌ ವಿವರಣೆಯ ಗದ್ಯ ಬರಹವನ್ನು- “ಕಾದಂಬರಿ’ ಎಂದೇ ಕರೆದರು. ಮುಂದೆ, ಅದೇ ಹೆಸರು ಜನಪ್ರಿಯವಾಯಿತು.

(ಆಧಾರ- ಪಾವೆಂ ಪುಸ್ತಕ )

ಟಾಪ್ ನ್ಯೂಸ್

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1-neyge-1

Udayavani-MIC ನಮ್ಮ ಸಂತೆ:ಗಮನ ಸೆಳೆದ ನೇಯ್ಗೆ ಯಂತ್ರ

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.