ಸೋಂಕಿನ ಭಯ: ಉಳಿದ ರೋಗಿಗಳೂ ಕಂಗಾಲು

ಇನ್ನಷ್ಟು ಸಾವು-ನೋವುಗಳ ಬಗ್ಗೆ ತಜ್ಞರ ಎಚ್ಚರಿಕೆ

Team Udayavani, Apr 21, 2020, 2:37 PM IST

ಸೋಂಕಿನ ಭಯ: ಉಳಿದ ರೋಗಿಗಳೂ ಕಂಗಾಲು

ಮಣಿಪಾಲ: ವಿಶ್ವದೆಲ್ಲೆಡೆ ಕೋವಿಡ್‌-19 ನಿಂದ ಸಾಕಷ್ಟು ಸಾವು ನೋವು ಸಂಭವಿಸಿರುವಾಗ ಮುಂಬರುವ ದಿನಗಳಲ್ಲಿ ಇನ್ನಷ್ಟು ಸಾವು-ನೋವುಗಳನ್ನು ಪ್ರತಿ ರಾಷ್ಟ್ರಗಳೂ ಅನುಭವಿಸಬೇಕಾದೀತು ಎಂದು ತಜ್ಞರು ಎಚ್ಚರಿಸಿದ್ದಾರೆ.

ಈ ಕುರಿತಂತೆ ವಾಷಿಂಗ್ಟನ್‌ ಪೋಸ್ಟ್‌ ವರದಿ ಮಾಡಿದ್ದು, ಹೃದಯ, ಶ್ವಾಸಕೋಶ ಮತ್ತಿತರ ರೋಗಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳೇ ಕೋವಿಡ್‌ 19 ಸೋಂಕಿತರಿಗೂ ಚಿಕಿತ್ಸೆ ನೀಡುತ್ತಿವೆ. ಹಾಗೆಯೇ ಕೆಲವು ದೇಶಗಳು ಸಂಪೂರ್ಣ ಆಸ್ಪತ್ರೆಯನ್ನೇ ಸೋಂಕಿತರ ವಾರ್ಡ್‌ಗಳನ್ನಾಗಿ ಪರಿವರ್ತಿಸಿವೆ. ಆದರೆ ಇದು ಇತರೆ ರೋಗಿಗಳ ಮೇಲೆ ಪರಿಣಾಮ ಬೀರುತ್ತಿದ್ದು, ಆಸ್ಪತ್ರೆಗೆ ತೆರಳಿದರೆ ಸೋಂಕು ಬಂದು ಬಿಟ್ಟಿàತೆಂಬ ಭಯದಿಂದ ಚಿಕಿತ್ಸೆಯನ್ನು ಮುಂದೂಡುತ್ತಿದ್ದಾರೆ.

ಇಂಥ ಒಂದು ವಿಚಿತ್ರ ಘಟನೆಗೆ ನ್ಯೂಯಾರ್ಕ್‌ನ ಆಸ್ಪತ್ರೆ ಸಾಕ್ಷಿಯಾಗಿದ್ದು, ಇಲ್ಲಿನ ಹೃದಯ ಶಸ್ತ್ರ ಚಿಕಿತ್ಸೆಯ ಘಟಕದ ಶೇ.60ರಷ್ಟು ಹಾಸಿಗೆಗಳನ್ನು ಕೋವಿಡ್‌ -19 ಸೋಂಕಿತರಿಗೆ ಮೀಸಲಿಡಲಾಗಿದೆ. ಇದರ ಪರಿಣಾಮ ಪ್ರತಿನಿತ್ಯ ಚಿಕಿತ್ಸೆಗೆಂದು ಬರುತ್ತಿದ್ದ ಹೃದ್ರೋಗಿಗಳು ಆಸ್ಪತ್ರೆಯಿಂದ ದೂರ ಉಳಿದಿದ್ದಾರೆ ಎಂದು ನ್ಯೂಯಾರ್ಕ್‌ನ ವೈದ್ಯರೊಬ್ಬರು ತಿಳಿಸಿದ್ದಾರೆ.

ಸ್ವಯಂ ಚಿಕಿತ್ಸೆಗೆ ಮುಂದಾಗುತ್ತಿದ್ದಾರೆ
ಇತ್ತೀಚೆಗೆ ಅಪೆಂಡಿಕ್ಸ್‌ ಸಮಸ್ಯೆಯಿಂದ ಬಳಲುತ್ತಿದ್ದ ದಕ್ಷಿಣ ಕೆರೊಲಿನಾದ ವ್ಯಕ್ತಿಯೊಬ್ಬರು ಸೋಂಕಿನ ಭಯದಿಂದ ವೈದ್ಯರ ಬಳಿ ತೆರಳಲು ಹಿಂಜರಿದು, ಸ್ವಯಂ ಪ್ರೇರಿತವಾಗಿ ಔಷಧ ತೆಗೆದುಕೊಂಡಿದ್ದರು. ಆದರೆ ಕೆಲ ದಿನ ಬಳಿಕ ಸಮಸ್ಯೆ ಗಂಭೀರವಾಗಿ, ವಿಪರೀತ ನೋವು ಕಾಣಿಸಿಕೊಂಡಿದೆ. ತತ್‌ಕ್ಷಣ ವೈದ್ಯರ ಭೇಟಿಗೆ ಮುಂದಾಗಿದ್ದು, ಚಿಕಿತ್ಸೆ ವೇಳೆ ಕಿಬ್ಬೊಟ್ಟೆಯ ಸ್ನಾಯುವಿನವರೆಗೂ ಸಮಸ್ಯೆಯಾಗಿತ್ತು. ಈ ಘಟನೆಯನ್ನು ಮತ್ತೂಬ್ಬ ವೈದ್ಯರು ಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾರೆ. ಸೋಂಕು ತಗುಲುತ್ತದೆ ಎಂಬ ಭಯದಿಂದ ತಾವೇ ಮನೆಯಲ್ಲಿಯೇ ಸ್ವಯಂ ಚಿಕಿತ್ಸೆಗೆ ಮುಂದಾಗುತ್ತಿದ್ದು, ವೈದ್ಯಕೀಯ ಸಲಹೆಗಳನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಶೇ.38ರಷ್ಟು ಇಳಿಕೆ
ಅಮೆರಿಕನ್‌ ಕಾಲೇಜ್‌ ಆಫ್‌ ಕಾರ್ಡಿಯಾಲಜಿಯ ಹೃದ್ರೋಗಿ ವಿಭಾಗ ತನ್ನ ನಿಯತಕಾಲಿಕೆಯಲ್ಲಿ ಈ ವಿಷಯದ ಕುರಿತಾಗಿ ಮಾಹಿತಿ ಹಂಚಿಕೊಂಡಿದೆ. ಈ ಅಧ್ಯಯನಕ್ಕೆ ದೇಶದ 9 ಪ್ರತಿಷ್ಠಿತ ಹೃದ್ರೋಗಿ ಚಿಕಿತ್ಸಾಲಯಗಳನ್ನು ಒಳಪಡಿಸಿದ್ದು, ಮಾರಾಣಾಂತಿಕ ಸಮಸ್ಯೆಗಳಿಂದ ಬಳಲುತ್ತಿರುವ ಒಟ್ಟು ರೋಗಿಗಳ ದತ್ತಾಂಶದ ಪೈಕಿ ಶೇ.38 ರಷ್ಟು ರೋಗಿಗಳು ಮಾರ್ಚ್‌ ತಿಂಗಳಿನಲ್ಲಿ ಚಿಕಿತ್ಸೆಯಿಂದ ದೂರ ಉಳಿದಿದ್ದಾರೆ ಎಂದು ಈ ಅಧ್ಯಯನ ಉಲ್ಲೇಖೀಸಿದೆ.

ಮಿಯಾಮಿ-ಜಾಕ್ಸನ್‌ ಮೆಮೋರಿಯಲ್‌ ಕಾಂಪ್ರಹೆನ್ಸಿವ್‌ ಪಾರ್ಶ್ವವಾಯು ಕಾಯಿಲೆ ಸಂಬಂಧಿಸಿದ ಕೇಂದ್ರವಾಗಿದ್ದು, ಚಿಕಿತ್ಸೆಗೆ ಬರುವ ಒಟ್ಟಾರೆ ರೋಗಿಗಳ ಪ್ರಮಾಣದಲ್ಲಿ ಶೇ.30ರಷ್ಟು ಕಡಿಮೆಯಾಗಿದೆ ಅಲ್ಲಿನ ವೈದ್ಯರು ತಿಳಿಸಿದ್ದರು.

ಜತೆಗೆ ಚಾರ್ಲ್ಸ್ಟನ್‌ನಲ್ಲಿನ ಅಪೆಂಡಿಕ್ಸ್‌ಗೆ ಸಂಬಂಧಿಸಿದ ಆಸ್ಪತ್ರೆಯಲ್ಲಿ ಶೇ.60ರಷ್ಟು ರೋಗಿಗಳು ಮಾತ್ರ ಶುಶ್ರೂಷೆಗೆ ಒಳಪಟ್ಟಿದ್ದು, ಸುಮಾರು ಶೇ.70ರಷ್ಟು ರೋಗಿಗಳು ನಿಗದಿತ ಸಮಯಕ್ಕಿಂತ ತಡವಾಗಿ ಚಿಕಿತ್ಸೆಗೆ ಬಂದಿದ್ದಾರೆ ಎನ್ನಲಾಗಿದೆ.
ಈ ಸಮಸ್ಯೆಯನ್ನು ಕೂಲಂಕುಷವಾಗಿ ಅವಲೋಕನ ಮಾಡಿರುವ ತಜ್ಞರು, ಸಂಶೋಧಕರು, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಸೋಂಕು ತಗುಲುವಿಕೆ ಭಯ ಬಿಡಬೇಕು. ಲಭ್ಯವಿರುವ ಆರೋಗ್ಯ ಸಹಾಯವಾಣಿ ಮೂಲಕ ನೆರವು ಪಡೆದು ವೈದ್ಯರ ಬಳಿ ಚಿಕಿತ್ಸೆ ತೆರಳಬೇಕೆಂದು ಸೂಚಿಸಿದ್ದು, ನಿರ್ಲಕ್ಷé ಮಾಡಿ ಅಪಾಯವನ್ನು ತಂದುಕೊಳ್ಳಬೇಡಿ ಎಂದು ವೈದ್ಯ ಸಮುದಾಯ ಎಚ್ಚರಿಸಿದೆ.

ಸಾವಿನ ದವಡೆಗೆ
ಇನ್ನು ಈ ಸಮಸ್ಯೆ ಕೇವಲ ನ್ಯೂಯಾರ್ಕ್‌ ನದಲ್ಲ. ಸ್ಪೇನ್‌, ಬ್ರಿಟನ್‌, ಚೀನದಲ್ಲೂ ಹೆಚ್ಚಾಗಿದೆ. ಕೋವಿಡ್‌-19 ನತ್ತ ಎಲ್ಲರ ಗಮನ ಕೇಂದ್ರಿಕೃತವಾಗಿದ್ದು, ಆಸ್ಪತ್ರೆಗಳ ಆರೈಕೆಯ ಅಗತ್ಯವಿರುವ ಹೃದ್ರೋಗಿ, ಪಾರ್ಶ್ವವಾಯು ಮತ್ತಿತ್ತರ ರೋಗಿಗಳು ನಿಗದಿತ ಚಿಕಿತ್ಸೆಯಿಂದ ವಂಚಿತರಾಗುತ್ತಿದ್ದಾರೆ. ಪರಿಣಾಮ ಮುಂಬರುವ ದಿನಗಳಲ್ಲಿ ಕೋವಿಡ್‌-19 ಸೋಂಕಿಗೆ ತುತ್ತಾಗಿ ಬಲಿಯಾಗುತ್ತಿರುವ ಸಂಖ್ಯೆಗಿಂತ ಹೆಚ್ಚು ಮಂದಿ ಇತರೆ ಆರೋಗ್ಯ ಸಮಸ್ಯೆಗಳಿಂದ ಅಸುನೀಗುವಂಥ ಸ್ಥಿತಿ ಇದೆ ಎಂದೂ ಸಂಶೋಧನೆಯ ವರದಿಯೊಂದು ತಿಳಿಸಿದೆ.

ಟಾಪ್ ನ್ಯೂಸ್

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್‌ ಗಂಡಸು: ಮಸ್ಕ್ ತಂದೆ

Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್‌ ಗಂಡಸು: ಮಸ್ಕ್ ತಂದೆ

Trump-musk

Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!

Mexico:ಯುರೋಪ್‌ ನ Most ವಾಂಟೆಡ್‌ ಕ್ರಿ*ಮಿನಲ್‌, ಡ್ರ*ಗ್‌ ಕಿಂಗ್‌ ಪಿನ್‌ ಮಾರ್ಕೋ ಹತ್ಯೆ

Mexico:ಯುರೋಪ್‌ ನ Most ವಾಂಟೆಡ್‌ ಕ್ರಿ*ಮಿನಲ್‌, ಡ್ರ*ಗ್‌ ಕಿಂಗ್‌ ಪಿನ್‌ ಮಾರ್ಕೋ ಹ*ತ್ಯೆ

India cuts import duty on American Bourbon Whiskey

Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ

ರಷ್ಯಾ-ಉಕ್ರೇನ್‌ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ

ರಷ್ಯಾ-ಉಕ್ರೇನ್‌ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.