ಸಿದ್ದು ವಿಪಕ್ಷ ಮುಖಂಡರ ಸಭೆ ಕರೆಯಲಿ
Team Udayavani, Apr 21, 2020, 3:56 PM IST
ಹಾಸನ: ಸರ್ಕಾರ ರೈತರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಇಂತಹ ಸಂದರ್ಭದಲ್ಲಿ ವಿರೋಧಪಕ್ಷದ ನಾಯಕ ಸಿದ್ಧರಾಮಯ್ಯ ಅವರು ಎಲ್ಲಾ ವಿಪಕ್ಷಗಳ ಮುಖ್ಯಸ್ಥರು,
ರೈತ ಸಂಘಟನೆಗಳ ಮುಖಂಡರ ಸಭೆಯನ್ನು ತುರ್ತಾಗಿ ಕರೆದು ಸರ್ಕಾರದ ಮೇಲೆ ಒತ್ತಡ ತರಲು ಮುಂದಾಗಬೇಕು ಎಂದು ಜೆಡಿಎಸ್ ಮುಖಂಡ, ಮಾಜಿ ಸಚಿವ ಎಚ್.ಡಿ.ರೇವಣ್ಣ ಒತ್ತಾಯಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಜೆಡಿಎಸ್ ಪರವಾಗಿ ಮುಖ್ಯ ಮಂತ್ರಿಯವರನ್ನು ಖುದ್ಧು ಭೇಟಿಯಾಗಿ ರೈತರು, ಬಡಜನರ ಸಂಕಷ್ಟಗಳಿಗೆ ಸ್ಪಂದಿಸು
ವಂತೆ ಮನವಿ ಮಾಡಿದೆ. ಅದರೆ ಇದುವರೆಗೂ ಮುಖ್ಯಮಂತ್ರಿ ಸ್ಪಂದಿಸಿಲ್ಲ. ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ಇದ್ದರೆ ಬಹಿರಂಗವಾಗಿ ಹೇಳಲಿ. ಆದರೆ ಮೌನವಾಗಿದ್ದರೆ ಸಮಸ್ಯೆಗಳು ಬಗೆ ಹರಿಯುವುದಿಲ್ಲ. ರೈತರು ತರಕಾರಿ, ಹಣ್ಣುಗಳನ್ನು ತಂದು ಮಾರುಕಟ್ಟೆಗೆ ತಂದು ಖರೀದಿಸುವವರಿಲ್ಲದೇ ಸುರಿದು ಹೋಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರೈತರ ನೆರವಿಗೆ ಸರ್ಕಾರ ಬಾರದಿದ್ದರೆ ವಿರೋಧಪಕ್ಷಗಳು ಸುಮ್ಮನಿರ ಲಾಗದು ಎಂದರು. ಎಚ್.ಡಿ. ಕುಮಾರಸ್ವಾಮಿ ಅಥವಾ ಬೇರಾವ ಮುಖಂಡ ರೊಂದಿಗೆ ವೈಯಕ್ತಿಕ ಮುನಿಸಿದ್ದರೆ ಸಿದ್ದರಾಯಮಯ್ಯ ಅವರು ಬದಿ ಗೊತ್ತಿ ತಕ್ಷಣ ಸಭೆ ಕರೆಯಬೇಕು ಎಂದರು.
ಕೊರೊನಾ ಹೆಸರಲ್ಲಿ ರೈತರನ್ನು ಬಲಿಕೊಡುವುದು ಬೇಡ. ಸರ್ಕಾರ ಈಗಲೇ ಎಚ್ಚೆತ್ತುಕೊಳ್ಳಬೇಕು ಎಂದು ಒತ್ತಾಯಿಸಿದ ರೇವಣ್ಣ ಅವರು, ಹೊಳೆನರಸೀಪುರ ಕೃಷಿ ಮಾರುಕಟ್ಟೆಯಲ್ಲಿ ಭಾನುವಾರ ರಾತ್ರಿಯಿಂದ ಬೆಳಗಿನ ಜಾವದವರೆಗೆ ಖುದ್ದು ಹಾಜರಿದ್ದು ರೈತರಿಗೆ ಸ್ಪಂದಿಸಿದ್ದೇನೆ. ಕೆಲವು ರೈತರ ತರಕಾರಿ ಯನ್ನು ನಾನೇ ಖರೀದಿಸಿ ಸಹಕಾರ ಸಂಘಗಳ
ಮೂಲಕ ಮಾರಾಟಕ್ಕೆ ವ್ಯವಸ್ಥೆ ಮಾಡಿದ್ದೇನೆ. ತೊಗರಿಬೇಳೆ, ಅಡುಗೆ ಎಣ್ಣೆ, ಈರುಳ್ಳಿ, ಬೆಳ್ಳುಳ್ಳಿಯನ್ನು ನೇರವಾಗಿ ಮಾರಕಟ್ಟೆಯಲ್ಲಿ ಖರೀದಿಸಿ ಸಹಕಾರ ಸಂಘಗಳ ಮೂಲಕ
ಖರೀದಿಸಿ ಮಾರಾಟ ಮಾಡುತ್ತಿದೇವೆ.
ಗ್ರಾಹಕರಿಗೆ ಕಡಿಮೆ ದರದಲ್ಲಿ ಸಾಮಗ್ರಿಗಳು ಸಿಗುತ್ತಿವೆ. ಇದೇ ಕೆಲಸವನ್ನು ಜಿಲ್ಲಾಡಳಿತ ಏಕೆ ಮಾಡಲಾಗುತ್ತಿಲ್ಲ. ನಾವು ಸಲಹೆ ನೀಡಿದರೂ ಜಿಲ್ಲಾಧಿಕಾರಿಯವರು ಸ್ಪಂದಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.