ಐವರು ಉಪಾಧ್ಯಕ್ಷರು, ನಾಲ್ಕು ವೆಂಟಿಲೇಟರ್‌ಗಳು ! ಇದು ಆಫ್ರಿಕನ್‌ ರಾಷ್ಟ್ರಗಳ ಕಥೆ


Team Udayavani, Apr 21, 2020, 6:29 PM IST

ಐವರು ಉಪಾಧ್ಯಕ್ಷರು, ನಾಲ್ಕು ವೆಂಟಿಲೇಟರ್‌ಗಳು ! ಇದು ಆಫ್ರಿಕನ್‌ ರಾಷ್ಟ್ರಗಳ ಕಥೆ

ಮಣಿಪಾಲ: ಆಫ್ರಿಕನ್‌ ರಾಷ್ಟ್ರಗಳು ಸಾಮಾಜಿಕ-ಆರ್ಥಿಕ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿವೆ. ಈಗ ಕೋವಿಡ್‌-19 ಅವುಗಳ ಜೀವ ಹಿಂಡತೊಡಗಿದೆ. ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆ ಹೇಳಿರುವ ಪ್ರಕಾರ ಆಫ್ರಿಕನ್‌ ರಾಷ್ಟ್ರಗಳತ್ತ ಕೋವಿಡ್‌ ಹುಲಿ ಸವಾರಿ ಹೊರಟಿಲ್ಲ. ಹೊರಟರೆ ಕಥೆ ಹೇಳುವಂತಿಲ್ಲ.

ಕಾರಣವಿಷ್ಟೇ. ಅಲ್ಲೀಗ ಹಲವು ವೈದ್ಯಕೀಯ ಸೌಲಭ್ಯಗಳ ಕೊರತೆ ಇದೆ. ಪ್ರಮುಖವಾಗಿ ಆಫ್ರಿಕಾದ 7 ರಾಷ್ಟ್ರಗಳಲ್ಲಿ ವೆಂಟಿಲೇಟರ್‌ಗಳ ಕೊರತೆ ಉದ್ಭವಿಸಿದೆ.

ದಕ್ಷಿಣ ಸೂಡಾನ್‌ನಲ್ಲಿ ಕೋವಿಡ್‌ ವೈರಸ್‌ನ ಉಪ ಟಳ ಆರಂಭವಾಗಿದೆ. ಇಲ್ಲಿನ ಉಪಾಧ್ಯಕ್ಷರ ಸಂಖ್ಯೆಗೆ ಹೋಲಿಸಿದರೆ ವೆಂಟಿಲೇಟರ್‌ಗಳ ಸಂಖ್ಯೆ ಕಡಿಮೆ ಇದೆ. ಒಟ್ಟು 11 ಮಿಲಿಯನ್‌ ಜನಸಂಖ್ಯೆಯ ಈ ರಾಷ್ಟ್ರದಲ್ಲಿ 5 ಮಂದಿ ಉಪಾಧ್ಯಕ್ಷರಿದ್ದಾರೆ. ಆದರೆ ವೆಂಟಿಲೇಟರ್‌ಗಳ ಸಂಖ್ಯೆಯೂ ಕೇವಲ ನಾಲ್ಕು.

10 ರಾಷ್ಟ್ರಗಳಲ್ಲಿಲ್ಲ
ಇನ್ನು ಮಧ್ಯ ಆಫ್ರಿಕಾದ ಗಣರಾಜ್ಯವೊಂದರಲ್ಲಿ ತನ್ನ 50 ಲಕ್ಷ ಜನರಿಗೆ ಮೂರು ವೆಂಟಿಲೇಟರ್‌ಗಳನ್ನಷ್ಟೇ ಹೊಂದಿದೆ. ಲೈಬೀರಿಯಾದಲ್ಲಿ 6 ವೆಂಟಿಲೇಟರ್‌ಗಳಿದ್ದು, ಅವುಗಳ ಪೈಕಿ ಒಂದು ಅಮೆರಿಕದ ರಾಯಭಾರ ಕಚೇರಿಯಲ್ಲಿದೆ. ಒಟ್ಟಾರೆ 41 ಆಫ್ರಿಕನ್‌ ದೇಶಗಳಲ್ಲಿ 2,000 ಕ್ಕಿಂತ ಕಡಿಮೆ ವೆಂಟಿಲೇಟರ್‌ಗಳಿವೆ. ಇವುಗಳ ನೆರವಿನಿಂದ ಈಗ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಲಕ್ಷಾಂತರ ಜನರಿಗೆ ಸೇವೆ ನೀಡಬೇಕು. ವಿಪರ್ಯಾಸ ಎಂದರೆ ಈ 41ರ ಪೈಕಿ 10 ರಾಷ್ಟ್ರಗಳಲ್ಲಿ ವೆಂಟಿಲೇಟರ್‌ ಎಂದರೇನು ಎಂಬುದೇ ಗೊತ್ತಿಲ್ಲ.

ನೀರಿಲ್ಲ, ಸಾಬೂನಿಲ್ಲ
ವಿಶ್ವ ಸಂಸ್ಥೆ ಪ್ರಕಾರ ಆಫ್ರಿಕಾದ ಕೆಲವು ಭಾಗಗಳಲ್ಲಿ ಶುದ್ಧ ನೀರಿನ ಕೊರತೆ ಇದೆ. ಸಬ್‌ -ಸಹಾರನ್‌ನ ಆಫ್ರಿಕನ್ನರಲ್ಲಿ ಕೇವಲ ಶೇ. 15 ಮಂದಿಗೆ ಮಾತ್ರ ಕೈ ತೊಳೆಯುವ ಸೌಲಭ್ಯವಿದೆ. ಲೈಬೀರಿಯಾದಲ್ಲಿ 2017ರ ಮಾಹಿತಿಯಂತೆ ಶೇ. 97 ಮನೆಗಳಲ್ಲಿ ಶುದ್ಧ ನೀರು ಮತ್ತು ಮೈ ಕೈ ತೊಳೆಯಲು ಸಾಬೂನು ಇಲ್ಲವಂತೆ. ಈ ಮಧ್ಯೆ ಆಫ್ರಿಕಾದಲ್ಲಿ ಇತರ ರಾಷ್ಟ್ರಗಳಂತೆ ವ್ಯಾಪಕವಾಗಿ ಪರೀಕ್ಷೆ ನಡೆಸಲಾಗುತ್ತಿಲ್ಲ. ಸೀಮಿತ ಪರೀಕ್ಷಾ ಕೇಂದ್ರಗಳಿರುವುದೂ ಕಾರಣ. ಇದರಿಂದಾಗಿ ಯಾರಿಗೆಲ್ಲಾ ಕೋವಿಡ್‌ ವೈರಸ್‌ ಸೋಂಕುಗಳನ್ನು ತಗುಲಿದೆ ಎಂಬುದನ್ನು ತಿಳಿಯಲಾಗುತ್ತಿಲ್ಲ. ಇವುಗಳ ಮಧ್ಯೆ ಹಲವು ಆಫ್ರಿಕನ್‌ ದೇಶಗಳಲ್ಲಿ ಸೋಂಕು ಹರಡುತ್ತಿದೆ. ಪ್ರತಿ ಆರು ದಿನಗಳಿಗೊಮ್ಮೆ ಗಿನಿಯಾದಲ್ಲಿನ ಪ್ರಕರಣಗಳು ದ್ವಿಗುಣಗೊಳ್ಳುತ್ತಿವೆ. ಘಾನಾದಲ್ಲಿ ಒಂಬತ್ತು ದಿನಕ್ಕೆ ದ್ವಿಗುಣಗೊಳ್ಳುತ್ತಿದೆ. ದಕ್ಷಿಣ ಆಫ್ರಿಕಾದಲ್ಲಿ 2,600ಕ್ಕೂ ಹೆಚ್ಚು ಪ್ರಕರಣಗಳಿದ್ದರೆ, ಕ್ಯಾಮರೂನ್‌ನಲ್ಲಿ ಸುಮಾರು ಸಾವಿರ ಪ್ರಕರಣಗಳಿವೆ.

ಎಷ್ಟು ಹಾಸಿಗೆಗಳಿವೆ
ಕಳೆದ ವಾರ ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಅಧ್ಯಯನದಂತೆ ಆಫ್ರಿಕಾದ 55 ದೇಶಗಳ ಪೈಕಿ 43 ರಾಷ್ಟ್ರಗಳಲ್ಲಿ 5000 ಕ್ಕಿಂತಲೂ ಕಡಿಮೆ ತೀವ್ರ ನಿಗಾ ವ್ಯವಸ್ಥೆಯ ಹಾಸಿಗೆಗಳಿವೆ. ಅಂದರೆ 1 ಲಕ್ಷ ಮಂದಿಗೆ 5 ಹಾಸಿಗೆಗಳು. ಆದರೆ ಯುರೋಪಿನಲ್ಲಿ ಪ್ರತಿ 1 ಲಕ್ಷ ಜನರಿಗೆ ಸುಮಾರು 4,000 ಹಾಸಿಗೆಗಳಿವೆ ಎನ್ನಲಾಗಿದೆ.

ಈ ತುರ್ತು ಪರಿಸ್ಥಿತಿಯಲ್ಲಿ ಆಫ್ರಿಕಾಕ್ಕೆ ಬೇರೆ ಬೇರೆ ರಾಷ್ಟ್ರಗಳು, ಸಂಘಸಂಸ್ಥೆಗಳು ವೆಂಟಿಲೇಟರ್‌ ದಾನ ಮಾಡಲು ಮುಂದಾಗಿವೆ. ಆದರೆ ಯಂತ್ರಗಳನ್ನು ಚಾಲನೆ ಮಾಡಲು ತರಬೇತಿ ಪಡೆದ ವೈದ್ಯಕೀಯ ಸಿಬಂದಿ ಇಲ್ಲ. ಜತೆಗೆ ಅಗತ್ಯ ವಿದ್ಯುತ್‌ ಸರಬರಾಜು ಮತ್ತು ಆಮ್ಲಜನಕ ಪೂರೈ ಕೆಯೂ ಕಷ್ಟ. ಕೇವಲ ಶೇ. 3 ರಷ್ಟು ರೋಗಿಗಳಿಗೆ ಮಾತ್ರ ವೆಂಟಿಲೇಟರ್‌ಗಳು ಬೇಕು ಎನ್ನುತ್ತಾರೆ ಇಥಿಯೋಪಿಯಾದ ವೈದ್ಯಕೀಯ ಪರಿಣಿತರು. ಆದರೆ ಪರಿಸ್ಥಿತಿ ಇದಕ್ಕಿಂತ ಗಂಭೀರವಾಗಿದೆ.

ಟಾಪ್ ನ್ಯೂಸ್

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

1-maha

Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

1-kir

All-party meet: ನಾಳೆಯಿಂದ ಚಳಿಗಾಲದ ಅಧಿವೇಶನ: ಸುಗಮಗೊಳಿಸಲು ಬಯಸಿದ ಸರಕಾರ

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

Jarkahnad–CM-Soren

Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್‌ ಸೊರೇನ್‌ ನ.28ಕ್ಕೆ ಪದಗ್ರಹಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು

Adani; ಆಸೀಸ್‌ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ

Adani; ಆಸೀಸ್‌ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Chhattisgarh: ಐಇಡಿ ಸ್ಫೋ*ಟ: ಪೊಲೀಸ್‌ ಸಿಬ್ಬಂದಿಗೆ ಗಾಯ

Chhattisgarh: ಐಇಡಿ ಸ್ಫೋ*ಟ: ಪೊಲೀಸ್‌ ಸಿಬ್ಬಂದಿಗೆ ಗಾಯ

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

Maharashtra Elections: 22 ಮಹಿಳೆ ಆಯ್ಕೆ, ವಿಪಕ್ಷದಿಂದ ಒಬ್ಬರೇ!

Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!

1-maha

Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.