ಕೆಎಸ್‌ಆರ್‌ಟಿಸಿ ಪಾಸುದಾರರಿಗೆ ಸಿಹಿಸುದ್ದಿ
Team Udayavani, Apr 22, 2020, 12:23 PM IST
ಸಾಂದರ್ಭಿಕ ಚಿತ್ರ
ಬೆಂಗಳೂರು: “ಲಾಕ್‌ಡೌನ್‌ನಿಂದ 10-15 ದಿನಗಳ ಪ್ರಯಾಣ ದರ ನಷ್ಟವಾಯಿತು’ ಎಂದು ಕೈ-ಕೈ ಹಿಸುಕಿಕೊಳ್ಳುತ್ತಿರುವ ಮಾಸಿಕ ಪಾಸು ಹೊಂದಿದ ಪ್ರಯಾಣಿಕರಿಗೆ ಕೆಎಸ್‌ಆರ್‌ಟಿಸಿ ಸಿಹಿ ಸುದ್ದಿ ನೀಡಿದೆ. ಬಸ್ ಸೇವೆ ಪುನರಾರಂಭಗೊಳ್ಳುತ್ತಿದ್ದಂತೆ ಎಲ್ಲ ಮಾಸಿಕ ಪಾಸು ಹೊಂದಿದ ಪ್ರಯಾಣಿಕರಿಗೆ ಅವಧಿ ವಿಸ್ತರಣೆ ಮಾಡಿ, ಬಾಕಿ ಉಳಿದ ದಿನಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸುತ್ತಿದೆ. ಇದು ನಿಗಮದ ವ್ಯಾಪ್ತಿಯ ಎಲ್ಲ 16 ಜಿಲ್ಲೆಗಳಿಗೂ ಅನ್ವಯ ಆಗಲಿದೆ.
ಕೆಎಸ್‌ಆರ್‌ಟಿಸಿ ವ್ಯಾಪ್ತಿಯಲ್ಲಿ ಸುಮಾರು 55 ಸಾವಿರ ಜನ ಮಾಸಿಕ ಪಾಸು ಪಡೆದು ಪ್ರಯಾಣಿಸುತ್ತಾರೆ. ಪಾಸಿನ ದರ 300 ರೂ.ಗಳಿಂದ ಗರಿಷ್ಠ 2,500 ರೂ.ವರೆಗೂ ಇದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ 1,000-1,200 ರೂ. ಒಳಗಿನ ಪಾಸು ಹೊಂದಿದ ಪ್ರಯಾಣಿಕರಿದ್ದಾರೆ. ಪಾಸು ವಿತರಿಸಿದ ದಿನಾಂಕದಿಂದ 30 ದಿನಗಳು ಪ್ರಯಾಣಿಸಲು ಅವಕಾಶ ಇರುತ್ತದೆ. ಅದನ್ನು ಆಧರಿಸಿ ವಿಸ್ತರಣಾ ಅವಧಿ ನವೀಕರಿಸಲಾಗುತ್ತದೆ ಎಂದು ಕೆಎಸ್‌ಆರ್‌ಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ ಪ್ರಭಾಕರ ರೆಡ್ಡಿ ಸ್ಪಷ್ಟಪಡಿಸಿದರು.
ನವೀಕರಣ ಹೇಗೆ?: ಮಾ. 23ರಂದು ಲಾಕ್‌ಡೌನ್ ಘೋಷಿಸಲಾಗಿದೆ. ಅದಕ್ಕೂ ಹಿಂದೆ ಒಂದು ದಿನ ಜನತಾ ಕರ್ಫ್ಯೂ ಜಾರಿಯಲ್ಲಿತ್ತು. ಒಟ್ಟಾರೆ ಕಳೆದ ತಿಂಗಳು ಹೆಚ್ಚು-ಕಡಿಮೆ ಹತ್ತು ದಿನಗಳು ಬಸ್ ಸೇವೆ ಸ್ಥಗಿತಗೊಂಡಿತ್ತು. ಉದಾಹರಣೆಗೆ ಯಾವೊಬ್ಬ ಪ್ರಯಾಣಿಕ ಮಾರ್ಚ್ 10ಕ್ಕೆ ಪಾಸು ಪಡೆದಿದ್ದರೆ, ಅಲ್ಲಿಂದ 30 ದಿನಗಳು ಮಾಸಿಕ ಪಾಸಿನ ಅವಧಿ ಆಗಿರುತ್ತದೆ. ಆದರೆ, ಲಾಕ್‌ಡೌನ್‌ನಿಂದ ಕೇವಲ ಹತ್ತು ದಿನಗಳು ಪಾಸು ಬಳಕೆ ಆಗಿರುತ್ತದೆ. ಅಂತಹವರಿಗೆ ಬಸ್ ಸೇವೆ ಪುನರಾರಂಭಗೊಂಡ ನಂತರ 20 ದಿನಗಳು ನವೀಕರಿಸಿದ ಮುದ್ರೆ ಹಾಕಿ, ಪ್ರಯಾಣಿಸಲು ಅವಕಾಶ ನೀಡಲಾಗುವುದು. ಇದಕ್ಕೆ ಯಾವುದೇ ಶುಲ್ಕ ಇರುವುದಿಲ್ಲ. ಈ ಸೇವೆ ಆಯಾ ಬಸ್ ನಿಲ್ದಾಣದ ನಿಯಂತ್ರಕರಲ್ಲೇ ಲಭ್ಯ ಇರಲಿದೆ ಎಂದು ಅವರು ಸ್ಪಷ್ಟಪಡಿಸಿದರು.ಇನ್ನು ಪ್ರೀಮಿಯಂ ಸೇವೆಗಳಲ್ಲಿ ಪಾಸು ಹೊಂದಿದವರ ಪ್ರಮಾಣ ಅತಿ ವಿರಳ ಎಂದೂ ಅವರು ಮಾಹಿತಿ ನೀಡಿದರು.
ಬಿಎಂಟಿಸಿ ಇನ್ನೂ ಯೋಚಿಸಿಲ್ಲ: ಆದರೆ, ಬಿಎಂಟಿಸಿ ವ್ಯಾಪ್ತಿಯಲ್ಲಿ ವಿತರಿಸಲಾಗುವ ಮಾಸಿಕ ಪಾಸುಗಳ ವ್ಯವಸ್ಥೆ ತುಸು ಭಿನ್ನವಾಗಿದ್ದು, ತಿಂಗಳಲ್ಲಿ ಯಾವುದೇ ದಿನ ಪಾಸು ಹೊಂದಿ
ದರೂ ಅದು 1ನೇ ತಾರೀಖೀನಿಂದಲೇ ಪರಿಗಣಿಸಲ್ಪಡುತ್ತದೆ. ಆದ್ದರಿಂದ ಸದ್ಯಕ್ಕಂತೂ ನವೀಕರಿಸುವ ಆಲೋಚನೆ ಇಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RSS ಕಚೇರಿ ಟೆಕ್ಕಿಗಳ ಬಳಸಿ ಇವಿಎಂ ಹ್ಯಾಕ್: ವಸಂತ
Honnavar;ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರು ಯುವತಿಯರ ರಕ್ಷಣೆ
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.