ಎಂಎಸ್‌ಎಂಇಗೆ ಬೇಕಿದೆ ವಿಶೇಷ ಆರ್ಥಿಕ ನೆರವು


Team Udayavani, Apr 22, 2020, 1:44 PM IST

ಎಂಎಸ್‌ಎಂಇಗೆ ಬೇಕಿದೆ ವಿಶೇಷ ಆರ್ಥಿಕ ನೆರವು

ಹುಬ್ಬಳ್ಳಿ: ಆರ್ಥಿಕ ಹಿಂಜರಿಕೆಯಿಂದ ಸಮಸ್ಯೆಗಳಿಗೆ ಸಿಲುಕಿದ್ದ ಉದ್ಯಮ ವಲಯ ಅದರಲ್ಲೂ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ವಲಯ(ಎಂಎಸ್‌ ಎಂಇ) ಕೋವಿಡ್ 19 ಹೊಡೆತದಿಂದ ಮೇಲೇಳದ ಸ್ಥಿತಿಗೆ ತಲುಪಿದ್ದು, ಉದ್ಯಮದ ಪುನಶ್ಚೇತನಕ್ಕೆ ಸರ್ಕಾರಗಳು ವಿಶೇಷ ಪ್ಯಾಕೇಜ್‌ ಘೋಷಿಸಲಿ ಎಂಬುದು ಎಂಎಸ್‌ಎಂಇ ವಲಯದ ಕೂಗಾಗಿದೆ.

ಒಂದು ಕಡೆ ಆದಾಯವಿಲ್ಲ. ಇನ್ನೊಂದು ಕಡೆ ಕನಿಷ್ಟ ವೆಚ್ಚಗಳನ್ನು ಭರಿಸಲೇಬೇಕಾಗಿದೆ. ದೊಡ್ಡ ಉದ್ಯಮಗಳನ್ನು ಆಧರಿಸಿ ಎಂಎಸ್‌ಎಂಇ ಕಾರ್ಯನಿರ್ವಹಿಸುತ್ತದೆ. ದೊಡ್ಡ ಉದ್ಯಮಗಳು ಬಂದ್‌ ಆಗಿದ್ದು, ಆರಂಭಗೊಂಡರೂ ನಿರೀಕ್ಷಿತ ವೇಗದಲ್ಲಿ ಸಾಗುವ ಸಾಧ್ಯತೆ ಕಡಿಮೆ. ಯುರೋಪಿಯನ್‌ ದೇಶಗಳು ಹಾಗೂ ಅಮೆರಿಕ ಸೇರಿ ಇನ್ನಿತರ ದೇಶಗಳಿಗೆ ಕೆಲ ಎಂಎಸ್‌ ಎಂಇಗಳು ಉತ್ಪನ್ನ ರಫ್ತು ಮಾಡುತ್ತಿದ್ದವು. ಇದೀಗ ಸ್ಥಗಿತಗೊಂಡಿದೆ. ಇದ್ದ ಉದ್ಯೋಗಿಗಳನ್ನು ಉಳಿಸಿಕೊಳ್ಳಬೇಕು, ಕನಿಷ್ಟ ವೆಚ್ಚ-ಶುಲ್ಕಗಳನ್ನು ಭರಿಸಬೇಕು ಎಂದರೆ ಹೇಗೆ ಸಾಧ್ಯ ಎಂಬುದು ಹಲವು ಉದ್ಯಮಿಗಳ ಪ್ರಶ್ನೆ.

ವಿಶೇಷ ಪ್ಯಾಕೇಜ್‌ ಅವಶ್ಯ: ಉತ್ತರ ಕರ್ನಾಟಕದಲ್ಲಿ ಉದ್ಯಮ ವಲಯ ಇನ್ನೂ ಬಲಗೊಳ್ಳಬೇಕಾಗಿದೆ. ಕೃಷಿ ನಂತರ ಅತಿ ಹೆಚ್ಚು ಉದ್ಯೋಗ ನೀಡಿದ್ದು ಎಂಎಸ್‌ಎಂಇ. ಜತೆಗೆ ದೇಶದ ಒಟ್ಟಾರೆ ರಫ್ತುಗೆ ಶೇ.40-45ರಷ್ಟು ಕೊಡುಗೆಯನ್ನು ಈ ವಲಯ ನೀಡುತ್ತಿದ್ದು, ಜಿಡಿಪಿಗೆ ಮಹತ್ವದ ಕೊಡುಗೆ ನೀಡುತ್ತಿದೆ. ಆರ್ಥಿಕ ಹಿಂಜರಿಕೆ ಇನ್ನಿತರ ಕಾರಣಗಳಿಂದಾಗಿ ಎಂಎಸ್‌ಎಂಇಯಲ್ಲಿ ಒಟ್ಟಾರೆಯಾಗಿ ಶೇ.40ರಷ್ಟು ಉದ್ಯೋಗ ನಷ್ಟವಾಗಿತ್ತು. ಅನೇಕ ಉದ್ಯಮದಾರರು ಸಂಕಷ್ಟಕ್ಕೆ ಸಿಲುಕಿದ್ದರೆ, ಕೆಲವೊಂದು ಉದ್ಯಮಗಳು ಕಣ್ಣು ಮುಚ್ಚಿದ್ದವು. ಇನ್ನಷ್ಟು ಅದೇ ದಾರಿಯತ್ತ ಸಾಗಿದ್ದವು. ಇದೀಗ ಕೋವಿಡ್ 19  ಹೊಡೆತ ಬಹುದೊಡ್ಡ ಪೆಟ್ಟು ನೀಡಿದ್ದು, ಇದರಿಂದ ಸುಧಾರಿಸಬೇಕೆಂದರೆ ಸಾಕಷ್ಟು ಸಮಯ ಬೇಕಾಗುತ್ತದೆ ಎಂಬುದುಎಂಎಸ್‌ಎಂಇ ವಲಯದ ಅನಿಸಿಕೆ.

ವಿವಿಧ ರಿಯಾಯಿತಿ ನೀಡಲಿ: ಕೋವಿಡ್ 19 ಹಿನ್ನೆಲೆಯಲ್ಲಿ ಯಾವುದೇ ಉದ್ಯಮ ಇರಲಿ ತನ್ನ ನೌಕರರನ್ನು ತೆಗೆದು ಹಾಕುವಂತಿಲ್ಲ. ಅವರಿಗೆ ವೇತನ ನೀಡಬೇಕೆಂದು ಸರ್ಕಾರಗಳು ಹೇಳಿವೆ. ಸರ್ಕಾರ ನೌಕರರ ಹಿತ ಕಾಯುವ ನಿಟ್ಟಿನಲ್ಲಿ ಇಂತಹ ಸೂಚನೆ ಸ್ವಾಗತಾರ್ಹ. ಅದನ್ನು ನಾವು ಪಾಲಿಸುತ್ತೇವೆ. ಆದರೆ, ಎಂಎಸ್‌ಎಂಇ ಉದ್ಯಮದಾರರ ಹಿತ ಕುರಿತಾಗಿ ಸರ್ಕಾರದ ಚಿಂತನೆ ಏನು ಎಂಬುದನ್ನು ತಿಳಿಸಲಿ. ನೌಕರರಿಗೆ ವೇತನ ನೀಡುತ್ತೇವೆ. ಆದರೆ, ವಿದ್ಯುತ್‌ ಶುಲ್ಕ, ಆಸ್ತಿ ಕರ, ಬ್ಯಾಂಕ್‌ ಸಾಲದ ಮೇಲಿನ ಬಡ್ಡಿ ವಿಚಾರದಲ್ಲಾದರೂ ರಿಯಾಯಿತಿಗೆ ಮುಂದಾಗಬೇಕೆಂಬುದು ಉದ್ಯಮ ವಲಯದ ಆಗ್ರಹ.

ಅತ್ಯಂತ ಸಣ್ಣ ಉದ್ಯಮ ಇದೆ ಎಂದರೂ ಕೇವಲ ವೇತನ, ವಿದ್ಯುತ್‌ ಶುಲ್ಕವೇ ಮಾಸಿಕ ಕನಿಷ್ಟ 1.60ಲಕ್ಷ ರೂ. ಆಗುತ್ತದೆ. ಒಂದು ವಸ್ತು ಉತ್ಪಾದನೆ ಆಗುತ್ತದೆ ಎಂದರೆ ಅದರಲ್ಲಿ ಶೇ.15-25ರಷ್ಟು ಪ್ರಮಾಣದ ವೆಚ್ಚ ನೌಕರರ ವೇತನದ್ದಾಗಿರುತ್ತದೆ. ವಿದ್ಯುತ್‌ ಕಂಪನಿಗಳು ಮೂರು ತಿಂಗಳ ಶುಲ್ಕ ಪಡೆದುಕೊಂಡಿವೆ. ನಗರ ಸ್ಥಳೀಯ ಸಂಸ್ಥೆಗಳು ಆಸ್ತಿ ಕರ ಕೇಳುತ್ತಿವೆ.

ಸಾಮಾನ್ಯವಾಗಿ ಜನವರಿಯಿಂದ ಮಾರ್ಚ್ ವರೆಗೆ ಉದ್ಯಮದ ಕಾರ್ಯಗಳು ಹೆಚ್ಚುತ್ತಿರುತ್ತವೆ. ವಿದ್ಯುತ್‌ ಬಳಕೆಯೂ ಹೆಚ್ಚಾಗಿರುತ್ತದೆ. ಈ ಅವಧಿ ಬಳಕೆಯನ್ನು ಪರಿಗಣಿಸಿ ವಿದ್ಯುತ್‌ ಕಂಪನಿಯವರು ಮೂರು ತಿಂಗಳ ಸರಾಸರಿ ಬಿಲ್‌ಗ‌ಳನ್ನು ಪಡೆದುಕೊಂಡಿವೆ. ಉದ್ಯಮ ಸ್ಥಗಿತಗೊಂಡಿದ್ದರೂ ನಾವು ಹಿಂದೆ ಬಳಕೆ ಮಾಡಿದ ಪ್ರಮಾಣದಷ್ಟೇ ವಿದ್ಯುತ್‌ ಶುಲ್ಕ ಪಾವತಿಸಿದ್ದೇವೆ. ಮುಂದೆ ನಮಗೆ ಅದು ಬರಬಹುದು. ಆದರೆ, ಈ ಸಂಕಷ್ಟ ಸ್ಥಿತಿಯಲ್ಲಿ ಅದನ್ನು ಪಾವತಿಸಬೇಕಲ್ಲ ಎಂಬುದು ಉದ್ಯಮದಾರರ ಅಳಲು.

ಉತ್ತರ ಕರ್ನಾಟಕದ ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ, ಬೀದರ, ಬಳ್ಳಾರಿಗಳಲ್ಲಿ ಉದ್ಯಮ ವಲಯ ಬೆಳೆಯುತ್ತಿದೆ. ವಿಶೇಷವಾಗಿ ಹುಬ್ಬಳ್ಳಿಯಲ್ಲಿ ಎಂಜಿನಿಯರಿಂಗ್‌ ಮತ್ತು ಉತ್ಪಾದನಾ ಆಧಾರಿತ ಎಂಎಸ್‌ಎಂಇ ಇದ್ದರೆ, ಬೆಳಗಾವಿಯಲ್ಲಿ ಹೈಡ್ರೋಲಿಕ್‌ ಹಾಗೂ ಏರೋಸ್ಪೇಸ್‌ ಉದ್ಯಮ ಇದೆ. ಕಲಬುರಗಿಯಲ್ಲಿಕೃಷಿಯಾಧಾರಿತ ಉದ್ಯಮಗಳಿದ್ದರೆ, ಬಳ್ಳಾರಿಯಲ್ಲಿ ಜೀನ್ಸ್‌ ಇನ್ನಿತರ ಉದ್ಯಮ ಇದೆ. ಈ ಎಲ್ಲ ಎಂಎಸ್‌ಎಂಇಗಳು ದೊಡ್ಡ ಉದ್ಯಮಗಳು, ಮಾರುಕಟ್ಟೆಯನ್ನು ನಂಬಿಕೊಂಡು ಸಾಗುತ್ತವೆ. ಆದರೆ, ದೊಡ್ಡ ಉದ್ಯಮ, ಮಾರುಕಟ್ಟೆಯೇ ಇಲ್ಲವಾಗಿದ್ದರಿಂದ ಸಂಕಷ್ಟಕ್ಕೆ ಸಿಲುಕಿವೆ.

ಲಾಕ್‌ಡೌನ್‌ನಿಂದಾಗಿ ಎಂಎಸ್‌ಎಂಇ ಸಂಕಷ್ಟಕ್ಕೆ ಸಿಲುಕಿದೆ. ಪುನಶ್ಚೇತನಕ್ಕೆ ಕನಿಷ್ಟ 3 ವರ್ಷವಾದರೂ ಬೇಕು. ಈ ನಿಟ್ಟಿನಲ್ಲಿ ಸರ್ಕಾರಗಳು ವಿಶೇಷ ನೆರವಿಗೆ ಮುಂದಾಗುವುದು ಅವಶ್ಯ. ನೌಕರರಿಗೆ ನೀಡಿದ ವೇತನದಲ್ಲಿ ಕನಿಷ್ಟ ಎರಡು ತಿಂಗಳ ವೆಚ್ಚವನ್ನಾದರೂ ಸರ್ಕಾರ ಭರಿಸುವ ಬಗ್ಗೆ ಚಿಂತಿಸಲಿ. –ಎಂ.ಸಿ.ಹಿರೇಮಠ, ಮಾಜಿ ಅಧ್ಯಕ್ಷ, ಕೆಸಿಸಿಐ

 

ಅಮರೇಗೌಡ ಗೋನವಾರ

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’

Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’

ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ

ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ

8

Dharwad: ಪಂ.ಮನಸೂರ ಸಂಗೀತ ಪಾಠ ಶಾಲೆ ಮತ್ತೆ ಆರಂಭ; ಜಿಲ್ಲಾಧಿಕಾರಿ ದಿವ್ಯ ಪ್ರಭು

Hubli: Police seize Rs 89.99 lakhs being transported without documents

Hubli: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89.99 ಲಕ್ಷ ರೂ ಪೊಲೀಸ್‌ ವಶಕ್ಕೆ

ED summons case: Temporary relief for Siddaramaiah’s wife Parvathi, Bairati Suresh

ED summons: ಸಿದ್ದರಾಮಯ್ಯ ಪತ್ನಿ ಪಾರ್ವತಿ, ಬೈರತಿ ಸುರೇಶಗೆ ತಾತ್ಕಾಲಿಕ ರಿಲೀಫ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.