ರಂಜಾನ್ ಮಾರ್ಗಸೂಚಿ ಪಾಲಿಸಿ
Team Udayavani, Apr 22, 2020, 3:46 PM IST
ಸಾಂದರ್ಭಿಕ ಚಿತ್ರ
ಮಹಾಲಿಂಗಪುರ: ಮೇ 3ರವರೆಗೂ ಲಾಕ್‌ಡೌನ್ ಇರುವ ಕಾರಣದಿಂದಾಗಿ ರಾಜ್ಯ ಸರಕಾರ ರಂಜಾನ್ ಹಬ್ಬದ ವಿಶೇಷ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಆ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ರಬಕವಿ-ಬನಹಟ್ಟಿ ತಹಶೀಲ್ದಾರ್ ಪ್ರಶಾಂತ ಚನಗೊಂಡ ಹೇಳಿದರು.
ಪಟ್ಟಣದ ಚೆಕ್‌ಪೋಸ್ಟ್ ಮತ್ತು ಪುರಸಭೆಗೆ ಭೇಟಿ ನೀಡಿ ಲಾಕ್‌ಡೌನ್ ಕುರಿತು ಪರಿಶೀಲನೆ ನಡೆಸಿ ಅವರು ಮಾತನಾಡಿದರು. ರಂಜಾನ್ ರೋಜಾ ಮತ್ತ ಹಬ್ಬ ಆಚರಿಸುವವರು ಯಾರಿಗೂ ಮಸೀದಿ ಅಥವಾ ದರ್ಗಾಗಳಲ್ಲಿ ಐದು ಬಾರಿ ಮಾಡುವ ಸಾಮೂಹಿಕ ಪ್ರಾರ್ಥನೆಗಳಿಗೆ ಮತ್ತು ಜುಮ್ಮಾ ಅಥವಾ ತಾರವೀಹ್ ಪ್ರಾರ್ಥನೆಗಳಿಗೂ ಅನುಮತಿ ಇಲ್ಲ. ಜುಮ್ಮಾ ಮತ್ತು ತಾರವೀಹ್ ಸೇರಿದಂತೆ ಮಸೀದಿ, ದರ್ಗಾಗಳ ಸಿಬ್ಬಂದಿ ಸಾಮೂಹಿಕ ನಮಾಜ್ ಅಥವಾ ಪ್ರಾರ್ಥನೆ ಹಾಗೂ ಭಾಷಣ ಸಭೆ ನಡೆಸುವಂತಿಲ್ಲ. ಶಹರಿ ಮತ್ತು ಇಫ್ತಾರ್ ಕೂಟ ಆಯೋಜಿಸಲು ಅನುಮತಿ ಇಲ್ಲ ಎಂದು ಹೇಳಿದರು.
ಮಸೀದಿಗಳ ಎದುರು ಹಾಗೂ ಮೊಹಲ್ಲಾಗಳಲ್ಲಿ ಗಂಜಿ, ಶರಬತ್ತು ಇತ್ಯಾದಿಗಳನ್ನು ವಿತರಿಸುವಂತಿಲ್ಲ. ಯಾವುದೇ ತರಹದ ಆಹಾರ ಪದಾರ್ಥಗಳನ್ನು ವಿತರಿಸುವ ಅಂಗಡಿಗಳನ್ನು ಮಸೀದಿ, ದರ್ಗಾಗಳ ಸುತ್ತಮುತ್ತಲೂ ತೆರೆಯಲು ಅನುಮತಿ ಇರುವದಿಲ್ಲ. ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವುದುಪ್ರತಿಯೊಬ್ಬರಿಗೂ ಕಡ್ಡಾಯವಾಗಿದೆ. ರಮಜಾನ್ ಹಬ್ಬವನ್ನು ಆಚರಿಸುವವರು ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆಯಾಗದಂತೆ ತಮ್ಮ ಮನೆಗಳಲ್ಲಿ ಪ್ರಾರ್ಥನೆ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.
ರಬಕವಿ-ಬನಹಟ್ಟಿ ಗ್ರೇಡ್ 2 ತಹಶೀಲ್ದಾರ್, ಉಪ ತಹಶೀಲ್ದಾರ ಎಸ್.ಎಲ್. ಕಾಗಿಯವರ, ಕಂದಾಯನಿರೀಕ್ಷಕ ಬಸವರಾಜ ತಾಳಿಕೋಟಿ, ಮುಖ್ಯಾಧಿಕಾರಿ ಬಿ.ಆರ್. ಕಮತಗಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ
Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.