ಕೋವಿಡ್ ತೊಲಗಿಸಲು ಕೈಜೋಡಿಸಿ
Team Udayavani, Apr 22, 2020, 3:47 PM IST
ಸಿಂದಗಿ: ಮೋರಟಗಿ ಗ್ರಾಮದ ಗ್ರಾಪಂ ಕಾರ್ಯಾಲಯ ಆವರಣದಲ್ಲಿ ಸ್ಯಾನಿಟೈಸರ್ ಸಿಂಪಡನೆ ಕಾರ್ಯಕ್ಕೆ ಗ್ರಾಪಂ ಅಧ್ಯಕ್ಷ ಅರುಣಕುಮಾರ ಸಿಂಗೆ ಚಾಲನೆ ನೀಡಿದರು.
ಸಿಂದಗಿ: ಕೋವಿಡ್ ಸೋಂಕು ನಿವಾರಣೆಗೆ ನಾವೆಲ್ಲರೂ ಜಾಗೃತರಾಗೋಣ ಎಂದು ಗ್ರಾಪಂ ಅಧ್ಯಕ್ಷ ಅರುಣಕುಮಾರ ಸಿಂಗೆ ಹೇಳಿದರು. ತಾಲೂಕಿನ ಮೋರಟಗಿ ಗ್ರಾಮದಲ್ಲಿ ಗ್ರಾಪಂ ವತಿಯಿಂದ ಹಮ್ಮಿಕೊಂಡ ಸ್ಯಾನಿಟೈಸರ್ ಸಿಂಪಡನೆ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೋವಿಡ್ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಸೋಂಕು ತಗುಲಿದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ ಪೂರ್ವದಲ್ಲಿಯೇ ತಗುಲದಂತೆ ಮುನ್ನೆಚ್ಚರಿಕೆಯನ್ನು ವಹಿಸಬೇಕು ಎಂದರು. ಕೋವಿಡ್ ಲಕ್ಷಣಗಳು ಕಂಡು ಬಂದರೆ ತಕ್ಷಣ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬೇಕು. ಪ್ರತಿಯೊಬ್ಬ ವ್ಯಕ್ತಿಯೂ ಇನ್ನೊಬ್ಬ ವ್ಯಕ್ತಿಯಿಂದ ಅಂತರ ಕಾಯ್ದುಕೊಳ್ಳಬೇಕು. ಯಾವ ಕಾಲಕ್ಕೂ ಜನರು ಗುಂಪು ಗುಂಪಾಗಿ ಸೇರಬಾರದು. ಪ್ರತಿಯೊಬ್ಬರೂ ತಮ್ಮಷ್ಟಕ್ಕೆ ತಾವೇ ನಿಯಂತ್ರಣ ಮಾಡಿಕೊಳ್ಳಬೇಕು. ಈಗಾಗಲೇ ಈ ಮಾರಣಾಂತಿಕ ರೋಗವು ಭಾರತದಲ್ಲಿ ಪ್ರವೇಶ ಪಡೆದಿದ್ದು, ಅದು ಹೆಚ್ಚಿಗೆ ಹರಡದಂತೆ ನೋಡಿಕೊಳ್ಳುವ ಮೂಲಕ ಕೊರೊನಾ ಮುಕ್ತ ರಾಷ್ಟ್ರಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಸರಕಾರದ ಆದೇಶಗಳು ಎಷ್ಟೇ ಕಷ್ಟವಾದರೂ ನಾವೆಲ್ಲರೂ ಪಾಲಿಸಬೇಕು. ಜನರು ಪ್ರಜ್ಞೆಯುಳ್ಳವರಾಗಬೇಕು. ಮಾರಣಾಂತಿಕ ಕೋವಿಡ್ ಹರಡದಂತೆ ಸಂಕಷ್ಟದ ಈ ಸಂದರ್ಭದಲ್ಲಿ ಶಕ್ತಿ ಮೀರಿ ಪ್ರಯತ್ನಿಸಬೇಕು. ಈ ನಿಟ್ಟಿನಲ್ಲಿ ಗ್ರಾಪಂ ಮೂಲಕ ಹಳ್ಳಿಗಳಲ್ಲಿ ಸ್ಯಾನಿಟೈಸರ್ ಸಿಂಪಡನೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ನಾವ್ಯಾರು ಮನೆಯಿಂದ ಹೊರ ಬರಬಾರದು ಮನೆಯಲ್ಲಿಯೆ ಕುಳಿತು ಕೋವಿಡ್ ನಿಂದ ಮುಕ್ತರಾಗೋಣ ಎಂದು ಮನವಿ ಮಾಡಿಕೊಂಡರು.
ಪಿಡಿಒ ಜಯಕುಮಾರ ದೇವರನಾವದಗಿ, ಗ್ರಾಮ ಲೆಕ್ಕಾ ಧಿಕಾರಿ ವೈ.ಸಿ. ಜಂಗಶೆಟ್ಟಿ, ಬಂದೇನವಾಜ್ ಕಣ್ಣಿ, ಬಸಲಿಂಗಪ್ಪ ಬೋನಾಳ, ಅಲ್ಲಾಭಕ್ಷ ಬಾಗವಾನ, ಹಸನಸಾಬ ಶಿರಶ್ಯಾಡ, ಮಲ್ಲು ದುದ್ದಗಿ, ರಾಮು ಗೊಲ್ಲರ, ಎಂ.ಕೆ. ಮುಲ್ಲಾ, ಭೀಮಣ್ಣ ಹೋಳಿ, ಹಾವಣ್ಣ ಕಕ್ಕಳಮೇಲಿ, ರಫೀಕ್ ದೇವರನಾದಗಿ, ಪಿಂಟು ಭಾರತಿ ಸಾವಳಿಗೆಪ್ಪ ಇದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ಪಕ್ಷ ಮುನ್ನಡೆಸಲು ಮತ್ತೊಮ್ಮೆ ಅವಕಾಶ ಸಿಗುವ ವಿಶ್ವಾಸವಿದೆ: ಬಿವೈ ವಿಜಯೇಂದ್ರ
Maha Kumbh 2025: ಒಂದು ಕಾಲದಲ್ಲಿ ರಾಯಚೂರು ಡಿಸಿ.. ಈಗ ಸನ್ಯಾಸಿ!
Raichur: ಕಾಂಗ್ರೆಸ್ ಸರ್ಕಾರ ಬಂದಿರುವುದೇ ಅಲ್ಲಾಹುವಿನ ಕೃಪೆಯಿಂದ… ಚಕ್ರವರ್ತಿ ಸೂಲಿಬೆಲೆ
Raichur: ಹಸುಗಳ ಕೆಚ್ಚಲು ಕೊಚ್ಚಲು ಕಾಂಗ್ರೆಸ್ ಸರ್ಕಾರವೇ ಪ್ರೇರಣೆ: ಕೆಎಸ್ ಈಶ್ವರಪ್ಪ
Raichur: ಮೂರೂ ದಶಕಗಳ ಬಳಿಕ ನಕ್ಸಲ್ ಮಾರೆಪ್ಪ ಅರೋಳಿ ಶರಣಾಗತಿ… ಕುಟುಂಬದಲ್ಲಿ ಖುಷಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.