ಪರಸ್ಥಳದವರ ಆರೋಗ್ಯ ತಪಾಸಣೆ
Team Udayavani, Apr 22, 2020, 5:28 PM IST
ಮುದ್ದೇಬಿಹಾಳ: ನಾಗರಬೆಟ್ಟದಲ್ಲಿ ಪಿಡಿಒ ವೀರೇಶ ಹೂಗಾರ ನೇತೃತ್ವದಲ್ಲಿ ಪರ ಸ್ಥಳದವರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ
ಮುದ್ದೇಬಿಹಾಳ: ಹೊಸದಾಗಿ ರಚನೆಗೊಂಡಿರುವ ನಾಗರಬೆಟ್ಟ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ನಾಗರಬೆಟ್ಟ, ಬೂದಿಹಾಳ ಪಿಎನ್, ಖೀಲಾರಹಟ್ಟಿ, ಮಲಗಲದಿನ್ನಿ, ಜೈನಾಪುರ, ಮಾವಿನಭಾವಿ ಗ್ರಾಮಗಳಲ್ಲಿ ಕೊರೊನಾ ಜಾಗೃತಿ ಮೂಡಿಸಲು, ಲಾಕ್‌ಡೌನ್ ಪಾಲನೆಯ ಮಹತ್ವ ತಿಳಿಸಿಕೊಡಲು ಅಲ್ಲಿನ ಪಿಡಿಒ ವೀರೇಶ ಹೂಗಾರ ಅವರು ಗ್ರಾಪಂ ಅಧ್ಯಕ್ಷೆ ನೀಲಮ್ಮ ಮೂಲಿಮನಿ, ಉಪಾಧ್ಯಕ್ಷೆ ಬಸಮ್ಮ ವಳಕಲದಿನ್ನಿ, ಎಲ್ಲ ಗ್ರಾಪಂ ಸದಸ್ಯರು ಮತ್ತು ಸಿಬ್ಬಂದಿ ನೆರವಿನೊಂದಿಗೆ ಹಲವಾರು ಕ್ರಮ ಕೈಗೊಂಡಿದ್ದಾರೆ.
ಪರಸ್ಥಳದಿಂದ ಬಂದವರ ಮೇಲೆ ತೀವ್ರ ನಿಗಾವಹಿಸಲು ನಾಲತವಾಡ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಸಿ.ಬಿ. ವಿರಕ್ತಮಠ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ಕರೆಸಿ ಆರೋಗ್ಯ ತಪಾಸಣೆ ನಡೆಸಲಾಗಿದೆ. ಪರಸ್ಥಳದಿಂದ ಬಂದವರನ್ನು ಸರ್ಕಾರದ ನಿರ್ದೇಶನದಂತೆ ಹೋಮ್ ಕ್ವಾರಂಟೈನ್‌ಗೊಳಪಡಿಸಿ ಮನೆಯಿಂದ ಹೊರಗೆ ಬಂದು ಎಲ್ಲೆಂದರಲ್ಲಿ ತಿರುಗಾಡದಂತೆ ಎಚ್ಚರಿಸಲಾಗಿದೆ.
ರೇಷನ್, ಕಿರಾಣಿ ಮತ್ತಿತರ ಅಂಗಡಿಗಳಲ್ಲಿ ಸಾಮಗ್ರಿ ಪಡೆಯಲು ಸುಣ್ಣದಲ್ಲಿ ಬಾಕ್ಸ್ ಗೆರೆ ಹಾಕಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಲಾಗಿದೆ. ಸ್ವತ್ಛತೆಗೆ ಹೆಚ್ಚಿನ ಆದ್ಯತೆ ಕೊಡಲಾಗಿದ್ದು ಫಾಗಿಂಗ್, ಚರಂಡಿ ಸ್ವತ್ಛತೆ, ಕೊಳಚೆಯನ್ನು ಬೇರೆಡೆ ಸಾಗಿಸುವುದು, ಪೌಡರ್ ಸಿಂಪಡಿಕೆ ಮಾಡಲಾಗಿದೆ. ಆಟೋದಲ್ಲಿ ಮೈಕ್ ಹಚ್ಚಿ ಕೊರೊನಾ ಮತ್ತು ಲಾಕ್‌ಡೌನ್ ಬಗ್ಗೆ ವ್ಯಾಪಕ ಪ್ರಚಾರ ನಡೆಸಲಾಗಿದೆ. ಪೊಲೀಸರು, ಆರೋಗ್ಯ ಕಾರ್ಯಕರ್ತೆಯರು, ಪಂಚಾಯತ್ ಸಿಬ್ಬಂದಿ ತಂಡದ ಜೊತೆಗೂಡಿ ಸ್ಥಳೀಯ ಸಂಘಟನೆಗಳ ಸಹಕಾರದೊಂದಿಗೆ ಎಲ್ಲೆಡೆ ಪ್ರಚಾರ ನಡೆಸಿ ಕೊರೊನಾ ಗ್ರಾಮ ಪ್ರವೇಶಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವುದು, ಪರ ಸ್ಥಳದವರು ಊರೊಳಗೆ ಬಂದರೂ ತಕ್ಷಣ ಮಾಹಿತಿ ಪಡೆದು, ಅವರ ಪ್ರಯಾಣದ ಹಿಸ್ಟರಿ ಪಡೆದು ಸಂಶಯ ಕಂಡುಬಂದಲ್ಲಿ ಮೇಲಧಿಕಾರಿಗಳ ಗಮನಕ್ಕೆ ತಂದು ಹೋಮ್ ಕ್ವಾರಂಟೈನ್ ಮಾಡಿದ್ದು ಶ್ಲಾಘನೆಗೆ ಕಾರಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಸಿದ್ದರಾಮಯ್ಯ ಈಗ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ: ಯತ್ನಾಳ್ ಟೀಕೆ
ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ
Panchamasali;ಈಗಲೂ ಮೀಸಲಾತಿ ಹೋರಾಟ ಮಾಡುತ್ತಿದ್ದೇನೆ: ಲಕ್ಷ್ಮೀ ಹೆಬ್ಬಾಳಕರ್
Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.