ರಸ್ತೆ ಅಭಿವೃದ್ಧಿ ಕಾಮಗಾರಿಗಳು ಮತ್ತೆ ಆರಂಭ
Team Udayavani, Apr 23, 2020, 5:15 AM IST
ಪುತ್ತೂರು: ಲಾಕ್‌ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಸರಕಾರದ ಸೂಚನೆಯಂತೆ ತಿಂಗಳ ಬಳಿಕ ಮತ್ತೆ ಆರಂಭಿಸಲಾಗಿದೆ.
ಮಾರ್ಚ್, ಎಪ್ರಿಲ್ ತಿಂಗಳುಗಳಲ್ಲಿ ಪೂರ್ಣಗೊಳ್ಳಬೇಕಿದ್ದ ರಸ್ತೆ ಕಾಮ ಗಾರಿಗಳನ್ನು ಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ಸ್ಥಗಿತಗೊಳಿಸಲಾಗಿತ್ತು. ಆದರೆ ಮುಂದೆ ಮಳೆಗಾಲ ಆರಂಭ ವಾಗುವುದರಿಂದ ಅರ್ಧದಲ್ಲಿ ಬಾಕಿ ಯಾದ ಕಾಮಗಾರಿಗಳಿಂದ ಮತ್ತಷ್ಟು ಸಮಸ್ಯೆಗಳು ಉಲ½ಣಗೊಳ್ಳುವ ಹಿನ್ನೆಲೆ ಯಲ್ಲಿ ಬೇಗ ಮುಗಿಸಲು ತೀರ್ಮಾನ ಕೈಗೊಳ್ಳಲಾಗಿದೆ.
ಮಾಣಿ -ಮೈಸೂರು ಹೆದ್ದಾರಿ
ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿರುವ ಮಾಣಿ -ಮೈಸೂರು ರಸ್ತೆಯಲ್ಲಿ ಮರು ಡಾಮರು ಕಾಮಗಾರಿ ಮಾಣಿಯಿಂದ ಸಂಪ್ಯ ತನಕ ಸುಮಾರು 18 ಕಿ.ಮೀ. ಪೂರ್ತಿಗೊಂಡಿತ್ತು. ಜಾಲೂÕರಿನಿಂದಲೂ 15 ಕಿ.ಮೀ. ಪೂರ್ತಿಗೊಂಡಿತ್ತು. ಇನ್ನು 22 ಕಿ.ಮೀ., 16.6 ಕಿ.ಮೀ. ಸೇರಿ ಒಟ್ಟು ಸುಮಾರು 38.6 ಕಿ.ಮೀ. ಮರು ಡಾಮರು ಕಾಮಗಾರಿ ಬಾಕಿಯಿದ್ದು, ಈಗ ಕೆಲಸ ಆರಂಭಿಸಲಾಗಿದೆ.
ರಾ.ಹೆ.ಯ ಮಾಣಿ – ಸಂಪಾಜೆ ವ್ಯಾಪ್ತಿಯ 71.6 ಕಿ.ಮೀ. ರಸ್ತೆಯನ್ನು ಎರಡು ವಿಭಾಗಗಳಲ್ಲಿ ಮರು ಡಾಮರು ಕಾಮಗಾರಿ ನಡೆಸಲು ಟೆಂಡರ್ ನಡೆದಿತ್ತು. 0-40 ಕಿ.ಮೀ. ತನಕ 14 ಕೋಟಿ ರೂ., ಅನಂತರದ 31.6 ಕಿ.ಮೀ. ವ್ಯಾಪ್ತಿಗೆ 10.23 ಕೋಟಿ ರೂ. ಟೆಂಡರ್ ಆಗಿದೆ.
ವಿವಿಧ ಕಾಮಗಾರಿಗಳಿಗೆ ಚಾಲನೆ
ಅರ್ಧದಲ್ಲಿ ಬಾಕಿಯಾಗಿರುವ ಪುತ್ತೂರು ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಬರುವ ಅವಿಭಜಿತ ತಾಲೂಕಿನ ಕಡಬ -ಗುಂಡ್ಯ- ಕುಲ್ಕುಂದ, ಕುದ್ಮಾರು -ಶಾಂತಿ ಮೊಗರು, ಪುತ್ತೂರು -ಉಪ್ಪಿನಂಗಡಿ ರಸ್ತೆ ಕಾಮಗಾರಿಗಳಲ್ಲಿ ಮುಖ್ಯವಾಗಿ ಚರಂಡಿ, ತಡೆಗೋಡೆಗಳ ನಿರ್ಮಾಣ ಕೆಲಸಗಳನ್ನು ಮಾಡ ಲಾಗುತ್ತದೆ. ಐತ್ತೂರಿನ ಸೇತುವೆ, ಕೆದಂಬಾಡಿ ಶಾಲಾ ಸಂಪರ್ಕ ರಸ್ತೆಯ ಸೇತುವೆಗಳಿಗೆ ಸಂಬಂಧಿಸಿದ ಕೆಲಸಗಳನ್ನು ನಡೆಸಲಾಗುತ್ತದೆ. ಬನ್ನೂರಿನಲ್ಲಿ ನಿರ್ಮಾಣವಾಗುತ್ತಿರುವ ನ್ಯಾಯಾಲಯ ಸಂಕೀರ್ಣದ ಕಾಮ ಗಾರಿಯನ್ನೂ ಮತ್ತೆ ಆರಂಭಿಸಲಾಗಿದೆ.
ಜಲ್ಲಿ ಸಮಸ್ಯೆ
ಹಾಲಿ ನಿರ್ಮಾಣ ಕೆಲಸಗಳಿಗೆ ಸಂಬಂಧಿಸಿದ ಸಾಮಗ್ರಿಗಳ ಸಂಗ್ರಹ ಇದಷ್ಟು ಕೆಲಸಗಳನ್ನು ನಿರ್ವಹಿ ಸಲಾಗುತ್ತದೆ. ಮರಳು ಲೋಕೋ ಪಯೋಗಿ ಇಲಾಖೆಗೆ ಸಂಬಂಧಿಸಿ ಉಪ್ಪಿನಂಗಡಿಯಲ್ಲಿರುವ ಯಾರ್ಡ್ ನಲ್ಲಿ ಸಂಗ್ರಹವಿದೆ.
ಉಳಿದಂತೆ ಗಣಿ ಇಲಾಖೆ ಚಟುವಟಿ ಕೆಗಳು ಆರಂಭಗೊಳ್ಳದೆ ಇರುವುದರಿಂದ ಅಗತ್ಯ ಲಭಿಸುವುದು ಕಷ್ಟ. ಜಿಲ್ಲಾ ಪಂಚಾಯತ್‌ಎಂಜಿನಿಯರಿಂಗ್ ಇಲಾ ಖೆಯಿಂದ ನಡೆಯುತ್ತಿರುವ ಅರ್ಧದಲ್ಲಿ ಬಾಕಿಯಾಗಿರುವ ಕಾಮಗಾರಿ ಗಳನ್ನೂ ಅಗತ್ಯ ಪರಿಗಣಿಸಿ ಮತ್ತೆ ಆರಂಭಿಸಲಾಗುತ್ತಿದೆ.
ಅತೀ ಅಗತ್ಯ ಕೆಲಸಗಳಿಗೆ ಆದ್ಯತೆ
ರಸ್ತೆ ಸಹಿತ ಇಲಾಖೆಗೆ ಸಂಬಂಧಿಸಿದ ಅರ್ಧದಲ್ಲಿ ಬಾಕಿಯಾಗಿರುವ ಅಭಿವೃದ್ಧಿ ಕೆಲಸಗಳಲ್ಲಿ ತ್ವರಿತವಾಗಿ ಆಗಬೇಕಿರುವ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಆದ್ಯತೆಯಲ್ಲಿ ಮುಂದುವರಿಸಲಾಗಿದೆ.
- ಪ್ರಮೋದ್ ಕುಮಾರ್, ಸಹಾಯಕ ಎಂಜಿನಿಯರ್ ಲೋಕೋಪಯೋಗಿ ಇಲಾಖೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.