ಕುಂದಾಪುರದ ಲಿಫ್ಟರ್‌ಗಳಿಗೆ ಮನೆಯೇ ಅಭ್ಯಾಸ ಶಾಲೆ
Team Udayavani, Apr 23, 2020, 5:30 AM IST
ಕುಂದಾಪುರ: ಲಾಕ್‌ಡೌನ್ ಹಿನ್ನೆಲೆ ಕ್ರೀಡಾಪಟುಗಳ ಫಿಟ್‌ನೆಸ್ ಕಾಯ್ದುಕೊಳ್ಳುವ ತರಬೇತಿಗೂ ತೊಡಕಾಗಿದೆ. ಆದರೂ ಕುಂದಾಪುರ ಮೂಲದ ವೇಟ್‌ಲಿಫ್ಟರ್ ಕಾಮನ್‌ವೆಲ್ತ್ ಬೆಳ್ಳಿ ಪದಕ ವಿಜೇತ ಗುರುರಾಜ್ ಹಾಗೂ ವಿಶ್ವ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ವಿಜೇತ ವಿಶ್ವನಾಥ ಗಾಣಿಗ ಅವರು ತಮ್ಮ ಮನೆಯಲ್ಲಿಯೇ ಅಭ್ಯಾಸ ನಡೆಸುವ ಮೂಲಕ ಸಿಕ್ಕ ಸಮಯಾವಕಾಶವನ್ನು ಸದ್ವಿನಿಯೋಗ ಮಾಡುತ್ತಿದ್ದಾರೆ.
ಸ್ನೇಹಿತನ ರೂಂನಲ್ಲಿ ಫಿಟ್‌ನೆಸ್
2018ರಲ್ಲಿ ಆಸ್ಟ್ರೇಲಿಯದ ಗೋಲ್ಡ್‌ಕೋಸ್ಟ್ ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ತಂದು ಕೊಟ್ಟ ಹೆಗ್ಗಳಿಕೆಯ ವಂಡ್ಸೆ ಸಮೀಪದ ಚಿತ್ತೂರಿನ ಗುರುರಾಜ್ ಪೂಜಾರಿ ಅವರು ಫಿಟ್‌ನೆಸ್‌ಗಾಗಿ ಉಜಿರೆಯಲ್ಲಿರುವ ತನ್ನ ಸ್ನೇಹಿತನ ರೂಂನಲ್ಲಿ ದ್ದಾರೆ. ಅಲ್ಲೇ ಬೆಳಗ್ಗೆ 2 ಗಂಟೆ ಹಾಗೂ ಸಂಜೆ 2 ಗಂಟೆಗಳ ಕಾಲ ತರಬೇತಿ ಮಾಡುತ್ತಿದ್ದಾರೆ.
ಚಂಡೀಗಢದಲ್ಲಿ ಏರ್‌ಫೋರ್ಸ್‌ನಲ್ಲಿ ಉದ್ಯೋಗದಲ್ಲಿರುವ ಇವರು ಫೆಬ್ರವರಿಯಲ್ಲಿ 40 ದಿನಗಳ ರಜೆಗೆಂದು ಊರಿಗೆ ಬಂದಿದ್ದು, ಆ ಬಳಿಕ ಲಾಕ್‌ಡೌನ್‌ನಿಂದಾಗಿ ವಾಪಸು ತೆರಳಲು ಸಾಧ್ಯವಾಗಿರಲಿಲ್ಲ. ಊರಲ್ಲಿದ್ದರೆ ಫಿಟ್‌ನೆಸ್‌ಗಾಗಿ ಅಭ್ಯಾಸ ಕಷ್ಟ ಎಂದು, ಉಜಿರೆಯ ತನ್ನ ಸ್ನೇಹಿತನ ರೂಂನಲ್ಲಿದ್ದುಕೊಂಡು ಜತೆಯಾಗಿ ಅಭ್ಯಾಸ ಮಾಡುತ್ತಿದ್ದಾರೆ. ಪುಶ್‌ಅಪ್, ಜಾಗ್, ಜಂಪ್ಸ್, ಸ್ಟೆಪ್ಸ್ ವಕೌìಟ್, ಕೋರ್ ಸ್ಟ್ರೆಂಥ್, ಸ್ಟೆಬಿಲಿಟಿ ಎಕ್ಸೈಜ್, ಹೈಪರ್ ಎಕ್ಸೈಜ್, ಮತ್ತಿತರ ತರಬೇತಿಗಳನ್ನು ನಿತ್ಯವೂ ಮಾಡುತ್ತಿದ್ದಾರೆ. ಎಲ್ಲವೂ ಸರಿಯಿದ್ದಿದ್ದರೆ ವೇಟ್‌ಲಿಫ್ಟಿಂಗ್ ಕಾಮನ್‌ವೆಲ್ತ್ ಚಾಂಪಿಯನ್ ಶಿಪ್‌ನಲ್ಲಿ ಗುರುರಾಜ್ ಪಾಲ್ಗೊಳ್ಳಬೇಕಿತ್ತು. ಆದರೆ ಅದೀಗ ಮುಂದೂಡಿಕೆಯಾಗಿದೆ.
ಮೂಲೆಗುಂಪಾದ ವಸ್ತುಗಳೇ
ಫಿಟ್‌ನೆಸ್ ಸಲಕರಣೆ
ಎರಡು ಬಾರಿಯ ಕಾಮನ್‌ವೆಲ್ತ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ದೇವಲ್ಕುಂದ ಗ್ರಾಮದ ಬಾಳಿ ಕೆರೆಯ ವಿಶ್ವನಾಥ ಭಾಸ್ಕರ ಗಾಣಿಗ ಅವರು ಮನೆಯಲ್ಲಿಯೇ ಅಭ್ಯಾಸ ನಿರತರಾಗಿದ್ದಾರೆ. ಮನೆಯಲ್ಲಿ ಮೂಲೆಗುಂಪಾಗಿ ಬಿದ್ದಿದ್ದ ರಾಡ್‌ವೊಂದರ ಎರಡು ಭಾಗಗಳ ತುದಿಗೆ ಮರಳು ಚೀಲ ಹಾಗೂ ಬಕೆಟ್‌ಗಳನ್ನು ಕಟ್ಟಿ ಕೊಂಡು ವೇಯ್r ಪ್ಲೇಟ್ಸ್ ಮಾಡಿ, ತರಬೇತಿ ನಡೆಸುತ್ತಿದ್ದಾರೆ.
35 ಕೆ.ಜಿ.ಯ ನಾಲ್ಕು ಚೀಲಗಳು, 17.5 ಕೆ.ಜಿ.ಯ ಎರಡು ಬಕೆಟ್‌ಗಳು ಸೇರಿದಂತೆ ಒಟ್ಟು 175 ಕೆ.ಜಿ.ಯ ಬಾರ್ಬೆಲ್‌ನಲ್ಲಿ ದಿನನಿತ್ಯ ಅಭ್ಯಾಸ ನಡೆಸುತ್ತಿದ್ದಾರೆ. ಬೆಳಗ್ಗೆ ಒಂದೂವರೆ ಗಂಟೆ ಹಾಗೂ ಸಂಜೆ ಎರಡೂವರೆ ಗಂಟೆ ಅಭ್ಯಾ ಸದಲ್ಲಿ ತೊಡಗಿಕೊಂಡಿದ್ದಾರೆ. ಇನ್ನು ತಮ್ಮಲ್ಲಿರುವ ಡಂಬಲ್ಸ್ ಮತ್ತು ರೆಸಿಸ್ಟೆನ್ಸ್ ಬ್ಯಾಂಡ್‌ನಲ್ಲೂ ಅಭ್ಯಾಸ ಮಾಡುತ್ತಿದ್ದಾರೆ.
ಬೆಂಗಳೂರಿನ ಸಾಫ್ಟ್‌ವೇರ್ ಕಂಪೆನಿ ಯೊಂದರಲ್ಲಿ ಉದ್ಯೋಗಿಯಾಗಿರುವ ವಿಶ್ವನಾಥ್ ಲಾಕ್‌ಡೌನ್ ಮೊದಲೇ ಊರಿಗೆ ಬಂದಿದ್ದು, ಆ ಬಳಿಕ ಅಲ್ಲಿಗೆ ತೆರಳಲಾಗದೇ ಇಲ್ಲಿಯೇ ಉಳಿದುಕೊಂಡಿದ್ದಾರೆ. ಶಾಲಾ ದಿನಗಳಲ್ಲಿ ಗೇರು ಬೀಜ ಹೆಕ್ಕುವ ಕೆಲಸ ಮಾಡು ತ್ತಿದ್ದೆ. ಈಗ ಮತ್ತೆ ಸಮಯಾವಕಾಶ ಸಿಕ್ಕಿದ್ದು, ಆ ಕೆಲಸವನ್ನು ಮಾಡುತ್ತಿದ್ದೇನೆ. ಇದರೊಂದಿಗೆ ಸಿನೆಮಾ ವೀಕ್ಷಣೆ, ಫಿಟ್‌ನೆಸ್ ಕುರಿತ ಪುಸ್ತಕಗಳನ್ನು ಓದುತ್ತಿದ್ದಾರೆ.
-ಪ್ರಶಾಂತ್ ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್ ಪರದಾಟ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
PCB;ಕರಾಚಿ ಕ್ರೀಡಾಂಗಣದ ನವೀಕರಣ ಕಾರ್ಯ ಪೂರ್ಣಕ್ಕೆ ಹರಸಾಹಸ
FIFA ಸೌಹಾರ್ದ ಫುಟ್‌ಬಾಲ್ ಪಂದ್ಯ: ಮಾಲ್ದೀವ್ಸ್ ವಿರುದ್ಧ ಭಾರತಕ್ಕೆ 11-1 ಗೆಲುವು
450 ಕೋಟಿ ಚಿಟ್ ಫಂಡ್ ಹಗರಣ: ಶುಭಮನ್ ಗಿಲ್ ಸೇರಿ ನಾಲ್ವರಿಗೆ ಸಿಐಡಿ ಸಮನ್ಸ್ ಸಾಧ್ಯತೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.