ಮೂರು ತಲೆಮಾರುಗಳ ಸುತ್ತ ಸಂಡೇ
Team Udayavani, Apr 23, 2020, 10:42 AM IST
ಚಿತ್ರರಂಗಕ್ಕೆ ಬರುವ ಬಹುತೇಕರ ಮೊದಲು ಮಾಡುವ ಕೆಲಸವೆಂದರೆ ಅದು ಕಿರುಚಿತ್ರ. ಆ ಕಿರುಚಿತ್ರದ ಮೂಲಕ ತಮ್ಮ ಪ್ರತಿಭೆ ಪ್ರದರ್ಶಿಸುತ್ತಾರೆ. ಹೊಸಬರಿಗೆ ಕಿರುಚಿತ್ರ ತಮ್ಮ ಪ್ರತಿಭಾ ಪ್ರದರ್ಶನದ ವೇದಿಕೆ ಇದ್ದಂತೆ ಎಂದರೆ ತಪ್ಪಲ್ಲ. ಈಗಾಗಲೇ ಕಿರುಚಿತ್ರ ಮಾಡಿ ಗೆದ್ದವರು ಸಿನಿಮಾ ಮಾಡಿಯೂ ಗೆದ್ದಿದ್ದಾರೆ. ಈಗ ಆ ಸಾಲಿಗೆ ಮತ್ತೂಂದು ತಂಡ ಸೇರ್ಪಡೆಯಾಗಿದೆ. ಅದು ಸಂಡೇ.
ಹೌದು, ಸಂಡೇ ಎಂಬ ಕಿರುಚಿತ್ರವೊಂದು ಇತ್ತೀಚೆಗೆ ಬಿಡುಗಡೆಯಾಗಿದೆ. ಮೂರು ತಲೆಮಾರುಗಳ ಕಥೆ ಹೇಳುವ ಈ ಸಂಡೆ ಕಿರುಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಕಿರುಚಿತ್ರ ನಮ್ಮ ಪ್ರಸ್ತುತ ಪೀಳಿಗೆಯ ಆಲೋಚನೆ ಹಾಗೂ ಎಲ್ಲರ ಮನೆಯಲ್ಲೂ ನಡೆಯುವ ಸಾಮಾನ್ಯ ಸಂದರ್ಭಗಳನ್ನು ಕಥಾವಸ್ತುವಾಗಿ ಹೊಂದಿದೆ. ಪ್ರತಿ ಕುಟುಂಬದಲ್ಲೂ ಇರುವ ಸಹಜ ಸಂಭಾಷಣೆಗಳನ್ನು ಸಾಧ್ಯವಾದಷ್ಟು ಸರಳ ರೀತಿಯಲ್ಲಿ ತೆರೆಗೆ ತರುವುದು ಇದರ ಹಿಂದಿನ ಮುಖ್ಯ ಉದ್ದೇಶವಾಗಿತ್ತು. ಈ ಕಿರುಚಿತ್ರದ ಮುಖ್ಯ ಭೂಮಿಕೆಯಲ್ಲಿ ಕನ್ನಡ ಚಲನಚಿತ್ರ ಮತ್ತು ಕಿರುತೆರೆ ನಟರಾದ ಅರುಣಾ ಬಾಲರಾಜ್, ಶ್ರುತಿ ರಘುನಂದ ಹಾಗೂ ವಿಜಯಲಕ್ಷಿ¾ ದೇವಿಯವರು ಅಭಿನಯಿಸಿದ್ದಾರೆ. 50 ಎಂಎಂ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಕಿರುಚಿತ್ರಕ್ಕೆಫ್ಲಿಕ್ಕರಿಂಗ್ ಸ್ಟುಡಿಯೋ ಸಹನಿರ್ಮಾಣವಿದೆ. ಈ ಹಿಂದೆ ಕಲಾ ನಿರ್ದೇಶನ ಮತ್ತು ಸಹ ನಿರ್ದೇಶಕಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟು ಈಗ ಚಿತ್ರ ನಿರ್ದೇಶನದತ್ತ ಮುಖ ಮಾಡಿರುವ ಸುಸ್ಮಿತ ಸಮೀರ ಈ ಕಿರುಚಿತ್ರದ ಕಥೆ ಮತ್ತು ನಿರ್ದೇಶನ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Toxic Movie: ʼಟಾಕ್ಸಿಕ್ʼನಲ್ಲಿ ನಟಿಸಲು ಯಶ್ ಪಡೆದ ಸಂಭಾವನೆ ಎಷ್ಟು?
Toxic Movie: ಕೇವಲ 13ಗಂಟೆಯಲ್ಲೇ ʼಪುಷ್ಪ-2ʼ ದಾಖಲೆ ಉಡೀಸ್ ಮಾಡಿದ ಯಶ್ ʼಟಾಕ್ಸಿಕ್ʼ
Teertharoopa Tandeyavarige: ತೀರ್ಥರೂಪರ ಜೊತೆ ರಚನಾ
Sathish Ninasam: ಅಶೋಕನಿಗೆ ನೀನಾಸಂ ಸತೀಶ್ ಸಾಥ್
Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.