ಭಣಗುಡುತ್ತಿವೆ ಪೆಟ್ರೋಲ್ ಬಂಕ್‌ಗಳು
Team Udayavani, Apr 23, 2020, 1:19 PM IST
ಹುಬ್ಬಳ್ಳಿ: ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಶೂನ್ಯಕ್ಕಿಳಿದಿದೆ. ಇನ್ನೊಂದು ಕಡೆ ಕೋವಿಡ್ 19 ಕಾರಣದಿಂದ ನಗರದ ಬಹುತೇಕ ಪೆಟ್ರೋಲ್ ಬಂಕ್‌ಗಳು ವಹಿವಾಟು ಇಲ್ಲದೆ ಬಣಗುಟ್ಟುತ್ತಿವೆ. ವಾಹನ ಸಂಚಾರ ವಿರಳವಾಗಿದ್ದರಿಂದ ವಾಯು-ಶಬ್ದ ಮಾಲಿನ್ಯದಲ್ಲೂ ಗಣನೀಯ ಇಳಿಕೆಯಾಗಿದೆ.
ಸರಕಾರಿ-ಖಾಸಗಿ ಸಾರಿಗೆ, ರೈಲ್ವೆ ಸಂಚಾರ, ವಿವಿಧ ವಾಹನಗಳ ಸಂಚಾರ ಬಹುತೇಕ ಸ್ಥಗಿತಗೊಂಡಿದ್ದರಿಂದ ಪೆಟ್ರೋಲ್-ಡಿಸೇಲ್ ಬಳಕೆ ಪ್ರಮಾಣ ಗಣನೀಯವಾಗಿ ತಗ್ಗಿದೆ. ನಗರದಲ್ಲಿ ಸುಮಾರು 50ಕ್ಕೂ ಹೆಚ್ಚು ವಿವಿಧ ಕಂಪೆನಿಗಳ ಪೆಟ್ರೋಲ್ ಪಂಪ್ ಗ್ಳಿದ್ದು, ಅಲ್ಲೆಲ್ಲ ಈಗಾಗಲೇ ಕಳೆದ ಒಂದು ತಿಂಗಳಿಂದ ಖಾಸಗಿ ವಾಹನಗಳು ಪೆಟ್ರೋಲ್, ಡಿಸೇಲ್ ಹಾಕಿಸಿಕೊಳ್ಳುವುದು ಬಂದ್ ಆಗಿದೆ. ಲಾಕ್‌ಡೌನ್ ನಿಂದ ಸಾವಿರಾರು ವಾಹನಗಳು ಮನೆಯ ಅಂಗಳ ಬಿಟ್ಟು ಹೊರ ಬಂದಿಲ್ಲ. ಇದರಿಂದ ಸುಮಾರು ಶೇ.70 ಪೆಟ್ರೋಲ್ ಹಾಗೂ ಡಿಸೇಲ್ ಉಳಿತಾಯವಾಗಿದೆ ಎನ್ನುಬಹುದು.
ಕೃಷಿ-ಅತ್ಯವಶ್ಯಕ ವಾಹನಗಳಿಗೆ ಮಾತ್ರ: ನಗರದಲ್ಲಿರುವ ಬಹುತೇಕ ಪೆಟ್ರೋಲ್ ಪಂಪ್‌ಗ್ಳಲ್ಲಿ ಅವಶ್ಯಕವಾಗಿ ಬೇಕಾಗಿರುವ ವಾಹನಗಳು ಅಂದರೆ ಆಂಬ್ಯುಲನ್ಸ್, ಕೃಷಿ ಕಾರ್ಯದ ವಾಹನ, ಪೊಲೀಸ್ ವಾಹನ, ವಿವಿಧ ಇಲಾಖೆಗಳ ವಾಹನಗಳು, ಅವಶ್ಯಕ ವಸ್ತುಗಳ ಸಾಗಣೆ ವಾಹನ, ತುರ್ತು ಸೇವೆಯಲ್ಲಿದ್ದವರು, ತುರ್ತು ಕಾರ್ಯಕ್ಕೆಂದು ಹೋಗುವವರು, ಮಾಧ್ಯಮದ ವಾಹನಗಳಿಗೆ ಮಾತ್ರ ಪೆಟ್ರೋಲ್, ಡಿಸೇಲ್ ನೀಡಲಾಗುತ್ತಿದೆ. ಸಾಕಷ್ಟು ಸಂಗ್ರಹ: ನಗರದಲ್ಲಿರುವ ಬಿಪಿಸಿಎಲ್, ಎಚ್‌ಪಿ, ಇಂಡಿಯನ್ ಆಯಿಲ್ ಕಾರ್ಪೋರೇಷನ್ ಸೇರಿದಂತೆ ಎಲ್ಲ ಇಂಧನ ವಿತರಕರ ಬಳಿಯೂ ಇಂಧನ ಸಾಕಷ್ಟು ದಾಸ್ತಾನು ಇದ್ದು, ಯಾವುದೇ ಸಮಸ್ಯೆ ಇಲ್ಲ. ಸಂಗ್ರಹವಿದೆ.
ಲಾಕ್‌ಡೌನ್ ಘೋಷಣೆ ಹಿನ್ನೆಲೆಯಲ್ಲಿ ಸರಕಾರಿ-ಖಾಸಗಿ ಸೇರಿದಂತೆ ಬಹುತೇಕ ವಾಹನಗಳ ಸಂಚಾರ ಬಂದ್ ಆಗಿರುವುದರಿಂದ ಶೇ.70 ಇಂಧನ ಉತ್ಪನ್ನಗಳ ಮಾರಾಟ ಇಳಿಕೆ ಕಂಡಿದೆ. ಅಗತ್ಯ ಸೇವೆಯಲ್ಲಿರುವ ವಾಹನಗಳಿಗೆ ಮಾತ್ರ ಇಂಧನ ಬಳಕೆ ಮಾಡಲಾಗಿದ್ದು, ಇದರಿಂದ ಹೆಚ್ಚು ಉಳಿತಾಯವಾಗಿದೆ ಎನ್ನಬಹುದು. ಇನ್ನು ಇಂಧನ ದಾಸ್ತಾನು ಸಾಕಷ್ಟು ಇದ್ದು, ಯಾವುದಕ್ಕೂ ಕೊರತೆ ಇಲ್ಲವಾಗಿದೆ. –ಹೆಸರು ಹೇಳಲಿಚ್ಛಿಸದ ಐಓಸಿ ಕಂಪನಿ ಅಧಿಕಾರಿ.
-ಬಸವರಾಜ ಹೂಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.