ಜೀವ ಭಯ ಇದ್ರೂ ಜೀವ ಉಳಿಸಿದ ನೆಮ್ಮದಿ!
Team Udayavani, Apr 23, 2020, 3:25 PM IST
ಸಾಂದರ್ಭಿಕ ಚಿತ್ರ
ಬಾಗಲಕೋಟೆ: ಕೋವಿಡ್ 19 ಅಂದಾಕ್ಷಣ ಮೊದಲು ನಮಗೂ ಭಯವಾಗಿತ್ತು. ಆ ವಾರ್ಡ್‌ಗೆ ಡ್ನೂಟಿ ಪಡೆಯಲು ಎಲ್ಲರೂ ಹೆದರುತ್ತಿದ್ದರು. ನಮ್ಮ ಹಿರಿಯ ವೈದ್ಯರು, ಅಧಿಕಾರಿಗಳು ಆತ್ಮಸ್ಥೈರ್ಯದ ಜತೆಗೆ ತರಬೇತಿಯೂ ಕೊಟ್ಟರು. ಎಲ್ಲ ಮಲೇರಿಯಾ, ಡೆಂಘಿಯಂತೆ ಅದೂ ಒಂದೊಂದು ಸಾಂಕ್ರಾಮಿಕ ರೋಗ. ನಮಗೆ ಆರಂಭದಲ್ಲಿ ಜೀವ ಭಯ ಎನಿಸಿದರೂ ಒಂದು ಜೀವ ಉಳಿಸುವ ಕೆಲಸ ಮಾಡಿದ ನೆಮ್ಮದಿ ಇತ್ತು.
ಹೀಗೆ ಹೇಳಿಕೊಂಡವರು ನವನಗರದ ಜಿಲ್ಲಾ ಕೋವಿಡ್ -19 ಆಸ್ಪತ್ರೆಯಲ್ಲಿ ಕೋವಿಡ್ -19 ಸೋಂಕಿತರ ಆರೈಕೆ ಮಾಡಿದ ಹಿರಿಯ ಶುಶ್ರೂಷಕಿ. ಮನೆಯಲ್ಲಿ ಮೂರು ವರ್ಷದ ಮಗು. 14 ದಿನಗಳ ಕಾಲ ಮನೆಗೆ ಹೋಗದೇ ಆಸ್ಪತ್ರೆಯಲ್ಲಿಯೇ ಇರಬೇಕಿತ್ತು. ಒಮ್ಮೆ ಕೋವಿಡ್-19 ವಾರ್ಡ್‌ಗೆ ಹೋದರೆ ಪಿಪಿಇ ಕಿಟ್ ಧರಿಸಿಯೇ ಹೋಗಬೇಕು. ಅದು ಧರಿಸುವ ಮುಂಚೆಯೇ ನಮ್ಮ ಎಲ್ಲ ಕೆಲಸ ಮುಗಿಸಿಕೊಳ್ಳಬೇಕು. ಹೆಚ್ಚಿಗೆ ನೀರೂ ಕುಡಿಯುವಂತಿರಲಿಲ್ಲ. ಪಿಪಿಇ ಕಿಟ್ ಧರಿಸಿದಾಗ, ನೈಸರ್ಗಿಕ ಕ್ರಿಯೆಗೂ ಹೋಗುವಂತಿರಲಿಲ್ಲ. ಹೀಗಾಗಿ ಒಮ್ಮೆ ಕಿಟ್ ಧರಿಸಿದರೆ, 6 ಗಂಟೆ ತಗೆಯುವಂತಿಲ್ಲ. ಎಷ್ಟೇ ಕಷ್ಟವೆನಿಸಿದರೂ, ನಾವೆಲ್ಲ ಕೆಲಸ ಮಾಡಿದೇವು. ನಮಗೆ ಹಿರಿಯ ಅಧಿಕಾರಿಗಳ, ವೈದ್ಯರ ಸಲಹೆ-ಮಾರ್ಗದರ್ಶನವೂ ಇತ್ತು. ಹೀಗಾಗಿ ಜೀವ ಭಯ ಬಿಟ್ಟು ಎಂದಿನಂತೆ ಕೆಲಸ ಮಾಡಿದೇವು.
ಮಕ್ಕಳ ನೋಡಿ ಕಣ್ಣೀರಾದೇವು: ಏ. 2ರಂದು ನಮಗೆ ಕೋವಿಡ್ 19 ವಾರ್ಡ್‌ಗೆ ಡ್ನೂಟಿ ಹಾಕಿದ್ದರು. ಆಗಲೇ ಆಸ್ಪತ್ರೆಗೆ ಬಂದಿದ್ದ ವೃದ್ಧರಿಗೆ ಸೋಂಕು ತಗುಲಿತ್ತು. ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ. ಅವರಿಗೆ ಬೇರೆ ಬೇರೆ ಕಾಯಿಲೆ ಇದ್ದುದ್ದರಿಂದ ಚಿಕಿತ್ಸೆ ಫಲಿಸಲಿಲ್ಲ. ಆದರೆ, ಏ. 7ರಂದು ಮೂರು ಮಕ್ಕಳು, ಕೋವಿಡ್ 19 ಸೋಂಕಿನಿಂದ ಆಸ್ಪತ್ರೆಗೆ ಬಂದರು. ಆ ಮಕ್ಕಳಿಗೆ ಈ ಜೀವ ಕಂಟಕದ ಸೋಂಕು ಬಂದಿರುವುದು ದುಃಖ ಉಮ್ಮಳಿಸಿ ಬರುವಂತೆ ಮಾಡಿತು. ಅದರಲ್ಲೂ ನಾಲ್ಕು ವರ್ಷದ ಪುಟ್ಟ ಮಗುವನ್ನು ಆ ವಾರ್ಡ್‌ನಲ್ಲಿರುವರೆಲ್ಲ ಪ್ರೀತಿಯಿಂದ ಆರೈಕೆ ಮಾಡಿದೇವು. ದೇವರು ದೊಡ್ಡವನು. ಎಲ್ಲರೂ ಚಿಕಿತ್ಸೆಗೆ ಸ್ಪಂದಿಸಿದರು. ಬಹುತೇಕರು ಗುಣಮುಖರಾಗುತ್ತಾರೆ ಎಂಬ ನಂಬಿಕೆ ನಮಗಿದೆ. 14 ದಿನಗಳ ಬಳಿಕ ಮನೆಗೆ ಬಂದೆ. ಮೂರು ವರ್ಷದ ಮಗು, ಪತಿ, ಸಹೋದರ ಕಾಯುತ್ತಿದ್ದರು. ನೀ ಹ್ಯಾಂಗ್ ಅದೀ ಎಂದು ನನ್ನ ಆರೋಗ್ಯ ವಿಚಾರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kulgeri Cross; ನಾಡಿನಲ್ಲಿಯೇ ಪ್ರಥಮ…ತಾಯಿ ಭುವನೇಶ್ವರಿ ರಥೋತ್ಸವ
ರಬಕವಿ-ಬನಹಟ್ಟಿ: ಜಗದಾಳ ರೈತ ಬೆಳೆದ ಬಾಳೆಹಣ್ಣುಇರಾನ್ ದೇಶಕ್ಕೆ ರಫ್ತು!
ರಕ್ತ ಹರಿದರೂ ಚಿಂತೆಯಿಲ್ಲ, ಜಮೀನು ಬಿಟ್ಟು ಕೊಡಲ್ಲ: ಶಾಸಕ ಸಿದ್ದು ಸವದಿ
Rabakavi: ರೈತರ ಬದುಕಿನ ರೊಟ್ಟಿಯನ್ನು ಕಾಂಗ್ರೆಸ್ ಕಸಿದುಕೊಳ್ಳುತ್ತಿದೆ: ಶಾಸಕ ಸಿದ್ದು ಸವದಿ
Rabkavi Banhatti: ಜಗದಾಳದಲ್ಲಿ ರಾಜ್ಯ ಮಟ್ಟದ ಹೊನಲು ಬೆಳಕಿನ ಪಗಡೆಯಾಟ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.