ಅಮೆರಿಕ: ಗ್ರೀನ್ ಕಾರ್ಡ್ ಗೂ ರೆಡ್ ಸಿಗ್ನಲ್
Team Udayavani, Apr 23, 2020, 2:00 PM IST
ವಾಷಿಂಗ್ಟನ್: ಕಣ್ಣಿಗೆ ಕಾಣದ ಶತ್ರು ದಾಳಿಗೆ ನಲುಗಿರುವ ಅಮೆರಿಕ, ತನ್ನ ರಕ್ಷಣೆಗೆ ಸರ್ವ ಪ್ರಯತ್ನ ನಡೆಸುತ್ತಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಿನಕ್ಕೊಂದು ಕಠಿನ ನಿರ್ಧಾರದ ಮೊರೆ ಹೋಗುತ್ತಿದ್ದಾರೆ.ಅಮೆರಿಕನ್ನರ ಉದ್ಯೋಗಕ್ಕೆ ಕುತ್ತು ಬರಬಾರದು ಎಂದು ತಾತ್ಕಾಲಿಕವಾಗಿ ವಲಸಿಗರಿಗೆ ನಿರ್ಬಂಧನೆ ಹೇರಿಕೆಯ ಮುಂದಿನ ಭಾಗವಾಗಿ 60 ದಿನಗಳ ಕಾಲ ಹೊಸದಾಗಿ ಗ್ರೀನ್ ಕಾರ್ಡ್ ಅಥವಾ ಕಾನೂನು ಬದ್ಧವಾಗಿ ಶಾಶ್ವತ ಪೌರತ್ವ ನೀಡುವುದನ್ನು ನಿಲ್ಲಿಸುವುದಾಗಿ ಹೇಳಿದ್ದಾರೆ.
ಬುಧವಾರ ಈ ಆದೇಶವನ್ನು ಜಾರಿ ಮಾಡಿದ್ದು,ಅಮೆರಿಕನ್ನರ ಉದ್ಯೋಗ ಭದ್ರತೆಗೆ ಯಾವುದೇ ಕುಂದು ತರದಂತೆ ನೋಡಿಕೊಳ್ಳುವುದೇ ನಮ್ಮ ಮೊದಲ ಆದ್ಯತೆ ಎಂದಿದ್ದಾರೆ. ಹೀಗಾಗಿ, ಗ್ರೀನ್ ಕಾರ್ಡ್ ಪಡೆಯಲು ಕಾಯುತ್ತಿದ್ದ ಸಾವಿರಾರು ಮಂದಿ ಭಾರತೀಯರೂ ಸೇರಿದಂತೆ ಅಮೆರಿಕನ್ನೇತರರಿಗೆ ಬೇಸರವಾಗಿದೆ. ಗ್ರೀನ್‌ಕಾರ್ಡ್ ವಿತರಣೆ ನಿರ್ಬಂಧ 60 ದಿನಗಳ ಕಾಲ ಜಾರಿಯಲ್ಲಿ ಇರಲಿದ್ದು, ಅನಂತರದ ದಿನಗಳಲ್ಲಿ ಆರ್ಥಿಕ ಪರಿಸ್ಥಿತಿ ಅಧರಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಈ ಆದೇಶವು ಶಾಶ್ವತ ಪೌರತ್ವ ಬಯಸುವವರಿಗೆ ಮಾತ್ರ ಅನ್ವಯವಾಗಲಿದ್ದು, ತಾತ್ಕಾಲಿಕವಾಗಿ ದೇಶ ಪ್ರವೇಶಿಸುವವರಿಗಲ್ಲ ಎಂದು ತಿಳಿಸಿದ್ದಾರೆ. ದೇಶಿ ತಂತ್ರಜ್ಞಾನ ವೃತ್ತಿಪರರಿಗೆ, ಹೆಚ್-1ಬಿ ವಲಸೆ ರಹಿತ ಕೆಲಸದ ಮೇರೆಗೆ ಮತ್ತು ಕೃಷಿ ಉದ್ದೇಶಗಳಿಗಾಗಿ ಆಗಮಿಸುವ ಕಾಲೋಚಿತ ವಲಸೆ ಕಾರ್ಮಿಕರ ಮೇಲೂ ಪರಿಣಾಮ ಬೀರುದು ಎಂದು ಹೇಳಲಾಗಿದೆ. ಅಮೆರಿಕ ಪ್ರತಿವರ್ಷ ಗರಿಷ್ಠ 1,40,000 ಉದ್ಯೋಗ ಆಧಾರಿತ ಗ್ರೀನ್ ಕಾರ್ಡ್‌ಗಳನ್ನು ವಿತರಿಸಲಿದೆ. ಅದರಂತೆ, 2019ರ ಆರ್ಥಿಕ ವರ್ಷದಲ್ಲಿ ವರ್ಗ 1 (ಇಬಿ 1) 9,008 (ಭಾರತೀಯ ಪ್ರಜೆಗಳು), ವರ್ಗ 2 (ಇಬಿ 2) 2,908, ಮತ್ತು (ಇಬಿ 3) ವರ್ಗ 3 5,083 ಮಂದಿ ಭಾರತೀಯ ಪ್ರಜೆಗಳು ಗ್ರೀನ್ ಕಾರ್ಡ್‌ಗಳನ್ನು ಪಡೆದುಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Explained:ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Israel; ಪ್ರಧಾನಿ ನಿವಾಸಕ್ಕೆ ಬಾಂಬ್ ದಾಳಿ: 3 ಮಂದಿ ಸೆರೆ
PM Modi: ಜಗತ್ತಿನಲ್ಲಿ ಎಲ್ಲೇ ಸಮಸ್ಯೆಯಾದರೂ ಭಾರತದಿಂದ ಸ್ಪಂದನೆ
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.