ಕೋವಿಡ್-19 ಕಲಿಸಿದ ಪರಿಸರ ಪಾಠ
Team Udayavani, Apr 23, 2020, 8:00 PM IST
ಒಂದೆಡೆ ಕೋವಿಡ್ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದರೂ ಮತ್ತೂಂದೆಡೆಯಿಂದ
ವಿಶ್ವದ ಹವಾಮಾನದ ಮೇಲೆ ಒಳ್ಳೆಯ ಪರಿಣಾಮವನ್ನೇ ಬೀರಿದೆ. ಶಬ್ದ ಮಾಲಿನ್ಯ, ವಾಯು ಮಾಲಿನ್ಯದ
ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಿರುವುದು ಕಂಡುಬಂದಿದೆ.
ಮಣಿಪಾಲ: ಕೋವಿಡ್ 19 ಸಾಂಕ್ರಾಮಿಕ ರೋಗ ಇಡೀ ವಿಶ್ವವನ್ನೇ ಆವರಿಸಿದೆ. ಜನರ ಮೇಲೆ ದುಷ್ಪರಿಣಾಮ ಉಂಟು ಮಾಡಿರುವ ಕೋವಿಡ್ ವೈರಸ್ ವಿಶ್ವದ ಹವಾಮಾನದ ಮೇಲೆ ಒಳ್ಳೆಯ ಪರಿಣಾಮವನ್ನೇ ಬೀರಿದೆ. ಹಾಗೆಂದು ಇದು ಶಾಶ್ವತ ಪರಿಹಾರವಲ್ಲ.
ಜಗತ್ತಿನ ಶೇ. 80ರಷ್ಟು ರಾಷ್ಟ್ರಗಳಲ್ಲಿ ಲಾಕ್‌ಡೌನ್ ಜಾರಿಗೊಳಿಸ ಲಾಗಿದೆ. ಈ ಮೂಲಕ ತನ್ನ ಪ್ರಜೆಗಳನ್ನು ರಕ್ಷಿಸಿಕೊಳ್ಳಲು ಸರಕಾರಗಳು ಮುಂದಾಗಿವೆ. ವಾಹನ ಸಂಚಾರ, ಕಾರ್ಖಾನೆಗಳಿಗೆ ತಡೆ ನೀಡಿದ್ದು, ಇಂಧನ ಬಳಕೆ ಶೇ. 90ರಷ್ಟು ಕಡಿಮೆಯಾಗಿದೆ. ಪ್ರತಿದಿನ ವಾಹನಗಳಿಂದ ತುಂಬಿರುತ್ತಿದ್ದ, ಶಬ್ದ ಮಾಲಿನ್ಯ, ವಾಯು ಮಾಲಿನ್ಯದ ರಾಯಭಾರಿಗಳಾಗಿದ್ದ ದೇಶಗಳ ರಾಜಧಾನಿಗಳು ಸೇರಿದಂತೆ ಇತರ ನಗರಗಳಲ್ಲಿ ಮಾಲಿನ್ಯ ಕಡಿಮೆಯಾಗಿ ನೀಲಿ ಆಕಾಶ ಕಾಣಿಸುತ್ತಿದೆ. ಭಾರತದಲ್ಲಂತೂ ನೂರಾರು ಮೈಲು ದೂರದ ಹಿಮಾಲಯ ಪರ್ವತವೂ ಉತ್ತರ ಭಾರತದ ಜನರಿಗೆ ಗೋಚರಿಸುತ್ತಿದೆ. ಜಗತ್ತಿನ ಇತರ ರಾಷ್ಟ್ರಗಳಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನ ವಾಗಿಲ್ಲ. ಮುಂಜಾನೆ ಪಕ್ಷಿಗಳ ಕಲರವ ಕಿವಿ ತುಂಬುತ್ತಿದೆ. ಮೈಗೆ ಶುದ್ಧ ತಂಗಾಳಿ ಸ್ಪರ್ಶಿಸುತ್ತಿದೆ.
ಅತೀ ಹೆಚ್ಚು ವಾಯು ಮಾಲಿನ್ಯದಿಂದ ಬಳಲುತ್ತಿದ್ದ ದೇಶಗಳಲ್ಲಿ ಶೇ. 60ರಷ್ಟು ವಾಯುಮಾಲಿನ್ಯ ಕಡಿಮೆ ಯಾಗಿದೆ. ಇದು ಕೇವಲ 3 ತಿಂಗಳುಗಳ ಲಾಕ್‌ಡೌನ್‌ನಿಂದಾದ ಬದಲಾವಣೆ ಎಂದು ಐಕ್ಯೂಏರ್ ಸಂಸ್ಥೆಯು ತನ್ನ ಅಧ್ಯಯನ ವರದಿಯಲ್ಲಿ ತಿಳಿಸಿದೆ. ಕೋವಿಡ್ -19 ಹಿನ್ನೆಲೆಯ ಲಾಕ್‌ಡೌನ್ ಅನುಸರಿಸಲಾದ ವಿಶ್ವದ 10 ಪ್ರಮುಖ ನಗರಗಳನ್ನು ಅಧ್ಯಯನ ಮಾಡಲಾಗಿದೆ.
ಅಧ್ಯಯನವು ಪಿಎಂ 2.5 ಎಂದು ಕರೆಯಲ್ಪಡುವ ಹಾನಿಕಾರಕ ಸೂಕ್ಷಕಣಗಳ ಮಟ್ಟ ಕಡಿಮೆಯಾಗಿದೆ ಎಂದಿದೆ. 2.5 ಮೈಕ್ರೊಮೀಟರ್ ವ್ಯಾಸಕ್ಕಿಂತ ಚಿಕ್ಕದಾದ ಮಾಲಿನ್ಯಕಾರಕ ಅಪಾಯಕಾರಿ. ಏಕೆಂದರೆ ಇವುಗಳು ಶ್ವಾಸಕೋಶಕ್ಕೆ ಪ್ರವೇಶಿಸಿ, ರಕ್ತದೊಂದಿಗೆ ಸೇರಿ ಇತರ ಅಂಗಾಂಗಳ ಮೇಲೂ ದುಷ್ಪರಿಣಾಮ ಬೀರುತ್ತವೆ.
ಅಧ್ಯಯನಕ್ಕೆ ಒಳಪಟ್ಟ ಹೊಸದಿಲ್ಲಿ, ಸಿಯೋಲ್, ವುಹಾನ್ ಮತ್ತು ಮುಂಬಯಿ ನಗರಗಳು ಸೇರಿದಂತೆ ಒಟ್ಟು 7 ನಗರಗಳಲ್ಲಿ ಗಾಳಿಯ ಗುಣಮಟ್ಟದಲ್ಲಿ ಗಮ ನಾರ್ಹ ಸುಧಾರಣೆ ಕಂಡು ಬಂದಿದೆ. ಇದೇ ಮೊದಲ ಬಾರಿಗೆ ಪಿಎಂ 2.5 ಮಾಲಿನ್ಯದ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ವಾಯು ಮಾಲಿನ್ಯ ಈಗಾಗಲೇ ಜಾಗತಿಕ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟಾಗಿದೆ. ಇದು ಪ್ರತಿವರ್ಷ 70 ಲಕ್ಷ ಜನರ ಸಾವಿಗೆ ಕಾರಣವಾಗುತ್ತಿದೆ.
ಮತ್ತೆ ಏರಿಕೆ?
ಲಾಕ್‌ಡೌನ್ ಬಳಿಕ ಜನ ಜೀವನ ಯಥಾಸ್ಥಿತಿಗೆ ಬಂದ ಮೇಲೆ ವಾಯುಮಾಲಿನ್ಯವು ಮತ್ತೆ ಏರಿಕೆಯಾಗುವ ಆತಂಕ ಎದುರಾಗಿದೆ. ಹೊಸದಿಲ್ಲಿಯಲ್ಲಿ ಶೇ. 60ರಷ್ಟು ಮಾಲಿನ್ಯ ಕಡಿಮೆಯಾಗಿದೆ. ವಾಣಿಜ್ಯ ನಗರಿ ಮುಂಬಯಿಯಲ್ಲೂ ಹಾಗೆಯೇ. ಜಗತ್ತಿನ ಅತೀ ಹೆಚ್ಚು ಮಾಲಿನ್ಯಕಾರಕ ರಾಷ್ಟ್ರಗಳ ಪೈಕಿ ಭಾರತವೂ ಒಂದು. ದಕ್ಷಿಣ ಕೊರಿಯಾದಲ್ಲಿ ಶೇ. 54, ವುಹಾನ್‌ನಲ್ಲಿ ಶೇ. 44, ಲಾಸ್‌ಏಂಜಲೀಸ್‌ನಲ್ಲಿ 18 ದಿನಗಳ ಅವಧಿಯಲ್ಲಿ ಶೇ. 31ರಷ್ಟು ಮಾಲಿನ್ಯ ಕಡಿಮೆಯಾಗಿದೆ. ಯುರೋಪ್, ಲಂಡನ್, ಮ್ಯಾಡ್ರೀಡ್, ರೋಮ್‌ಗಳಲ್ಲಿಯೂ ಇಳಿಕೆಯಾಗಿದೆ.
ಇದೇ ಪರಿಹಾರವಲ್ಲ
ಇದ್ದಕ್ಕಿದ್ದಂತೆ ಎಲ್ಲ ಕಾರ್ಖಾನೆಗಳನ್ನು ಬಂದ್ ಮಾಡಿ, ರಸ್ತೆಯಲ್ಲಿ ವಾಹನ ಸಂಚಾರವನ್ನು ತಗ್ಗಿಸುವುದು ಶಾಶ್ವತ ಪರಿಹಾರವಲ್ಲ. ಇದು ಹವಾಮಾನ ಬದಲಾವಣೆ ಯನ್ನು ನಿಭಾಯಿಸುವ ಸುಸ್ಥಿರ ವಿಧಾನವಲ್ಲ. ಇಂದು ಜಗತ್ತು ಹೇಗೆ ಕೋವಿಡ್-19ರ ವಿರುದ್ಧ ಒಟ್ಟಾಗಿ ಹೋರಾಡುತ್ತಿದೆಯೋ ಹಾಗೆಯೇ ಹವಾಮಾನ ಬಿಕ್ಕಟ್ಟು ಬಗೆಹರಿಸಲೂ ಪ್ರಯತ್ನಿಸಬೇಕು. ಪರಿಸರವನ್ನು ಕಾಪಾಡಲು ಒಟ್ಟಾಗಿ ಪರಿಶ್ರಮಿಸಬೇಕು. ಕೋವಿಡ್-19 ಸೋಂಕು ಮನುಷ್ಯ ಪ್ರಕೃತಿಯ ಜತೆ ಹೇಗೆ ಬದುಕಬೇಕು ಎಂಬುದನ್ನು ತೋರಿಸಿಕೊಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ
Beirut ಮೇಲೆ ದಾಳಿ…ಇಸ್ರೇಲ್ ಮೇಲೆ 250 ರಾಕೆಟ್ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ
BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್ ವಿಚಾರವಾಗಿ ವಾಗ್ವಾದ
Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.