ಜೋಳ ಖರೀದಿ ಕೇಂದ್ರ ಆರಂಭ
Team Udayavani, Apr 23, 2020, 6:11 PM IST
ಕುಷ್ಟಗಿ: ಇಲ್ಲಿನ ಎಪಿಎಂಸಿ ಯಾರ್ಡ್ನ ಕರ್ನಾಟಕ ಅಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ಉಗ್ರಾಣದಲ್ಲಿ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಬಿಳಿ ಜೋಳದ ಖರೀದಿ ಕೇಂದ್ರ ಆರಂಭಿಸಲಾಗಿದೆ ಎಂದು ತಹಶೀಲ್ದಾರ್ ಸಿದ್ದೇಶ ಎಂ. ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಳಿಜೋಳದ ಆನ್ಲೈನ್ ನೋಂದಣಿ ಏ. 20ರಿಂದ ಏ. 30ರವರೆಗೆ ಮಾಡಿಕೊಳ್ಳಲಾಗುವುದು. ಬೆಳೆ ಖರೀದಿ ಪ್ರಕ್ರಿಯೆ ಮೇ 1ರಿಂದ 31ರವರೆಗೂ ನಡೆಯಲಿದೆ. ನೋಂದಣಿಗೆ ಮೇ ತಿಂಗಳಲ್ಲಿ ಕಾಲಾವ ಧಿ ವಿಸ್ತರಿಸುವ ಸಾಧ್ಯತೆಗಳಿವೆ ಎಂದರು. ಹೈಬ್ರಿಡ್ ಜೋಳಕ್ಕೆ ಪ್ರತಿ ಕ್ವಿಂಟಲ್ಗೆ 2,550 ರೂ., ಬಿಳಿ ಜೋಳ (ಮಾಲ್ದಂಡಿ) 2,570 ರೂ. ಬೆಂಬಲ ಬೆಲೆ ನಿಗದಿ ಪಡಿಸಲಾಗಿದೆ ಎಂದು ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.