ಗ್ರಾಮೀಣ ಜನರ ಕೈ ಹಿಡಿದ ನರೇಗಾ
Team Udayavani, Apr 23, 2020, 6:25 PM IST
ಕಾರವಾರ: ಕೋವಿಡ್-19 ಲಾಕ್‌ಡೌನ್ ಕಾಲದಲ್ಲಿಯೂ ಗ್ರಾಮೀಣ ಜನರ ಬದುಕನ್ನು ನರೇಗಾ ಯೋಜನೆ ಕೈ ಹಿಡಿದಿದೆ. 16 ಲಕ್ಷ ಮಾನವ ದಿನಗಳನ್ನು ಸೃಷ್ಟಿಸಲಾಗಿದ್ದು, 77 ಕೋಟಿಗೂ ಹೆಚ್ಚಿನ ಅನುದಾನ ಜಿಲ್ಲೆಗೆ ಬಂದಿದೆ. ಕೋವಿಡ್ ಸಮಯದಲ್ಲಿ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಜಿಲ್ಲೆಯ 11 ತಾಲೂಕುಗಳಲ್ಲಿ ವಿವಿಧ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
ಕಳೆದ 29 ದಿನಗಳಿಂದ ನರೇಗಾ ಯೋಜನೆಯ ಪ್ರಯೋಜನ ಗ್ರಾಮೀಣ ಕಾರ್ಮಿಕರಿಗೆ ಲಭಿಸುತ್ತಿದೆ. ಆದರೆ, ವಾಹನ ಸೌಕರ್ಯ ಇಲ್ಲದ ಕಾರಣ ಹೆಚ್ಚಿನ ಕಾರ್ಮಿಕರು ಕಾಮಗಾರಿ ನಡೆಯುವ ಸ್ಥಳಕ್ಕೆ ತಲುಪಲಾಗುತ್ತಿಲ್ಲ. ಮೇ 4ರ ನಂತರ ಕಾರ್ಮಿಕರಿಗೆ ನರೇಗಾ ಕಾಮಗಾರಿ ನಡೆಯುವ ಸ್ಥಳಕ್ಕೆ ವಾಹನ ಸೌಕರ್ಯ ಸಿಗಲಿದ್ದು, ಯೋಜನೆಯ ಪೂರ್ಣ ಲಾಭ ಶ್ರಮಿಕ ವರ್ಗಕ್ಕೆ ತಲುಪಲಿದೆ ಎಂಬ ವಿಶ್ವಾಸವನ್ನು ಜಿಪಂ ಸಿಇಒ ಎಂ.ರೋಶನ್ ವ್ಯಕ್ತಪಡಿಸುತ್ತಿದ್ದಾರೆ.
ಈಗಾಗಲೇ 15,018 ಮಾನವ ದಿನಗಳು ಸೃಷ್ಟಿಯಾಗಿ ವಿವಿಧ ಕಾಮಗಾರಿ ನಡೆದಿವೆ. 11 ತಾಲೂಕುಗಳಲ್ಲಿ ವಿವಿಧ ಕಾಮಗಾರಿಗೆ 40.96 ಲಕ್ಷ ರೂ. ಖರ್ಚಾಗಿದೆ. ಈವರೆಗಿನ ಸಾಧನೆ ಸಣ್ಣ ಪ್ರಮಾಣದಲ್ಲಿ ಕಂಡರೂ ಮೇ ತಿಂಗಳಲ್ಲಿ ಗುರಿ ಮುಟ್ಟುವ ವಿಶ್ವಾಸ ಜಿಪಂಗೆ ಇದೆ. ಮೇ ತಿಂಗಳಲ್ಲಿ ವಾಹನ ಸಂಚಾರ ಆರಂಭವಾದರೆ ನರೇಗಾ ಕೆಲಸಗಳಲ್ಲಿ ಶ್ರಮಿಕರ ಭಾಗವಹಿಸುವಿಕೆ ಹೆಚ್ಚಾಗಲಿದೆ. ಆಗ 16 ಲಕ್ಷ ಮಾನವ ದಿನಗಳು ಪೂರ್ಣ ಪ್ರಮಾಣದಲ್ಲಿ ಬಳಕೆಯಾಗಲಿವೆ ಎಂಬುದು ಜಿಪಂ ವಿಶ್ವಾಸ.
ನರೇಗಾದಲ್ಲಿ ಈ ಸಲವೂ ಉತ್ತರ ಕನ್ನಡ ಜಿಲ್ಲೆ ಗುರಿ ಮುಟ್ಟಲಿದೆ. ಕಾಮಗಾರಿ ನಡೆವ ಸ್ಥಳ ತಲುಪಲು ಕಾರ್ಮಿಕರಿಗೆ ವಾಹನ ಸೌಕರ್ಯವಿಲ್ಲ. ಮೇ 4ರ ನಂತರ ಕಾರ್ಮಿಕರಿಗೆ ವಾಹನ ಸೌಕರ್ಯ ಸಿಗಲಿದೆ. ಆಗ ನರೇಗಾ ಕೆಲಸಗಳಿಗೆ ವೇಗ ಸಿಗಲಿದೆ. -ಎಂ. ರೋಶನ್, ಜಿಪಂ ಸಿಇಒ
–ನಾಗರಾಜ ಹರಪನಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Dandeli: ವಿದ್ಯುತ್ ಕಂಬದ ಜಿಓಎಸ್ ಕಳವು ಮಾಡಿದ್ದ ಆರೋಪಿ;ಮಾಲು ಸಹಿತ ವಶಕ್ಕೆ ಪಡೆದ ಪೊಲೀಸರು
Gujjar Kere: ಕೆರೆ ಪರಿಸರದ ರಕ್ಷಣೆಗೆ ಆದ್ಯತೆ ಅಗತ್ಯ; ತಹಶೀಲ್ದಾರ್‌ಗೆ ಮರು ಮನವಿ
Dandeli:ತುಂಡಾಗಿ ಬಿದ್ದಿದ್ದ ಕೇಬಲ್ ವೈರ್ ಸುತ್ತಿ ದ್ವಿಚಕ್ರ ವಾಹನ ಸ್ಕಿಡ್: ಸವಾರನಿಗೆ ಗಾಯ
MUST WATCH
ಹೊಸ ಸೇರ್ಪಡೆ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.