ಪಾಕಿಸ್ಥಾನ ಸೈಬರ್‌ ಯುದ್ಧ: ಭಾರತವನ್ನು ಇಸ್ಲಾಂ ವಿರೋಧಿ ಎಂದು ಬಿಂಬಿಸಲು ಕುತಂತ್ರ


Team Udayavani, Apr 24, 2020, 5:59 AM IST

ಪಾಕಿಸ್ಥಾನ ಸೈಬರ್‌ ಯುದ್ಧ: ಭಾರತವನ್ನು ಇಸ್ಲಾಂ ವಿರೋಧಿ ಎಂದು ಬಿಂಬಿಸಲು ಕುತಂತ್ರ

ಹೊಸದಿಲ್ಲಿ: ಗಡಿಯಲ್ಲಿ ಉಗ್ರಯುದ್ಧ ನಡೆಯುತ್ತಲೇ ಇದೆ. ಇನ್ನೊಂದೆಡೆ ಪಾಕ್‌, ಭಾರತದ ವಿರುದ್ಧ ಸೈಬರ್‌ ಯುದ್ಧವನ್ನೂ ಆರಂಭಿಸಿದೆ.

ಕೋವಿಡ್ 19 ವೈರಸ್ ನೆಪವೊಡ್ಡಿ ಭಾರತದಲ್ಲಿ ಇಸ್ಲಾಮೋಫೋಬಿಯಾ ಹೆಚ್ಚುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಪ್ರಚಾರ ನಡೆಸುತ್ತಾ, ಭಾರತ- ಗಲ್ಫ್ ರಾಷ್ಟ್ರಗಳ ಸಂಬಂಧಕ್ಕೆ ಪಾಕ್‌ ಹುಳಿ ಹಿಂಡಲೆತ್ನಿಸುತ್ತಿದೆ.

ಹೂಡಿಕೆ, ಇನ್ನಿತರೆ ಕ್ಷೇತ್ರಗಳಲ್ಲಿ ಭಾರತ- ಗಲ್ಫ್ ರಾಷ್ಟ್ರಗಳ ಸಂಬಂಧ ಬಹಳ ಆಪ್ತವಾಗಿದೆ. ಇದನ್ನು ಸಹಿಸದ ಪಾಕ್‌ ಇದೀಗ, ಟ್ವಿಟರ್‌ನಲ್ಲಿ ಚಾವೋಸ್‌ ಇಂಡಿಯಾ, ಶೇಮ್‌ ಆನ್‌ ಮೋದಿ- ಇತ್ಯಾದಿ ಹ್ಯಾಷ್‌ಟ್ಯಾಗ್‌ ಸೃಷ್ಟಿಸಿ, ಭಾರತಕ್ಕೆ ಇಸ್ಲಾಮ್‌ ವಿರೋಧಿ ಪಟ್ಟ ಕಟ್ಟಲೆತ್ನಿಸುತ್ತಿದೆ. ಪಾಕ್‌ನ ಗುಪ್ತಚರ ಸಂಸ್ಥೆ (ಐಎಸ್‌ಐ) ವ್ಯವಸ್ಥಿತವಾಗಿ ಈ ಷಡ್ಯಂತ್ರದಲ್ಲಿ ತೊಡಗಿಸಿಕೊಂಡಿದೆ ಎಂದು “ಹಿಂದೂಸ್ತಾನ್‌ ಟೈಮ್ಸ್’ ವರದಿ ಮಾಡಿದೆ.

ಷಡ್ಯಂತ್ರ ಹೇಗೆ?: ಸುದ್ದಿ ಮುಟ್ಟಿಸುವವರು, ವರದಿ ಸಂಗ್ರಹಕಾರರು, ಹಂಚಿಕೆದಾರರು- ಈ ಮೂವರು ಭಾರತದಲ್ಲಿನ ಪ್ರತ್ಯೇಕ ಘಟನೆ­ಗಳ ಫೋಟೋ, ವಿಡಿಯೊಗಳನ್ನು ಕಲೆಹಾಕಿ, ವೈರಲ್‌ ಮಾಡುವವರಿಗೆ ದಾಟಿಸುತ್ತಾರೆ. ಅವರು ಇವುಗಳಿಗೆ ಭಾರತ ಇಸ್ಲಾಮ್‌ ವಿರೋಧಿ ಎನ್ನುವಂಥ ಸುಳ್ಳು ವಿವರಣೆ ಸೃಷ್ಟಿಸಿ, ಪ್ರಭಾವ­ ಶಾಲಿಗಳಿಗೆ ಪೋಸ್ಟ್‌ ಮಾಡುವಂತೆ ಪ್ರೇರೇಪಿಸುತ್ತಿದ್ದಾರೆ.

ಅದರಲ್ಲೂ ಒಬ್ಟಾಕೆ, ಕವಿ ಮೊಹಮ್ಮದ್‌ ಇಕ್ಬಾಲ್‌ ಕವಿತೆಯ ಮೂಲಕ ಟ್ವಿಟ್ಟರ್‌ ಖಾತೆ ತೆರೆದಳು. ದಿನ ಮುಗಿಯುವುದರೊಳಗೆ ಆಕೆ 200ಕ್ಕೂ ಹೆಚ್ಚು ಟ್ವೀಟ್‌- ರೀಟ್ವೀಟ್‌ ಮಾಡಿ, ಭಾರತವನ್ನು ಅವಾಚ್ಯವಾಗಿ ನಿಂದಿಸಿದ್ದಾಳೆ.

ಪಾಕ್‌ನ ಗ್ಯಾಂಗ್‌ ಎಲ್ಲೆಲ್ಲಿದೆ?: ಗಲ್ಫ್ ರಾಷ್ಟ್ರ­ಗಳಲ್ಲಿ ಹಲವು ಏಜೆಂಟ್‌ಗಳನ್ನು ಪಾಕ್‌ ಹೊಂದಿದೆ. ಬಹ್ರೈರೇನ್‌, ಕುವೈತ್‌, ಒಮನ್‌, ಕತಾರ್‌, ಸೌದಿ ಅರೇಬಿಯಾ, ಯುಎಇಗಳಲ್ಲಿ ಪಾಕ್‌ ಪರ ಟ್ವಿಟ್ಟರ್‌ ಬಳಕೆದಾರರ ಜಾಲವಿದೆ ಎಂದು ವರದಿ ಹೇಳಿದೆ.

ಗಲ್ಫ್ ದೇಶಗಳಲ್ಲಿ ಭಾರತದ ಮೇಲೆ ಪಾಕ್‌ ಅಪಪ್ರಚಾರ ನಡೆಸುವುದು ಇದೇ ಮೊದಲೇನಲ್ಲ. ಹಿಂದೆ ಕಾಶ್ಮೀರದ 370ನೇ ಕಲಂ ರದ್ದು ಮಾಡಿದಾಗಲೂ ಪಾಕ್‌ ಹೀಗೆಯೇ ಅಪಪ್ರಚಾರ ಮಾಡಿತ್ತು.

ಪಾಕ್‌ಗೆ ಅಮೆರಿಕ ಶಾಕ್‌
ಉಗ್ರರನ್ನು ಪೋಷಿಸುತ್ತಿರುವ ಕಾರಣಕ್ಕೆ ಜಾಗತಿಕವಾಗಿ ಕಪ್ಪುಪಟ್ಟಿ ಸೇರುವ ಆತಂಕದಲ್ಲಿರುವ ಪಾಕ್‌ಗೆ, ಅಮೆರಿಕ ಆಘಾತ ನೀಡಿದೆ. ಪರಮಾಣು ಉಪ ಉತ್ಪನ್ನಗಳನ್ನು ರಫ್ತು ಮಾಡಲು, ಅಮೆರಿಕ ಹಿಂದೇಟು ಹೊಡೆದಿದೆ. ಪರಮಾಣು ವಿಚಾರದಲ್ಲಿ ಪಾಕ್‌ ನಡತೆ ಸರಿ ಇಲ್ಲದ ಕಾರಣ, ಅಮೆರಿಕ ಈ ನಿರ್ಧಾರ ಕೈಗೊಂಡಿದೆ.

ಕೋವಿಡ್ 19 ವೈರಸ್ ನ ಸಂದಿಗ್ಧತೆಯ ಬಗ್ಗೆ ತಿಳಿಯಲು ಟ್ರಂಪ್‌, ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಜತೆ ಫೋನಿನಲ್ಲಿ ಮಾತನಾಡಿದ ಬೆನ್ನಲ್ಲೇ , ಅಮೆರಿಕ ಈ ನಿರ್ಧಾರ ಕೈಗೊಂಡಿದೆ. ಯುಎಸ್‌ ನ್ಯೂಕ್ಲಿಯರ್‌ ರೆಗ್ಯುಲೇಟರಿ ಕಮಿಷನ್‌ ನಿಂದ (ಎನ್‌ಆರ್‌ಸಿ) ಪಾಕ್‌ ಮೊದಲಿನಂತೆ ಸಲೀಸಾಗಿ ಪರಮಾಣು ಉಪ ಉತ್ಪನ್ನಗಳನ್ನು ಖರೀದಿಸಲು ಸಾಧ್ಯವಿಲ್ಲ ಎಂದು ಅಮೆರಿಕ ಹೇಳಿದೆ.

25 ಸಾವಿರ ಇಮೇಲ್‌ ಐಡಿ, ಪಾಸ್‌ವರ್ಡ್‌ ಲೀಕ್‌!
ಅಚ್ಚರಿಯ ಬೆಳವಣಿಗೆಯೊಂದರಲ್ಲಿ, ಕೋವಿಡ್ 19 ವೈರಸ್ ಸೋಂಕಿನ ವಿರುದ್ಧ ಹೋರಾಡುತ್ತಿರುವ ರಾಷ್ಟ್ರೀಯ ಆರೋಗ್ಯ ಸಂಸ್ಥೆಗಳು (ಎನ್‌ಐಎಚ್‌), ವಿಶ್ವ ಬ್ಯಾಂಕ್‌, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ), ಗೇಟ್ಸ್‌ ಪ್ರತಿಷ್ಠಾನ ಮತ್ತು ಇತರ ಪ್ರತಿಷ್ಠಿತ, ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಸಂಬಂಧಿಸಿದ ಸುಮಾರು 25,000 ಇಮೇಲ್‌ ವಿಳಾಸಗಳು ಮತ್ತು ಪಾಸ್‌ವರ್ಡ್‌ಗಳನ್ನು ಕಿಡಿಗೇಡಿಗಳು ಅಂತರ್ಜಾಲದಲ್ಲಿ ಜಗಜ್ಜಾಹೀರು ಮಾಡಿ­ದ್ದಾರೆ. ಈ ವಿಷಯವನ್ನು ಸೈಟ್ ಇಂಟಲಿಜೆನ್ಸ್‌ ಗ್ರೂಪ್‌ ಖಾತ್ರಿ­ಪಡಿಸಿದೆ.

ಈ ಪೈಕಿ ಎನ್‌ಐಎಗೆ ಸಂಬಂಧಿ­ಸಿದ ಅತಿ ಹೆಚ್ಚು ಅಂದರೆ, 9,938 ಇಮೇಲ್‌ ಐಡಿ ಮತ್ತು ಪಾಸ್‌ವರ್ಡ್‌ಗಳಿದ್ದು, ರೋಗ ನಿಯಂತ್ರಣ ಕೇಂದ್ರ­ಗಳಿಗೆ ಸೇರಿದ 6,857, ವಿಶ್ವ ಬ್ಯಾಂಕ್‌ನ 5,120 ಮತ್ತು ಡಬ್ಲ್ಯೂಎಚ್‌ಒನ 2,732 ಇಮೇಲ್‌ ವಿಳಾಸ ಮತ್ತು ಪಾಸ್‌ವರ್ಡ್‌ ಗಳನ್ನು ಆನ್ಲೈನ್‌ನಲ್ಲಿ ಹರಿಬಿಡಲಾಗಿದೆ.

ಟಾಪ್ ನ್ಯೂಸ್

Shiggavi-candidate

By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್‌ ಪಠಾಣಗೋ?

Kalinga-King-cobra

King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!

Mysuru-Nirmala

Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’

DKS–HDD-HDK

By Election: ಚನ್ನಪಟ್ಟಣದಲ್ಲಿ ಎಚ್‌.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್‌ ಮೇಕೆದಾಟು ಜಟಾಪಟಿ

Sumalatha

Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ

Paper-Reader

Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ

HD-Devegowda

By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್‌.ಡಿ.ದೇವೇಗೌಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sukhu

Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?

Ajit Pawar

Yogi ‘ಬಟೇಂಗೆ’ಹೇಳಿಕೆ ಒಪ್ಪಲ್ಲ ಎಂದ ಅಜಿತ್‌: ಮಹಾಯುತೀಲಿ ಬಿರುಕು?

tirupati

Supreme Court; ಧರ್ಮಕ್ಕೊಂದು ರಾಜ್ಯ ಕೂಡದು: ತಿರುಪತಿ ಕುರಿತ ಅರ್ಜಿ ತಿರಸ್ಕೃತ

1-eeee

1857 ಸಿಪಾಯಿ ದಂಗೆ ಕಾಲದ ಶಸ್ತ್ರಾಸ್ತ್ರ ಹೊಲದಲ್ಲಿ ಪತ್ತೆ!

Modi 2

BJP; ಒಂದಾಗಿದ್ದರಷ್ಟೇ ಸುರಕ್ಷೆ: ಯೋಗಿ ಬಳಿಕ ಮೋದಿ ಹೊಸ ಸ್ಲೋಗನ್‌!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Shiggavi-candidate

By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್‌ ಪಠಾಣಗೋ?

Kalinga-King-cobra

King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!

Mysuru-Nirmala

Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’

DKS–HDD-HDK

By Election: ಚನ್ನಪಟ್ಟಣದಲ್ಲಿ ಎಚ್‌.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್‌ ಮೇಕೆದಾಟು ಜಟಾಪಟಿ

Sumalatha

Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.