ಆರ್ಥಿಕ ವಲಯಕ್ಕೆ ಮರುಜೀವ

ಗೊಬ್ಬರ- ಪೈಪ್‌ ಅಂಗಡಿ- ಗ್ಯಾರೇಜ್‌ ಆರಂಭ ಇನ್ನಷ್ಟು ವ್ಯಾಪಾರ ಶುರುವಾಗುವ ನಿರೀಕ್ಷೆ

Team Udayavani, Apr 24, 2020, 12:42 PM IST

24-April-12

ಶಿವಮೊಗ್ಗ: ಹೊಳೆ ಬಸ್‌ ನಿಲ್ದಾಣದ ಬಳಿ ರೈಲ್ವೆ ಹಳಿ ಕೆಲಸ ಆರಂಭವಾಗಿರುವುದು.

ಶಿವಮೊಗ್ಗ: ಈವರೆಗೂ ಕೋವಿಡ್ ವೈರಸ್‌ ಕಾಣಿಸಿಕೊಳ್ಳದೇ ಗ್ರೀನ್‌ ಜೋನ್‌ನಲ್ಲಿರುವ ಶಿವಮೊಗ್ಗ ಜಿಲ್ಲೆಯಲ್ಲಿ ಗುರುವಾರದಿಂದ ನೀಡಿರುವ ಸಡಿಲಿಕೆಯು ಆರ್ಥಿಕ ವಲಯಕ್ಕೆ ಚೇತರಿಕೆ ನೀಡಿದೆ. ಬೆಳಗ್ಗೆ 7ರಿಂದ 12 ಗಂಟೆವರೆಗೆ ಕದ್ದು ಮುಚ್ಚಿ ವ್ಯವಹಾರ ನಡೆಸುತ್ತಿದ್ದ ವಾಣಿಜ್ಯ ಮಳಿಗೆಗಳು ಈಗ ನಿರಾಳಗೊಂಡಿವೆ.

ಕೃಷಿ ವಲಯಕ್ಕೆ ಸಂಪೂರ್ಣ ಉತ್ತೇಜನ ನೀಡಿರುವುದರಿಂದ ಕೃಷಿ ಪೂರಕವಾದ ಗೊಬ್ಬರ, ಪೈಪ್‌, ಗ್ಯಾರೇಜ್‌ಗಳು ಆರಂಭಗೊಂಡಿವೆ. ಶಿವಮೊಗ್ಗ- ಭದ್ರಾವತಿ, ಶಿವಮೊಗ್ಗ- ತೀರ್ಥಹಳ್ಳಿ, ಸಾಗರ ನಡುವಿನ ಡಾಬಾಗಳು ಇನ್ನಷ್ಟೇ ಕಾರ್ಯಾರಂಭ ಮಾಡಬೇಕಿದೆ. ಮೊಬೈಲ್‌ ರೀಚಾರ್ಜ್‌ ಮಳಿಗೆ ತೆರೆಯಲು ಅವಕಾಶ ನೀಡಿರುವುದು ಬೇರೆ ರೀತಿ ಚಟುವಟಿಕೆಗೂ ದಾರಿಯಾಗಿದೆ. ಜೆರಾಕ್ಸ್‌, ದಿನಸಿ ಅಂಗಡಿ ಜತೆ ರೀಚಾರ್ಜ್‌ ಸೇವೆ ಮಾಡುತ್ತಿದ್ದ ಅಂಗಡಿಗಳು ಸಹ ಓಪನ್‌ ಆಗಿವೆ. ಮೊದಲಿನಿಂದಲೂ ನಗರ ಭಾಗದಲ್ಲಿ ಹೆಚ್ಚಿನ ಬಿಗಿ ಭದ್ರತೆ ಒದಗಿಸಲಾಗಿದೆ. ಗ್ರಾಮಾಂತರದಲ್ಲಿ ಅಷ್ಟಿಲ್ಲ. ಇದೇ ಅವಕಾಶ ಬಳಸಿಕೊಂಡು ಇನ್ನಷ್ಟು ವ್ಯಾಪಾರ ವಹಿವಾಟು ನಡೆಯುತ್ತಿದೆ.

ಡೋರ್‌ ಹಾಕಿದಂತೆ ಕಾಣುತ್ತಿದ್ದರೂ ಸಲೂನ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಗ್ರಾಹಕರಿಗೆ ಕರೆ ಮಾಡಿ ಬೆಳಗ್ಗಿನ ಜಾವ ಕರೆದು ಕ್ಷೌರ ಮಾಡಲಾಗುತ್ತಿದೆ. ಅನೇಕ ಬಾರಿ ಪೊಲೀಸರು ಮತ್ತು ಬೀಟ್‌ ಅಧಿಕಾರಿಗಳು ಮೌಖೀಕ ತಿಳಿವಳಿಕೆ ನೀಡಿದರೂ ಕದ್ದು ಮುಚ್ಚಿ ವ್ಯವಹಾರಗಳು ಜೋರಾಗಿವೆ. ಮಧ್ಯಾಹ್ನ 12 ಗಂಟೆವರೆಗೂ ನಗರ ಭಾಗದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಪೊಲೀಸರು ನಿಯಂತ್ರಣ ಮಾಡುತ್ತಿದ್ದಾರೆ. ಕೆಲ ಏರಿಯಾಗಳ ರಸ್ತೆ ಬ್ಲಾಕ್‌ ಮಾಡಿರುವುದರಿಂದ ಮುಖ್ಯ ರಸ್ತೆಗಳು ಜನದಟ್ಟಣೆಯಿಂದ ಕೂಡಿದ್ದವು.

ಹೊಟೇಲ್‌ಗ‌ಳಲ್ಲಿ ಪಾರ್ಸೆಲ್‌ ಸೇವೆಗೆ ಅವಕಾಶ ಇದ್ದರೂ ನಷ್ಟದ ಭೀತಿಯಲ್ಲಿ ಯಾರೂ ಮುಂದೆ ಬರುತ್ತಿಲ್ಲ. ಹೈವೇ ಡಾಬಾಗಳು ಇನ್ನೆರಡು ದಿನಗಳಲ್ಲಿ ಓಪನ್‌ ಆಗಬಹುದು. ಅದೇ ಹೆಚ್ಚು ವಾಣಿಜ್ಯ ಮಳಿಗೆಗಳಿರುವ ಗಾರ್ಡನ್‌ ಏರಿಯಾ, ಗಾಂಧಿ  ಬಜಾರ್‌ನಲ್ಲಿ ಜನರ ಓಡಾಟಕ್ಕೆ ಅವಕಾಶವಿಲ್ಲ. ಸಣ್ಣಪುಟ್ಟ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿರುವುದರಿಂದ ಓಪನ್‌ ಮಾಡುತ್ತಿಲ್ಲ. ಹೊಸ ಆದೇಶದ ನಂತರ ಜನರಲ್ಲಿ ಗೊಂದಲಗಳಿದ್ದು ಹಂತಹಂತವಾಗಿ ಚಟುವಟಿಕೆ ಆರಂಭಗೊಳ್ಳುವ ನಿರೀಕ್ಷೆ ಇದೆ.

ಜನರಲ್ಲಿ ಗೊಂದಲ ಜಿಲ್ಲೆ ಒಳಗೆ ಓಡಾಡಲು ಯಾರಿಗೂ ಪಾಸ್‌ ವ್ಯವಸ್ಥೆ ಮಾಡದ ಕಾರಣ ಕೆಲ ಸಾರ್ವಜನಿಕರು ಗೊಂದಲದಲ್ಲಿದ್ದಾರೆ. ಕೃಷಿ ಸಂಬಂಧಿತ ವಾಣಿಜ್ಯ ಮಳಿಗೆ ಸಿಬ್ಬಂದಿ ಯಾವ ಕಾರ್ಡ್‌ ಇಲ್ಲದೇ ಓಡಾಡಲು ಹಿಂಜರಿಯುತ್ತಿದ್ದಾರೆ. ಪ್ರಮುಖ ಸರ್ಕಲ್‌ಗ‌ಳಲ್ಲಿ ಚೆಕ್‌ಪೋಸ್ಟ್‌ ಮಾಡಿರುವುದರಿಂದ ತಪಾಸಣೆ ಕಡ್ಡಾಯವಾಗಿದೆ. ಪ್ರತಿ ಹಂತದಲ್ಲೂ ವಿಚಾರಣೆಗೆ ಒಳಗಾಗುವುದು ಇರಿಸು ಮುರಿಸು ಉಂಟು ಮಾಡುತ್ತಿದೆ.

ಕಟ್ಟಡ ನಿರ್ಮಾಣ ಸ್ಪೀಡ್‌ ಮಳೆಗಾಲ ಆರಂಭದೊಳಗೆ ಮನೆ ಕಾಮಗಾರಿ ಮುಗಿಸಲು ಅನೇಕರು ಮುಂದಾಗಿದ್ದರು. ಲಾಕ್‌ಡೌನ್‌ ಕಾರಣ
ಸಾಧ್ಯವಾಗಿರಲಿಲ್ಲ. ಬಸವ ಜಯಂತಿಗೆ ಸಿದ್ಧತೆ ಮಾಡಿಕೊಂಡವರು ಮುಂದಿನ ಶುಭ ದಿನಕ್ಕೆ ಯೋಚನೆ ಮಾಡುತ್ತಿದ್ದಾರೆ. ಒಳ ರಸ್ತೆಗಳಲ್ಲಿ ಈಗಾಗಲೇ ಕಡಿಮೆ ಕಾರ್ಮಿಕರಿಟ್ಟುಕೊಂಡು ನಡೆಸುತ್ತಿದ್ದ ಕಾಮಗಾರಿ ಈಗ ಗರಿಗೆದರಿದೆ.

ಟಾಪ್ ನ್ಯೂಸ್

1-ewewew

Maharashtra; ವಿಧಾನಸಭೆಗೆ 78 ಶಾಸಕರು ಮೊಟ್ಟ ಮೊದಲ ಬಾರಿಗೆ ಪ್ರವೇಶ

GDP

GDP; ದೇಶದ ಆರ್ಥಿಕಾಭಿವೃದ್ಧಿ 2 ವರ್ಷದಲ್ಲೇ ಕನಿಷ್ಠ: ಶೇ.5.4 ಜಿಡಿಪಿ ದಾಖಲು

Modi Interview

Opposition ;ಜನರ ದಾರಿ ತಪ್ಪಿಸುತ್ತಿರುವ ವಿಪಕ್ಷಗಳು: ಪ್ರಧಾನಿ ಮೋದಿ

1-samsat

Adani, Manipur ಚರ್ಚೆಗೆ ಪಟ್ಟು: ವಾರ ಪೂರ ಸಂಸತ್‌ ಕಲಾಪ ವ್ಯರ್ಥ

1-trr

CAG Report; ಕೇಂದ್ರ ಸರಕಾರ‌ದ ವಿತ್ತೀಯ ಕೊರತೆ ಶೇ.45ಕ್ಕೆ ಏರಿಕೆ!

ದ.ಕ.ದ ವೈಭವಿ, ಉಡುಪಿಯ ಧೀರಜ್‌ ಐತಾಳ್‌ ; ಸಾಹಸ ಮೆರೆದ ಮಕ್ಕಳಿಗೆ ಶೌರ್ಯ ಪ್ರಶಸ್ತಿ

ದ.ಕ.ದ ವೈಭವಿ, ಉಡುಪಿಯ ಧೀರಜ್‌ ಐತಾಳ್‌ ; ಸಾಹಸ ಮೆರೆದ ಮಕ್ಕಳಿಗೆ ಶೌರ್ಯ ಪ್ರಶಸ್ತಿ

D.K. Shivakumar: ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಬಗ್ಗೆ ಚರ್ಚೆ

D.K. Shivakumar: ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಬಗ್ಗೆ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್

Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್

13-

Anandapura: ನಿಂತಿದ್ದ ಕಾರಿಗೆ ಇನ್ನೊಂದು ಕಾರು ಡಿಕ್ಕಿ ಹೊಡೆದು ಕಾರು ಪಲ್ಟಿ

12-sagara

Sagara: ವಿದ್ಯುತ್ ಟ್ರಾನ್ಸ್‌ ಫಾರ್ಮರ್‌ಗೆ ನೇಣು ಬಿಗಿದು ಯುವಕ ಆತ್ಮಹತ್ಯೆ

6-

Sagara: ಮಿಡಿ ಮಾವು, ವಿಶ್ವವಿದ್ಯಾಲಯದ ನಡೆದಾಡುವ ವಿಶ್ವಕೋಶ ಬಿ.ವಿ.ಸುಬ್ಬರಾವ್ ಇನ್ನಿಲ್ಲ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-ewewew

Maharashtra; ವಿಧಾನಸಭೆಗೆ 78 ಶಾಸಕರು ಮೊಟ್ಟ ಮೊದಲ ಬಾರಿಗೆ ಪ್ರವೇಶ

GDP

GDP; ದೇಶದ ಆರ್ಥಿಕಾಭಿವೃದ್ಧಿ 2 ವರ್ಷದಲ್ಲೇ ಕನಿಷ್ಠ: ಶೇ.5.4 ಜಿಡಿಪಿ ದಾಖಲು

supreem

ದೇವಾಲಯಗಳ ಪ್ರಸಾದ ಗುಣಮಟ್ಟ ಪರಿಶೀಲನೆ ಅರ್ಜಿಗೆ ಸುಪ್ರೀಂ ನಕಾರ

Modi Interview

Opposition ;ಜನರ ದಾರಿ ತಪ್ಪಿಸುತ್ತಿರುವ ವಿಪಕ್ಷಗಳು: ಪ್ರಧಾನಿ ಮೋದಿ

1-samsat

Adani, Manipur ಚರ್ಚೆಗೆ ಪಟ್ಟು: ವಾರ ಪೂರ ಸಂಸತ್‌ ಕಲಾಪ ವ್ಯರ್ಥ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.