ಡಿಸಿಎಂ ಅಶ್ವಥ ನಾರಾಯಣ ರಾಜೀನಾಮೆ ನೀಡಬೇಕು: ಪರಿಷತ್ ಸದಸ್ಯ ಎಸ್.ರವಿ ಕಿಡಿ
Team Udayavani, Apr 24, 2020, 12:51 PM IST
ರಾಮನಗರ: ಸೋಂಕು ಇರುವ ಸಾಧ್ಯತೆ ಇದ್ದರೂ ಬೆಂಗಳೂರು ಪಾದರಾಯನಪುರದ ಗಲಭೆ ಆರೋಪಿಗಳನ್ನು ಗ್ರೀನ್ ಜೋನ್ ನಲ್ಲಿರುವ ರಾಮನಗರದ ಕಾರಾಗೃಹದಲ್ಲಿರಿಸಲು ಜಿಲ್ಲಾ ಉಸ್ತುವಾರಿ ಸಚಿವ ಅಶ್ವಥ್ ನಾರಾಯಣ ಸಹ ಕಾರಣ. ಇಂತಹ ನಾಲಾಯಕ್, ಅಸಮರ್ಥ ಸಚಿವರು ತಕ್ಷಣ ರಾಜೀನಾಮೆ ಕೊಡಬೇಕು ಎಂದು ಎಂ.ಎಲ್.ಸಿ. ಎಸ್.ರವಿ ಕಿಡಿಕಾರಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಆರೋಪಿಗಳ ಪೈಕಿ ಇಬ್ಬರಿಗೆ ಸೋಂಕು ಪತ್ತೆಯಾಗಿದೆ. ಎಲ್ಲಾ ಆರೋಪಿಗಳನ್ಬು ತಕ್ಷಣ ಶಿಫ್ಟ್ ಮಾಡದಿದ್ದರೆ ಹೋರಾಟ ಅನಿವಾರ್ಯ ವಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ಕಾರಾಗೃಹದ ಪಕ್ಕದಲ್ಲೇ ಡಿಸಿ ಕಚೇರಿ ಕೂಡ ಇದ್ದು ಸೋಂಕು ಹರಡಿರುವ ಸಾಧ್ಯತೆ ಇರುವ ಕಾರಣ ತಕ್ಷಣ ಇಡಿ ಕಟ್ಟಡವನ್ನು ಸೀಲ್ ಡೌನ್ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಎಂ.ಎಲ್.ಸಿ. ಸಿ.ಎಂ.ಲಿಂಗಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್, ಕಾಂಗ್ರೆಸ್ ಜಿಲ್ಲಾ ಟಾಸ್ಕ್ ಫೋರ್ಸ್ ಅಧ್ಯಕ್ಷ ಇಕ್ಬಾಲ್ ಹುಸೇನ್, ಕೆಪಿಸಿಸಿ ಕಾರ್ಯದರ್ಶಿ ಸೈಯದ್ ಜಿಯಾಉಲ್ಲಾ, ಪ್ರಮುಖರಾದ ಕೆ.ರಮೇಶ್, ಗಾಣಕಲ್ ನಟರಾಜ್, ನರಸಿಂಹೂರ್ತಿ, ರಾಮಚಂದ್ರು, ಚೇತನ್ ಕುಮಾರ್, ಕೃಷ್ಣಮೂರ್ತಿ ಮುಂತಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramanagara: ವಿಪಕ್ಷ, ಕಾಂಗ್ರೆಸ್ ನಾಯಕರಿದಂಲೂ ಸಿದ್ದರಾಮಯ್ಯ ಟಾರ್ಗೆಟ್; ವಾಟಾಳ್
Kanakapura: ಕನಕಪುರ ಸರ್ಕಾರಿ ಬಸ್‌ನಲ್ಲಿ ಖಾಸಗಿ ವ್ಯಕ್ತಿ ಕಂಡಕ್ಟರ್!
Ramanagara: ಬಸ್ ಪ್ರಯಾಣ ದರ ಹೆಚ್ಚಳ ಖಂಡಿಸಿ ಗ್ರಾಮಸ್ಥರಿಂದ ಪ್ರತಿಭಟನೆ
Ramanagar; ಎಲ್&ಟಿ ಮುಖ್ಯಸ್ಥ ಸುಬ್ರಮಣಿಯನ್ ಹೇಳಿಕೆ ವಿರುದ್ದ ವಾಟಾಳ್ ನಾಗರಾಜ್ ಪ್ರತಿಭಟನೆ
Ramanagara: ಡ್ರೋನ್ ಮೂಲಕ ಕೃಷಿಭೂಮಿ ಮರು ಸರ್ವೇ ಯಶಸ್ವಿ: ದೇಶದಲ್ಲೇ ಮೊದಲು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.