ನೀರಿನ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಿ
Team Udayavani, Apr 24, 2020, 5:17 PM IST
ಮುಳಬಾಗಿಲು: ಕೋವಿಡ್ 19 ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ ರಾಜ್ಯದ ಜನರಿಗೆ ಸರ್ಕಾರ ನ್ಯಾಯಬೆಲೆ ಅಂಗಡಿಗಳ ಮೂಲಕ ಅಗತ್ಯ ಆಹಾರ ಧಾನ್ಯ ಉಚಿತವಾಗಿ ನೀಡುತ್ತಿದೆ. ಉಳಿ ದಂತೆ ದಾನಿಗಳು, ತಾವೂ ಆಹಾರ, ತರ ಕಾರಿ ನೀಡುತ್ತಿದ್ದೇನೆ ಎಂದು ಅಬಕಾರಿ ಸಚಿವ ಎಚ್.ನಾಗೇಶ್ ತಿಳಿಸಿದರು.
ನಗರದ ಶಾಸಕರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿ, ಕೋವಿಡ್ 19 ಲಾಕ್‌ಡೌನ್‌ನಿಂದ ತಾಲೂಕಿನಲ್ಲಿ ನೀರಿನ ಸಮಸ್ಯೆ ಉಂಟಾಗದಿರಲು ಈಗಾಗಲೇ ನೀರಿನ ಅಭಾವ ಉಂಟಾಗಿರುವ 132 ಹಳ್ಳಿಗಳ ಪೈಕಿ 85 ಹಳ್ಳಿ ಗಳಲ್ಲಿ ರೀಬೋರ್ ಕೊರೆಸಿದ್ದು, 15 ಹೊಸ ಬೋರ್‌ವೆಲ್‌ಗಳನ್ನು ಕೊರೆಸುವ ಮೂಲಕ ನೀರಿನ ಸಮಸ್ಯೆ ನಿವಾರಿಸಲಾಗಿದೆ. ಬಾಕಿ ಉಳಿದ 50ಕ್ಕೂ ಅ«ಕ ಕೊಳವೆ ಬಾವಿಗಳನ್ನು ಕೊರೆಸಲು ಬೋರ್‌ವೆಲ್ ಏಜೆನ್ಸಿಗೆ ಸೂಚಿಸಲಾಗಿದ್ದು ಕೊರೆಸುತಿರೆಂದರು.
ಇನ್ನು ನಗರದಲ್ಲಿ ಕೊರತೆಯಿರುವ ಕೊಳವೆ ಬಾವಿಗಳನ್ನು ಕೊರೆಸಲಾಗುವುದಲ್ಲದೇ, ನೀರಿನ ಅಭಾವ ಉಂಟಾದರೆ ತುರ್ತಾಗಿ ನೀರು ಸರಬರಾಜು ಮಾಡ ಲು ಖಾಸಗಿ ಟ್ಯಾಂಕರ್ ಪಡೆಯದೇ ನಗರಸಭೆಯಿಂದಲೇ ಹೆಚ್ಚುವರಿಯಾಗಿ ನೀರಿನ ಟ್ಯಾಂಕರ್ ಖರೀದಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದರು. ತಾಪಂ ಅಧ್ಯಕ್ಷ ಎ.ವಿ. ಶ್ರೀನಿವಾಸ್ ಮಾತನಾಡಿ, ತಾಲೂಕಿನ ಎಲ್ಲಾ ಗ್ರಾಪಂಗಳಲ್ಲಿ 14ನೇ ಹಣಕಾಸು ಯೋಜನೆ ಯಡಿ ಉಳಿಕೆ ಇರುವ 6 ಕೋಟಿ ರೂ.ಅನ್ನು ನೀರಿನ ಸಮಸ್ಯೆ ನಿವಾರಣೆಗಾಗಿ ಕೊಳವೆಬಾವಿ ಕೊರೆಸಿ, ಪಂಪು ಮೋಟಾರ್ ಅಳವಡಿಸಲು, ಪೈಪ್‌ಲೈನ್ ಹಾಗೂ ವಿದ್ಯುತ್ ಸಂಪರ್ಕಕ್ಕೆ ಬಳಸಿ ಕೊಳ್ಳುವಂತೆ ಸೂಚಿಸಲಾಗಿದೆ ಎಂದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.