ಫಲಾನುಭವಿಗಳು ಪಿಂಚಣಿಗಾಗಿ ಅಲೆದಾಟ
ಸಾಮಾಜಿಕ ಭದ್ರತಾ ಯೋಜನೆ
Team Udayavani, Apr 25, 2020, 5:09 AM IST
ಸಾಂದರ್ಭಿಕ ಚಿತ್ರ..
ಉಡುಪಿ: ಸಾಮಾಜಿಕ ಭದ್ರತಾ ಯೋಜನೆಯಡಿ ಅವಿಭಜಿತ ದ.ಕ ಜಿಲ್ಲೆಯ ಸಾವಿರಾರು ಫಲಾನುಭವಿಗಳು ಕಳೆದ ಎರಡು ಮೂರು ತಿಂಗಳಿನಿಂದ ಮಾಸಾಶನ ಸರಿಯಾದ ಸಮಯಕ್ಕೆ ಸಿಗದೆ ಅಂಚೆ ಕಚೇರಿ ಬ್ಯಾಂಕ್‌ಗಳಿಗೆ ನಿತ್ಯ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ.
ಪಿಂಚಣಿ ಸಿಗದೆ ಪರದಾಟ
ಬಡತನದಿಂದ ಸಂಕಷ್ಟಕ್ಕೆ ಸಿಲಿಕಿರುವ, ಅನಾರೋಗ್ಯದಿಂದ ಬಳಲಿದವರಿಗೆ ಆರ್ಥಿಕ ರಕ್ಷಣೆ ಹಾಗೂ ಸಾಮಾಜಿಕ ನ್ಯಾಯ ಒದಗಿಸಲು ಸರಕಾರ ಹಲವು ಸಾಮಾಜಿಕ ಭದ್ರತಾ ಯೋಜನೆ ಜಾರಿಗೊಳಿಸಿದೆ. ಆದರೆ ಜಿಲ್ಲೆಯಲ್ಲಿ ಫಲಾನುಭವಿಗಳಿಗೆ ಸರಿಯಾದ ಸಮಯದಲ್ಲಿ ಪಿಂಚಣಿ ಸಿಗದ ಹಿನ್ನೆಲೆಯಲ್ಲಿ ವೃದ್ಧರು ನಿರ್ಗತಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಪಿಂಚಣಿ ಹಣಕ್ಕಾಗಿ ನೂರಾರು ರೂ. ಖರ್ಚು ಮಾಡಿಕೊಂಡು ಮಾಸಾಶನ ವಿಚಾರಿಸಿಕೊಂಡು ಬ್ಯಾಂಕ್ ಹಾಗೂ ಅಂಚೆ ಕಚೇರಿಗೆ ಅಲೆದಾಡುತ್ತಿದ್ದಾರೆ.
3 ತಿಂಗಳ ಮಾಸಾಶನ ಬಾಕಿ!
ಸಾಮಾಜಿಕ ಭದ್ರತಾ ಯೋಜನೆ ಅನ್ವಯ ವೃದ್ಧಾಪ್ಯ, ವಿಧವಾವೇತನ, ವಿಶೇಷಚೇತನ, ಸಂಧ್ಯಾಸುರಕ್ಷಾ ಸೇರಿದಂತೆ ಇತರೆ ಸಾಮಾಜಿಕ ಭದ್ರತಾ ಯೋಜನೆಯ ಮಾಸಾಶನ ಕೆಲವು ಫಲಾನುಭವಿಗಳಿಗೆ ಫೆಬ್ರವರಿಯಿಂದ ಬಾಕಿ ಇದೆ. ಕೊರೊನಾ ಭೀತಿಯಿಂದ ದೇಶವೇ ಲಾಕ್‌ಡೌನ್ ಆಗಿದೆ. ಶೇ.99ರಷ್ಟು ಗ್ರಾಮೀಣ ಭಾಗದ ಜನರು ಉದ್ಯೋಗವಿಲ್ಲದೆ ಮನೆಯಲ್ಲಿ ಕುಳಿತುಕೊಂಡಿದ್ದಾರೆ. ಇಂತಹ ಆರ್ಥಿಕ ಸಂಕಷ್ಟದ ಪರಿಸ್ಥಿತಿಯಲ್ಲಿ ಸರಕಾರದಿಂದ ಬರುವ ಮಾಸಾಶನ ನಂಬಿಕೊಂಡಿರುವ ಫಲಾನುಭವಿಗಳಿಗೆ ಸರಿಯಾದ ಸಮಯಕ್ಕೆ ಹಣ ಬರದೆ ಇರುವುದರಿಂದ ಸಂಕಷ್ಟಕ್ಕೀಡಾಗಿದ್ದಾರೆ.
ಅವಿಭಜಿತ ದ.ಕ. ಜಿಲ್ಲೆಯಲ್ಲಿ 2,76, 209 ಮಂದಿ ಸಾಮಾಜಿಕ ಭದ್ರತಾ ಯೋಜನೆಯಡಿಯಲ್ಲಿ ಪಿಂಚಣಿ ಪಡೆಯುತ್ತಿದ್ದಾರೆ. ಉಡುಪಿಯಲ್ಲಿ ವೃದ್ಧಾಪ್ಯ ವೇತನ 10,436, ಅಂಗವಿಕಲರು 12,035, ವಿಧವಾ ವೇತನ 38,579, ಸಂಧ್ಯಾ ಸುರಕ್ಷ 63,524, ಮನಸ್ವಿನಿ 3,869, ಮೈತ್ರಿ 27 ಫಲಾನುಭವಿಗಳು ಸೇರಿದಂತೆ 1,28,470 ಮಂದಿ ಪಿಂಚಣಿ ಪಡೆಯುತ್ತಿದ್ದಾರೆ. ದ.ಕ. ಜಿಲ್ಲೆಯಲ್ಲಿ ವೃದ್ದಾಪ್ಯ ವೇತನ 11,480, ಅಂಗವಿಕಲ ವೇತನ 19,315, ಮನಸ್ವಿನಿ 5,858, ಸಂಧ್ಯಾ ಸುರಕ್ಷಾ 59,200, ಮೈತ್ರಿ 170 ಸೇರಿದಂತೆ ಇತರೆ ಒಟ್ಟು 1,47,739 ಮಂದಿ ವಿವಿಧ ಸಾಮಾಜಿಕ ಭದ್ರತಾ ಯೋಜನೆಯಡಿಯಲ್ಲಿ ಪಿಂಚಣಿ ಪಡೆಯುತ್ತಿದ್ದಾರೆ.
ಈಗಾಗಲೇ ದೂರುಗಳು ಬಂದಿವೆ
ಮಾಸಾಶನ ಸಿಗದೆ ಇರುವ ಕುರಿತು ಒಂದೆರಡು ದೂರುಗಳು ಬಂದಿವೆ. ಪಿಂಚಣಿ ಸಿಗದೆ ಇರುವ ಫಲಾನುಭವಿಗಳು ಸಮೀಪದ ಸ್ಥಳೀಯಾಡಳಿತದ ಗ್ರಾಮಲೆಕ್ಕಾಧಿಕಾರಿಯನ್ನು ಭೇಟಿ ನೀಡಿ ಸಮಸ್ಯೆ ಪರಿಹರಿಸಿಕೊಳ್ಳಿ.
-ಪ್ರದೀಪ ಕುಡೇìಕರ್, ತಹಶೀಲ್ದಾರ್, ಉಡುಪಿ ತಾಲೂಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕರಾವಳಿಯಲ್ಲಿ ಕಾಶ್ಮೀರಿ ಕೇಸರಿ ಬೆಳೆದ ಟೆಕ್ಕಿಗಳು; ಹೊಸ ಪ್ರಯೋಗದಲ್ಲಿ ಮೊದಲ ಯಶಸ್ಸು !
Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ
ಆನ್‌ಲೈನ್‌ನಲ್ಲಿ ಅಧಿಕ ಲಾಭಾಂಶದ ಆಮಿಷ: ಬ್ಯಾಂಕ್ ಮ್ಯಾನೇಜರ್‌ಗೆ ಲಕ್ಷಾಂತರ ರೂ. ವಂಚನೆ
Udupi: ಹೂಡೆ ಬೀಚ್‌ನಲ್ಲಿ ಪ್ರವಾಸಿಗರ ಮೇಲೆ ಸ್ಥಳೀಯರಿಂದ ಹಲ್ಲೆ
Hiriydaka: ಒಟಿಪಿ ನೀಡಿ 5 ಲಕ್ಷ ರೂ. ಕಳೆದುಕೊಂಡ ಯುವತಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.