ರೈತ ಸೇತುವಿನಿಂದ ಅನುಕೂಲವಾಯಿತು
Team Udayavani, Apr 25, 2020, 6:10 AM IST
ಮೂಡುಬಿದಿರೆ: ಉದಯವಾಣಿಯ “ರೈತಸೇತು’ ಅಂಕಣವು ಶ್ರೀಕಾಂತ್ ಶೆಟ್ಟಿ ಅವರ ಕೈ ಹಿಡಿದಿದೆ.ಪಾಲಡ್ಕದ ಪ್ರಗತಿ ಪರ ಕೃಷಿಕ ಸೀತಾರಾಮ ಶೆಟ್ಟರ ಪುತ್ರರಾದ ಶ್ರೀಕಾಂತ್, ಎಂಟು ಎಕ್ರೆ ಜಾಗದಲ್ಲಿ ಸುಮಾರು 75 ಟನ್ ಅನಾನಸ್ ಬೆಳೆದಿದ್ದರು. ಸುಮಾರು 17ಟನ್‌ನಷ್ಟು ಫಸಲು ಕೊಯ್ಲಿಗೆ ಬಂದಿತ್ತು. ಈ ಸಂದರ್ಭದಲ್ಲೇ ಲಾಕ್‌ಡೌನ್ ಸಮಸ್ಯೆ ಆರಂಭವಾದದ್ದು. ಬೆಳೆದ ಬೆಳೆಯ ಬಗೆಗೂ ಮಾಹಿತಿ ನೀಡಲು ಅವಕಾಶವಿಲ್ಲದಂಥ ಸಂಕಷ್ಟ.
ಈ ಸಂದರ್ಭದಲ್ಲಿ ಪತ್ರಿಕೆಯ ರೈತ ಸೇತು ಅಂಕಣಕ್ಕೆ ಮಾಹಿತಿ ಕಳಿಸಿದರು. ಅದರಂತೆ ಪತ್ರಿಕೆಯಲ್ಲಿ ಪ್ರಕಟವಾಯಿತು. ಅದಾದ ಬಳಿಕ ಹಲವಾರು ಕರೆಗಳು ಬಂದಿದ್ದು, ವ್ಯಾಪಾರ ಕುರಿತು ಚರ್ಚಿಸಿವೆ. ಈಗಾಗಲೇ ಸುಮಾರು 6 ಟನ್ ನಷ್ಟು ಹಣ್ಣು ಖರ್ಚಾಗಿದ್ದು, ಉಳಿದ ಹಣ್ಣಿಗೂ ಬೇಡಿಕೆ ಬಂದಿದೆ. ಈ ಬಗ್ಗೆ ಹರ್ಷ ವ್ಯಕ್ತಪಡಿಸುವ ಶ್ರೀಕಾಂತ್ ಶೆಟ್ಟಿ, “ಉದಯವಾಣಿಯ ಈ ರೈತ ಸೇತು ಅಂಕಣದಿಂದ ನನಗಂತೂ ಉಪಕಾರವಾಗಿದೆ. ನೇರ ಗ್ರಾಹಕರು ಸಿಗುವುದರಿಂದ ಉತ್ತಮ ದರವೂ ಬೆಳೆಗಾರರಿಗೆ ಸಿಗುತ್ತದೆ. ಈ ಅಂಕಣ ಹೀಗೆಯೇ ಮುಂದುವರಿಯಲಿ’ ಎನ್ನುತ್ತಾರೆ ಶ್ರೀಕಾಂತ ಶೆಟ್ಟಿ ಅವರು .
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.