ಸ್ವಾವಲಂಬಿ ಭಾರತ ಗ್ರಾಮೀಣ ಭಾರತ
ಗ್ರಾಮೀಣರ "ದೋ ಗಜ್ ಕಿ ದೂರಿ' ಮಂತ್ರ ಹೊಸ ವ್ಯಾಖ್ಯಾನ ಲಾಕ್‌ಡೌನ್, ಸಾಮಾಜಿಕ ಅಂತರ ಪಾಲನೆ: ಜನರ ಬದ್ಧತೆಗೆ ಮೆಚ್ಚುಗೆ
Team Udayavani, Apr 25, 2020, 6:30 AM IST
ಹೊಸದಿಲ್ಲಿ: ಕೋವಿಡ್-19 ಮತ್ತು ಅದರಿಂದಾಗಿ ವಿಧಿಸಲಾಗಿರುವ ಲಾಕ್‌ಡೌನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಶುಕ್ರವಾರದ ಪಂಚಾಯತ್ ರಾಜ್ ದಿನವನ್ನು ಪ್ರಧಾನಿ ಮೋದಿ ಗ್ರಾಮೀಣ ಭಾರತಕ್ಕೆ ಸ್ಫೂರ್ತಿ ತುಂಬುವುದಕ್ಕಾಗಿ ಉಪಯೋಗಿಸಿಕೊಂಡರು. ದೇಶದ ವಿವಿಧ ಗ್ರಾಮ ಪಂಚಾಯತ್‌ಗಳ ಅಧ್ಯಕ್ಷರು ಮತ್ತು ಸದಸ್ಯರೊಂದಿಗೆ ವೀಡಿಯೋ ಕಾನ್ಫ ರೆನ್ಸ್ ನಡೆಸಿದ ಪ್ರಧಾನಿ, ಕೋವಿಡ್-19 ಸೋಂಕು ನಮಗೆ ಸ್ವಾವಲಂಬನೆಯ ಪಾಠ ಕಲಿಸಿದೆ, ಗ್ರಾಮೀಣ ಭಾರತ ತನ್ನ ದೈನಂದಿನ ಅಗತ್ಯಗಳಿಗಾಗಿ ಪರರನ್ನು ಅವಲಂಬಿಸಿಲ್ಲ ಎಂಬುದನ್ನು ಈ ದಿನಗಳು ಸಾಬೀತುಪಡಿಸಿವೆ ಎಂದರು.ಕೋವಿಡ್-19 ವಿರುದ್ಧ ಹೋರಾಟದಲ್ಲಿ ಗ್ರಾಮೀಣ ಭಾರ ತದ ಪಾತ್ರವನ್ನು ಕೊಂಡಾಡಿದರು.
ಸೋಂಕಿನ ವಿರುದ್ಧ ಹೋರಾಟದಲ್ಲಿ ಗ್ರಾಮೀಣ ಭಾಗದ ಜನರ ಪಾತ್ರವನ್ನು ಶ್ಲಾ ಸಿದ ಮೋದಿ,”ದೋ ಗಜ್ ಕಿ ದೂರಿ’ (ಎರಡು ಗಜಗಳ ಅಂತರ) ಎಂಬ ಮಂತ್ರದ ಮೂಲಕ ಹಳ್ಳಿ ಮಂದಿ ಸಾಮಾಜಿಕ ಅಂತರಕ್ಕೆ ಒಂದು ಹೊಸ ಮತ್ತು ಅತ್ಯಂತ ಸುಲಭವಾಗಿ ಅರ್ಥವಾಗುವ ವ್ಯಾಖ್ಯಾನ ನೀಡಿದ್ದಾರೆ. ಈ ಮೂಲಕ ಕೋವಿಡ್-19 ಸೋಂಕಿನ ವಿರುದ್ಧದ ಹೋರಾಟದಲ್ಲಿ ಗ್ರಾಮೀಣ ತತ್ವಗಳು, ಸಾಂಪ್ರದಾಯಿಕ ಮೌಲ್ಯಗಳನ್ನು ಜನರು ಅಳವಡಿಸಿಕೊಂಡಿದ್ದಾರೆ ಎಂದರು.
ಗ್ರಾಮೀಣ ಸ್ವಾವಲಂಬನೆ
ಕೋವಿಡ್-19 ಸೋಂಕು ಮತ್ತು ಲಾಕ್‌ಡೌನ್ ನಮಗೆ ಹಲವು ಹೊಸ ವಿಷಯಗಳನ್ನು ಕಲಿಸಿದೆ. ಅದರಲ್ಲಿ ಮುಖ್ಯವಾದುದು ಸ್ವಾವಲಂಬನೆ. ಅದರಲ್ಲೂ ಗ್ರಾಮೀಣ ಭಾಗದ ಜನತೆ ತಮ್ಮ ದಿನನಿತ್ಯದ ಅಗತ್ಯಗಳಿಗೆ ಸ್ವಾವಲಂಬನೆ ಸಾಧಿಸಿದ್ದಾರೆ. ಅದೇ ರೀತಿ ಪ್ರತಿಯೊಂದು ಗ್ರಾಮಸಭೆ, ಪ್ರತೀ ವಲಯ ಮತ್ತು ಪ್ರತೀ ಜಿಲ್ಲೆಯೂ ತನ್ನ ಮೂಲ ಅಗತ್ಯಗಳಿಗಾಗಿ ಯಾರೊಬ್ಬರನ್ನೂ ಅವಲಂಬಿಸಬಾರದು ಎಂದು ಪ್ರಧಾನಿ ಕರೆ ನೀಡಿದರು.
ಭಾರತದ್ದೇ ಚರ್ಚೆ
ಇಡೀ ವಿಶ್ವವೇ ಇಂದು ಕೋವಿಡ್-19 ಮತ್ತು ಭಾರತದ ಕುರಿತು ಮಾತನಾಡುತ್ತಿದ್ದರೆ ಅದಕ್ಕೆ ಕಾರಣ ನಮ್ಮ ಜನತೆ. ಲಾಕ್‌ಡೌನ್ ಪಾಲನೆಯಲ್ಲಿ ನಾವು ತೋರಿರುವ ಬದ್ಧತೆಗೆ ಸಾಟಿಯಿಲ್ಲ. ಈ ಹೋರಾಟದಲ್ಲಿ ದೇಶವಾಸಿಗಳು ಪ್ರದರ್ಶಿಸುತ್ತಿರುವ ದಿಟ್ಟತನ ಜಗತ್ತಿಗೇ ಮಾದರಿ. ಇದರ ಜತೆಜತೆಗೆ ಸೀಮಿತ ಸಂಪನ್ಮೂಲಗಳ ನಡುವೆಯೂ ನಾವು ವೈರಸ್ಸನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಹೊಸ ಆಲೋಚನೆಗಳೊಂದಿಗೆ ಮುಂದೆ ಸಾಗುತ್ತಿದ್ದೇವೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟರು.
ಇ-ಗ್ರಾಮ ಸ್ವರಾಜ್, ಸ್ವಾಮಿತ್ವ ಲೋಕಾರ್ಪಣೆ
ಗ್ರಾ.ಪಂ. ಕೆಲಸ ಕಾರ್ಯಗಳನ್ನು ಡಿಜಿಟಲೀಕರಣಗೊಳಿ ಸುವ ಇ-ಗ್ರಾಮ ಸ್ವರಾಜ್ ಪೋರ್ಟಲ್ (ವೆಬ್‌ಸೈಟ್) ಮತ್ತು ಆ್ಯಪ್ ಹಾಗೂ ಗ್ರಾಮೀಣ ಭಾಗದಲ್ಲಿ ಏಕೀಕೃತ ಆಸ್ತಿ ಮೌಲ್ಯಮಾಪನ ಪರಿಹಾರಗಳನ್ನು ಒದಗಿಸುವ “ಸ್ವಾಮಿತ್ವ’ ಯೋಜನೆಗೆ ಪ್ರಧಾನಿ ಮೋದಿ ಚಾಲನೆ ನೀಡಿದರು.
ಅತಿ ಕಿರಿಯ ಅಧ್ಯಕ್ಷೆ
ಜತೆ ಮೋದಿ ಮಾತು
“ಇದು ಪ್ರಧಾನಿ ಕಚೇರಿಯಿಂದ ಕರೆ.ಇನ್ನು ಅರ್ಧ ತಾಸಿನಲ್ಲಿ ಪ್ರಧಾನಿ ಮೋದಿ ಅವರು ನಿಮ್ಮೊಂದಿಗೆ ಮಾತನಾಡಲಿದ್ದಾರೆ’ ಹೀಗೆ ಹೇಳಿದ ಕರೆ ಕಡಿತವಾದಾಗ ದೇಶದ ಅತಿ ಕಿರಿಯ ಗ್ರಾ.ಪಂ. ಅಧ್ಯಕ್ಷೆ, 21 ವರ್ಷದ ಪಲ್ಲವಿ ಠಾಕೂರ್ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ.
ಕೃಷಿ ಕುಟುಂಬದ ಹಿನ್ನೆಲೆ ಹೊಂದಿರುವ ಮತ್ತು ಮಾಹಿತಿ ತಂತ್ರಜ್ಞಾನ ವಿಷಯದಲ್ಲಿ ಬಿಎಸ್‌ಸಿ ಪದವಿ ಪಡೆದಿರುವ ಪಲ್ಲವಿ, 19ನೇ ವಯಸ್ಸಿನಲ್ಲೇ ಪಂಜಾಬ್‌ನ ಪಠಾಣ್‌ಕೋಟ್ ಜಿಲ್ಲೆಯ ಹರಾ ಗ್ರಾಮದಲ್ಲಿ ಪಂಚಾಯತ್ ಚುನಾವಣೆಗೆ ನಿಂತು, ಗೆದ್ದು ಸರಪಂಚರಾಗಿದ್ದಾರೆ. ಶುಕ್ರವಾರ ಬೆಳಗ್ಗೆ ಹತ್ತೂಕಾಲು ಗಂಟೆಯ ಹೊತ್ತಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಪಲ್ಲವಿಗೆ ವೀಡಿಯೋ ಕರೆ ಮಾಡಿ ಸಂಭಾಷಿಸಿದರು. ಗ್ರಾ.ಪಂ. ವ್ಯಾಪ್ತಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು, ಯೋಜನೆಗಳ ಕುರಿತು ಚರ್ಚಿಸಿದ್ದಾರೆ. ಹಾಗೆಯೇ ಕೋವಿಡ್-19 ಸೋಂಕಿಗೆ ಸಂಬಂಧಿಸಿದಂತೆ ಗ್ರಾಮಸ್ಥರ ಬಗ್ಗೆ ಸೂಕ್ತ ಕಾಳಜಿ ವಹಿಸಿರುವುದಕ್ಕೆ ಪ್ರಧಾನಿ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
“ಜತೆ ಗೂಡಿ ನಡೆಯೋಣ’
ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರಿನ ವಾಟದಹೊಸಹಳ್ಳಿ ಗ್ರಾ.ಪಂ. ಅಧ್ಯಕ್ಷ ನವೀನ್ ಕುಮಾರ್ ಅವರು ಪ್ರಧಾನಿ ಜತೆಗಿನ ಸಂವಾ ದ ದಲ್ಲಿ ಭಾಗಿಯಾದರು. ಕೋವಿಡ್-19 ನಿಯಂತ್ರಣ ಸಂಬಂಧ ರಚಿಸಲಾಗಿರುವ ಕಾರ್ಯಪಡೆಯ ಕಾರ್ಯವೈಖರಿ, ಸಾಮಾಜಿಕ ಅಂತರ, ಕಡ್ಡಾಯ ಮಾಸ್ಕ್, 1 ಮೀಟರ್ ಅಂತರ ಕಾಪಾಡುವುದು ಸೇರಿ ಪಂಚಸೂತ್ರಗಳ ಪಾಲನೆ ಬಗ್ಗೆ ಕೇಳಿದರು. ಜತೆಗೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಕೈಗೊಂಡ ಕ್ರಮಕ್ಕೆ ಮೆಚ್ಚುಗೆ ಸೂಚಿಸಿದ ಪ್ರಧಾನಿ, ಕೋವಿಡ್-19 ವಿರುದ್ಧ ಹೋರಾಟದಲ್ಲಿ ನಾವು ಜಯಗಳಿಸಬೇಕಿದ್ದು, ಎಲ್ಲರೂ ಜತೆಗೂಡಿ ನಡೆಯೋಣ ಎಂದರು.
ಗಮನ ಸೆಳೆದ “ಗಮಾc’
ವೀಡಿಯೋ ಕಾನ್ಫರೆನ್ಸ್ ವೇಳೆ ಪ್ರಧಾನಿ ಹೆಗಲ ಮೇಲಿದ್ದ ಗಮಾc (ಟವಲ್) ಅನ್ನೇ ಮುಖಕ್ಕೆ ಮಾಸ್ಕ್ ರೀತಿ ಸುತ್ತಿಕೊಂಡು ಗಮನ ಸೆಳೆದರು. ಮಾಸ್ಕ್ ಧರಿಸುವುದನ್ನು ಮರೆಯಬಾರದು. ಜತೆಗೆ ಆರೋಗ್ಯ ಸೇತು ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವಂತೆ ಮತ್ತೂಮ್ಮೆ ಮನವಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Passes Away: ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ವಿಧಿವಶ
Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ
Critical: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆರೋಗ್ಯದಲ್ಲಿ ಏರುಪೇರು; ಏಮ್ಸ್‌ಗೆ ದಾಖಲು
RSS: ಮೋಹನ್ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್ ಪತ್ರಿಕೆ ಆಕ್ಷೇಪ
Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್ ಮಾತು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.