ಪೊಲೀಸರ ಗೋಳು ಕೇಳೋರ್ಯಾರು?

ಮನೆಗೆ ತೆರಳಿದರೆ ವೈರಸ್‌ ಜತೆಗೇ ಬಂದೀತೆಂಬ ಭಯ; ರಜೆ ಇದ್ದರೂ ಠಾಣೆಯಲ್ಲೇ ವಾಸ್ತವ್ಯ

Team Udayavani, Apr 25, 2020, 8:43 AM IST

ಪೊಲೀಸರ ಗೋಳು ಕೇಳೋರ್ಯಾರು?

ಸಾಂದರ್ಭಿಕ ಚಿತ್ರ

ಬೆಂಗಳೂರು:
ಪ್ರಸಂಗ-1:
ಪಾದರಾಯನಪುರದಲ್ಲಿ ಕಳೆದೊಂದು ವಾರದಿಂದ ಕೆಲಸ ಮಾಡುತ್ತಿದ್ದೇವೆ. ಗಲಾಟೆ ವೇಳೆ ಕೆಲವರನ್ನು ಹಿಡಿದು ಎಳೆದೊಯ್ದಿದ್ದೇವೆ. ಮನೆಯಲ್ಲಿ ಎರಡೂವರೆ ವರ್ಷದ ಮಗಳಿರುವ ಕಾರಣ ನಾಲ್ಕು ದಿನಗಳಿಂದ ಮನೆಗೆ ಹೋಗಿಲ್ಲ. ಠಾಣೆ, ಸಮುದಾಯ ಭವನದಲ್ಲೇ ಸ್ನಾನ, ನಿದ್ರೆ. ಇನ್ನು ರಜೆ ಸಿಕ್ಕರೂ ಊರಿಗೆ ಹೋಗುವಂತಿಲ್ಲ. ಊರಿನಲ್ಲಿರುವ ತಂದೆ, ತಾಯಿಗೆ ಫೋನ್‌ನಲ್ಲಿ ಸಮಾಧಾನ ಹೇಳುತ್ತಿದ್ದೇವೆ. ಒಂದು ರೀತಿ ನಾನೂ ಕ್ವಾರಂಟೈನ್‌ನಲ್ಲಿದ್ದೇನೆ.  – ಕಾನ್‌ ಸ್ಟೇಬಲ್‌ ತಿಮ್ಮಪ್ಪ.

ಪ್ರಸಂಗ-2
ಬೆಳಗ್ಗೆ 7 ಗಂಟೆಗೆ ಕರ್ತವ್ಯಕ್ಕೆ ಹಾಜರಾಗಿದ್ದೇನೆ. ಮಧ್ಯಾಹ್ನ ಮೂರು ಅಥವಾ ನಾಲ್ಕು ಗಂಟೆವರೆಗೂ ಕೆಲಸ ಮಾಡಬೇಕು. ಈ ವೇಳೆ ನೂರಾರು ವಾಹನಗಳ ತಪಾಸಣೆ, ಜತೆಗೆ ಸೋಂಕಿತರ ಪತ್ತೆಗಾಗಿ ಮನೆಗಳಿಗೂ ಹೋಗುತ್ತೇವೆ. ಸೋಂಕಿತರ ಭೀತಿಯಿಂದ ಮನೆಗೆ ಹೋಗಲು ಭಯ. ಮನೆಗೆ ಹೋಗುತ್ತಿದ್ದಂತೆ ಬಿಸಿ ನೀರಿನಲ್ಲಿ ಸ್ನಾನ, ಬಟ್ಟೆಗಳನ್ನು ತೊಳೆದು ಹಾಕುತ್ತೇವೆ…

ಇದೇ ನಮ್ಮ ಪ್ರಾಥಮಿಕ ಚಿಕಿತ್ಸೆ..
– ಕೇಂದ್ರ ವಿಭಾಗದ ಠಾಣೆಯೊಂದರ ಹೆಡ್‌ ಕಾನ್‌ ಸ್ಟೇಬಲ್‌ ನರಸಿಂಹ ಇದು ಕೇವಲ ಒಂದಿಬ್ಬರು ಪೊಲೀಸ್‌ ಸಿಬ್ಬಂದಿ ಸಮಸ್ಯೆಗಳಲ್ಲ. ನಗರದಲ್ಲಿರುವ ಬಹುತೇಕ ಸಿಬ್ಬಂದಿ, ಅಧಿಕಾರಿಗಳ ಪರಿಸ್ಥಿತಿ. ಒಂದೂವರೆ ತಿಂಗಳಿಂದ ನಗರದ ಪೊಲೀಸರು ಆರೋಗ್ಯ ಇಲಾಖೆ ಅಧಿಕಾರಿಗಳ ಜತೆ ನಿರಂತರವಾಗಿ ಸೋಂಕಿತರ ಜತೆ ಒಡನಾಟ ಹೊಂದಿದ್ದಾರೆ. ಶಂಕಿತರ ಮನೆಗಳಿಗೆ ಭೇಟಿ ನೀಡುವುದು, ಕಾನೂನು ಸುವ್ಯವಸ್ಥೆ ಕಾಪಾಡುವುದು, ವಾಹನಗಳ ತಪಾಸಣೆ ಮಾಡುತ್ತಿದ್ದಾರೆ. ಹೀಗಾಗಿ ಇಡೀ ನಗರದಲ್ಲಿ ಪೊಲೀಸ್‌ ಇಲಾಖೆಯಲ್ಲಿ ಆತಂಕ ಎದುರಾಗಿದ್ದು,
ಭಯದಲ್ಲೇ ಕೆಲಸ ಮಾಡುತ್ತಿದ್ದಾರೆ. ಈ ಸಂಬಂಧ ನಗರದ ಪೊಲೀಸ್‌ ಆಯುಕ್ತರು ಪದೇ ಪದೆ ಕೈತೊಳೆಯಬೇಕು. ವಾರದ ರಜೆ ಕೊಡಬೇಕು ಎಂದು ಸೂಚಿಸಿದ್ದಾರೆ. ಅದರಂತೆ ಪೊಲೀಸ್‌ ಸಿಬ್ಬಂದಿಗೆ ವಾರದ ರಜೆ ಮಾತ್ರವಲ್ಲ. ಠಾಣೆಯ ಶೇ.30ರಷ್ಟು ಸಿಬ್ಬಂದಿಗೆ ಒಂದು ವಾರ ರಜೆ ಕೊಡಲಾಗಿದೆ. ಠಾಣಾ ಮಟ್ಟದಲ್ಲಿ ವೈದ್ಯಕೀಯ ತಪಾಸಣೆ ನಡೆಯುತ್ತಿದೆ ಎಂದು ಹಿರಿಯ
ಅಧಿಕಾರಿಯೊಬ್ಬರು ಹೇಳಿದರು

ಮನೆ, ಸಂಬಂಧಿಕರಲ್ಲಿ ಆತಂಕ: ಇತ್ತೀಚೆಗೆ ದೂರು ನೀಡಲು ಬರುವ ಸಾರ್ವಜನಿಕರು ಕೂಡ ನಮ್ಮನ್ನು ಅನುಮಾನದಿಂದ ನೋಡುವಂತಾಗಿದೆ. ಅಲ್ಲದೆ, ಮನೆಗೆ ಹೋದಾಗಲೂ ಪತ್ನಿ, ತಂದೆ, ತಾಯಿ, ಸಂಬಂಧಿಕರು ಆತಂಕದಿಂದಲೇ ಬಾಗಿಲು ತೆರೆಯುತ್ತಾರೆ. ಮನೆಯೊಳಗೆ ಕಾಲಿಡುತ್ತಿದ್ದಂತೆ ನೇರವಾಗಿ ಸ್ನಾನ ಮಾಡಿಕೊಂಡು, ಬಟ್ಟೆಯನ್ನು ಬಿಸಿ ನೀರಿನಲ್ಲಿ
ತೊಳೆಯುವಂತೆ ಸೂಚಿಸುತ್ತಾರೆ. ಇನ್ನು ಊರಿನಲ್ಲಿರುವ ಪತ್ನಿ ಹಾಗೂ ನಮ್ಮ ಸಂಬಂಧಿಕರು ನಿತ್ಯ ಕರೆ ಮಾಡಿ ಆರೋಗ್ಯದ ಬಗ್ಗೆ ವಿಚಾರಿಸುತ್ತಾರೆ. ಎಲ್ಲರಿಗೂ ಧೈರ್ಯ ಹೇಳುವುದೇ
ದೊಡ್ಡ ಕೆಲಸವಾಗಿದೆ. ಒಂದು ವಾರ ರಜೆ ಇದ್ದರೂ ಊರಿಗೆ ಹೋಗುವಂತಿಲ್ಲ. ಕೆಲ ಊರುಗಳಲ್ಲಿ ಸ್ವಯಂ ದಿಗ್ಬಂಧನ ಹಾಕಿದ್ದಾರೆ. ಹೊರಗಿನವರ ಪ್ರವೇಶಕ್ಕೆ ಅವಕಾಶವಿಲ್ಲ. ಬೇರೆಯವರು ಬಂದರೂ ಪೊಲೀಸರು ಮಾತ್ರ ಊರಿನೊಳಗೆ ಬರುವುದು ಬೇಡ. ಸೇರಿಸುವುದು ಬೇಡ ಎಂದು ನಿರ್ಧರಿಸಿದ್ದಾರೆ ಎಂದು ತುಮಕೂರು ರಸ್ತೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಎಸ್‌ಐ ವಾಸುದೇವ್‌ ಬೇಸರ ವ್ಯಕ್ತಪಡಿಸಿದರು.

ವಸತಿ ಗೃಹಗಳಲ್ಲೇ ಬಂಧಿ
ಪೊಲೀಸ್‌ ವಸತಿ ಗೃಹಗಳಲ್ಲಿ ಪೊಲೀಸ್‌ ಸಮುದಾಯವೇ ಇದ್ದರೂ ಪರಸ್ಪರ ಒಬ್ಬರನ್ನೊಬ್ಬರು ಅನುಮಾನದಿಂದಲೇ ಮಾತಿಗಿಳಿಯುತ್ತೇವೆ. ಸಂಜೆಯಾಗುತ್ತಲೇ ಮನೆ ಬಾಗಿಲು, ಹೊರಗಡೆ ಕುಳಿತು ಹರಟೆ ಹೊಡೆಯುತ್ತಿದ್ದ ಮಹಿಳೆಯರು, ಇದೀಗ ಹೊರಗಡೆ ಬರುತ್ತಿಲ್ಲ. ಮಕ್ಕಳನ್ನು ಹೊರಗಡೆ ಕಳುಹಿಸುತ್ತಿಲ್ಲ. ಹೇಗೊ ಕೆಲಸ ಮುಗಿಸಿಕೊಂಡು ಅಕ್ಕ-ಪಕ್ಕದ ಮನೆ ಮಂದಿ ಜತೆ ಕಾಲ
ಕಳೆಯುತ್ತಿದ್ದೆವು. ಕೋವಿಡ್ ದಿಂದ ಅದು ತಪ್ಪಿದೆ ಎನ್ನುತ್ತಾರೆ ಪಿಎಸ್‌ಐ ರೇಣುಕಾದೇವಿ.

ಕ್ವಾರೆಂಟೈನ್ ಗೆ ಸಿದ್ಧತೆ
ಹೊರಗಡೆ ನಿರಂತರವಾಗಿ ಕೆಲಸ ಮಾಡುತ್ತಿರುವ ಸಿಬ್ಬಂದಿಯ ಪಟ್ಟಿಯನ್ನು ಸಿದ್ಧಪಡಿಸಿ ಆರೋಗ್ಯ ತಪಾಸಣೆ ನಡೆಸಿ, ಅಂತಹವರಿಗೆ ಕನಿಷ್ಠ ಏಳರಿಂದ ಹದಿನಾಲ್ಕು ದಿನ ಕ್ವಾರೆಂಟೈನ್‌ ಮಾಡಲು ಸಿದ್ಧತೆ ನಡೆಸಲಾಗಿತ್ತು. ಆದರೆ, ಪರಿಣಾಮಕಾರಿಯಾಗಿ ಮಾಡಲು ಸಾಧ್ಯವಾಗಲಿಲ್ಲ ಎಂದು ಹಿರಿಯ ಪೊಲೀಸರು ಹೇಳಿದರು.

●ಮೋಹನ್‌ ಭದ್ರಾವತಿ,

ಟಾಪ್ ನ್ಯೂಸ್

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

ಪ್ರಹ್ಲಾದ ಜೋಶಿ

Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ

Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹತ್ಯೆ…

Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…

Belagavi; It hurts a lot, I won’t be afraid even if a hundred CT Ravi comes: Lakshmi Hebbalkar

Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ

champions trophy

Cricket: ಚಾಂಪಿಯನ್ಸ್‌ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ: ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ; ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

5

Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ

Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್‌ ಚಾಲಕನ ವಿರುದ್ಧ ದೂರು

Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್‌ ಚಾಲಕನ ವಿರುದ್ಧ ದೂರು

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

ಪ್ರಹ್ಲಾದ ಜೋಶಿ

Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ

FIR 6 to 6 Kannada movie

FIR 6to6 movie: ಆ್ಯಕ್ಷನ್‌ ಚಿತ್ರದಲ್ಲಿ ವಿಜಯ ರಾಘವೇಂದ್ರ

Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹತ್ಯೆ…

Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…

Belagavi; It hurts a lot, I won’t be afraid even if a hundred CT Ravi comes: Lakshmi Hebbalkar

Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.