ನನಸಾಗುತ್ತಿದೆ ನೀರಾವರಿ ಕನಸು
ದೇಶದಲ್ಲೇ ಅತಿ ಉದ್ದದ ತಿಡಗುಂದಿ ಜಲ ಮೇಲ್ಸೇತುವೆಯಲ್ಲಿ ಹರಿದ ಕೃಷ್ಣೆಗೆ ಪೂಜೆ
Team Udayavani, Apr 25, 2020, 7:21 PM IST
ವಿಜಯಪುರ: ತಿಡಗುಂದಿ ವಿಸ್ತರಣಾ ನಾಲೆಯ ಜಲ ಮೇಲ್ಸೇತುವೆಗೆ ಹರಿದು ಬಂದ ಕೃಷ್ಣೆಗೆ ಶಾಸಕರಾದ ಎಂ.ಬಿ.ಪಾಟೀಲ, ಬಸನಗೌಡ ಪಾಟೀಲ ಯತ್ನಾಳ, ದೇವಾನಂದ ಚವ್ಹಾಣ ಗಂಗಾಪೂಜೆ ಸಲ್ಲಿಸಿದರು
ವಿಜಯಪುರ: ಜಿಲ್ಲೆಯನ್ನು ಸಂಪೂರ್ಣ ನೀರಾವರಿ ಮಾಡುವ ನನ್ನ ಕನಸಿನ ಭಾಗವಾದ ಮುಳವಾಡ ಮೂರನೇ ಹಂತದ ಯೋಜನೆಯ ತಿಡಗುಂದಿ ವಿಸ್ತರಣೆಯ ಹಾಗೂ ದೇಶದಲ್ಲೇ ಅತಿ ಉದ್ದದ ಜಲ ಮೇಲ್ಸೇತುವೆಗೆ ನೀರು ಹರಿದು ಬಂದಿದೆ. ಜಿಲ್ಲೆಯ ನೀರಾವರಿ ಸೌಲಭ್ಯ ಇಲ್ಲದ ಎತ್ತರದ ಪ್ರದೇಶದ ರೈತರ ಜಮೀನಿಗೆ ನೀರು ಹರಿಸುವ ಮೂಲಕ ನನ್ನ ಕನಸು ನನಸಾಗಿದೆ ಎಂದು ಜಲ ಸಂಪನ್ಮೂಲ ಖಾತೆ ಮಾಜಿ ಸಚಿವ, ಬಬಲೇಶ್ವರ ಶಾಸಕ ಎಂ.ಬಿ. ಪಾಟೀಲ ಹೇಳಿದರು.
ಶುಕ್ರವಾರ ಜಿಲ್ಲೆಯ ಬುರಣಾಪುರ ಹಾಗೂ ಅರಕೇರಿ ಬಳಿ ತಿಡಗುಂದಿ ಶಾಖಾ ಕಾಲುವೆಗೆ ಹರಿದು ಬಂದ ಕೃಷ್ಣೆಗೆ ಗಂಗಾಪೂಜೆ ನೆರವೇರಿಸಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮುಳವಾಡ ಏತ ನೀರಾವರಿ ಮೂರನೇ ಹಂತದ ಯೋಜನೆಯ ತಿಡಗುಂದಿ ವಿಸ್ರರಣಾ ನಾಲೆಯಿಂದ ನೀರಾವರಿ ಸೌಲಭ್ಯ ಇಲ್ಲದ ಭೀಕರ ಬರಪೀಡಿತ ಇಂಡಿ, ಚಡಚಣ ಭಾಗದ 25 ಕೆರೆಗಳಿಗೆ ನೀರು ತುಂಬಿಸುವ ಕೆಲಸಕ್ಕೆ ಚಾಲನೆ ದೊರೆತಿದ್ದು ಸಂತಸ ತಂದಿದೆ ಎಂದರು.
ಮದಭಾವಿ ಗ್ರಾಮದ ಆಪಟೇಕ್ ಬಳಿ 70.75 ಕಿ.ಮೀ 64 ಕಿ.ಮೀ. ಉದ್ದದ ಈ ಕಾಲುವೆ 280 ಕೋಟಿ ರೂ.ವೆಚ್ಚದ 14.73 ಕಿ.ಮೀ. ಉದ್ದದ ಈ ಮೇಲ್ಸೇತುವೆ ದೇಶದಲ್ಲೇ ಅತ್ಯಂತ ಉದ್ದದ ಜಲ ಮೇಲ್ಸೇತುವೆ.
14.229 ಕ್ಯೂಸೆಕ್ ನೀರನ್ನು ಹರಿಸುವ ಸಾಮರ್ಥ್ಯದ 36 ವಿತರಣಾ ಕಾಲುವೆ ಹೊಂದಿದೆ. ಈ ಕಾಲುವೆಯಿಂದ ವಿಜಯಪುರ, ಇಂಡಿ ತಾಲೂಕಿನ 29 ಗ್ರಾಮಗಳ ಸುಮಾರು 63,190 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದೆ ಎಂದರು.
ಭೀಕರ ಬರಕ್ಕೆ ಹೆಸರಾದ ತಡವಲಗಾದಿಂದ ಇಂಡಿ ರೈಲ್ವೆ ನಿಲ್ದಾಣದವರೆಗಿನ ಪ್ರದೇಶ ನೀರಾವರಿ ಸೌಲಭ್ಯದಿಂದ ವಂಚಿತವಾಗಿತ್ತು. ಇದನ್ನರಿತ ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ 4,177 ಹೆಕ್ಟೆರ್ ಪ್ರದೇಶ ತಿಡಗುಂದಿ ಶಾಖಾ ಕಾಲುವೆಯ 56ನೇ ಕಿ.ಮೀ. ನಂತರ ಪೈಪ್‌ಲೈನ್ ಜಾಲವನ್ನು ಅಳವಡಿಸಿಕೊಂಡು ನೀರಾವರಿಗೆ ಒಳಪಡಿಸಲು ಯೋಜಿಸಲಾಗಿದೆ. ಇದರಿಂದ ಇಂಡಿ ತಾಲೂಕಿನ ರಾಜನಾಳ, ಅಥರ್ಗಾ, ಮಿಂಚನಾಳ, ಲಿಂಗದಳ್ಳಿ, ಗಣವಲಗ, ನಿಂಬಾಳ ಬಿ.ಕೆ, ತೆನಿಹಳ್ಳಿ, ಬೋಲೆಗಾಂವ, ಹಂಜಗಿ ಭಾಗದ 14,500 ಹೆಕ್ಟೇರ್ ಪ್ರದೇಶಕ್ಕೆ ನೀರು ಹರಿಯಲಿದೆ ಎಂದರು.
ತಿಡಗುಂದಿ ವಿಸ್ತರಣೆಯ ಶಾಖಾ ಕಾಲುವೆಯಿಂದ 56 ಕಿ.ಮೀ.ವರೆಗೆ 15,249 ಹೆಕ್ಟೇರ್ ನೀರಾವರಿ ಕಾಣಲಿದೆ. ಇದರಲ್ಲಿ ಇಂಡಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 2,800 ಹೆಕ್ಟೇರ್ ಕ್ಷೇತ್ರವೂ ನೀರಾವರಿ ತಿಡಗುಂದಿ ಶಾಖಾ ಕಾಲುವೆ ಕಿ.ಮೀ. 56ರ ನಂತರ ಪೈಪ್ ವಿತರಣಾ ಜಾಲವನ್ನು ಅಳವಡಿಸಲಾಗಿದೆ ಎಂದರು.
ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ, ಇಂಡಿ ತಾಲೂಕಿನ 31 ಹಳ್ಳಿಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಕುರಿತು ಪತ್ರ ಬರೆದಿದ್ದರು. ಇದರಲ್ಲಿ ತಿಡಗುಂದಿ ಯೋಜನೆಯ 12 ಹಳ್ಳಿಗಳು ಈಗಾಗಲೇ ಸೌಲಭ್ಯ ಕಲ್ಪಿಸಿದ್ದು, ನಿಂಬಾಳ ಕೆ.ಡಿ, ಹಳಗುಣಕಿ, ಹೊರ್ತಿ ಸೇರಿ ಉಳಿದ 19 ಹಳ್ಳಿಗಳಿಗೆ ಹೊರ್ತಿ ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆಯಿಂದ ನೀರಾವರಿ ಸೌಲಭ್ಯ ಕಲ್ಪಿಸಲು ಯೋಜನೆ ರೂಪಿಸಲಾಗಿದೆ ಎಂದು ವಿವರಿಸಿದರು.
ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ನಾಗಠಾಣ ಶಾಸಕ ದೇವಾನಂದ ಚವ್ಹಾಣ, ಮಾಜಿ ಶಾಸಕರಾದ ರಾಜು ಆಲಗೂರ, ವಿಠ್ಠಲ ಕಟಕದೋಂಡ, ಡಾ| ಮಹಾಂತೇಶ ಬಿರಾದಾರ, ಸಿದ್ದಣ್ಣ ಸಕ್ರಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Panchamasali;ಈಗಲೂ ಮೀಸಲಾತಿ ಹೋರಾಟ ಮಾಡುತ್ತಿದ್ದೇನೆ: ಲಕ್ಷ್ಮೀ ಹೆಬ್ಬಾಳಕರ್
Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಇಸ್ಪೀಟ್ ಅಡ್ಡೆಯ ಮೇಲೆ ಡಿವೈಎಸ್ಪಿ ದಾಳಿ; ಮಾಜಿ ಅಧ್ಯಕ್ಷ-ಹಾಲಿ ಉಪಾಧ್ಯಕ್ಷ ಸೇರಿ 8 ಜನರ ಬಂಧನ
Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ
Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Kiccha Sudeepa: ಕ್ರಿಸ್ಮಸ್ ಗೆ ಬರುತ್ತಿದೆ ʼಮ್ಯಾಕ್ಸ್ʼ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.