ತುಮಕೂರಲ್ಲಿ ಮತ್ತೂಂದು ಕೋವಿಡ್ ದೃಢ
ಪಿ.ಎಚ್.ಕಾಲೋನಿ ಸೀಲ್‌ಡೌನ್, ಮನೆಯಿಂದ ಹೊರ ಬರಬೇಡಿ: ಜಿಲ್ಲಾಧಿಕಾರಿ
Team Udayavani, Apr 25, 2020, 2:40 PM IST
ತುಮಕೂರು: ಕಳೆದ 25 ದಿನಗಳಿಂದ ಯಾವುದೇ ಕೋವಿಡ್ ಸೋಂಕು ಪ್ರಕರಣ ಇಲ್ಲ ಎಂದು ನಿರಾಳರಾಗಿದ್ದ ಕಲ್ಪತರು ನಾಡಿನ ಜನರಿಗೆ ಮತ್ತೆ ಆತಂಕ ಹೆಚ್ಚಾಗಿದ್ದು ನಗರದಲ್ಲಿದ್ದ
ಗುಜರಾತ್ ಮೂಲದ ಪಿ-447 ವ್ಯಕ್ತಿಯಲ್ಲಿ ಕೋವಿಡ್-19ರ ಪ್ರಕರಣ ಪಾಸಿ ಟೀವ್ ಇರುವುದು ದೃಢಪಟ್ಟಿದೆ. ಸೋಂಕಿತ ವ್ಯಕ್ತಿಯು ಮಾ.12ರಂದು ತುಮಕೂರು ಜಿಲ್ಲೆಗೆ
ಆಗಮಿಸಿದ್ದು, ದೇಶದಲ್ಲಿ ಲಾಕ್‌ಡೌನ್ ಆಗಿರುವುದರಿಂದ ಇಲ್ಲೇ ಮಸೀ ದಿಯಲ್ಲಿ ಉಳಿದುಕೊಂಡಿದ್ದರು. ಜಿಲ್ಲೆಯಲ್ಲಿ ಕೋವಿಡ್-19ರ ನಿಯಂತ್ರಣಕ್ಕೆ ಸಂಬಂಧಿಸಿ ದಂತೆ ಹೊರ
ರಾಜ್ಯದಿಂದ ಬಂದಿರುವ ವ್ಯಕ್ತಿಗಳನ್ನು ರ್‍ಯಾಂಡ್‌ಮ್ ಆಗಿ ತಪಾಸಣೆಗೊಳ ಪಡಿಸಲಾಗಿತ್ತು. ಇದರಲ್ಲಿ ಹೊರ ಜಿಲ್ಲೆಯಿಂದ ಬಂದಿರುವ ಒಬ್ಬ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ.
ಸೋಂಕಿತ ವ್ಯಕ್ತಿಯು ಮಾ.12ರಿಂದಲೂ ನಗರದ ಪಿ.ಎಚ್ ಕಾಲೋನಿಯ ಮಸೀದಿ ಯಲ್ಲಿ ವಾಸವಿದ್ದರು. ಇವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್‌ಕುಮಾರ್ ತಿಳಿಸಿದ್ದಾರೆ. ಪುರಸ್ ಕಾಲೋನಿಯ ಮಸೀದಿಯಲ್ಲಿದ್ದ ಗುಜರಾತ್ ಮೂಲದ ವ್ಯಕ್ತಿಗೆ ಕೋವಿಡ್ ಪಾಸಿಟೀವ್ ಇರುವುದು ದೃಢ ಪಡುತ್ತಿರು ವಂತೆಯೇ ಜಿಲ್ಲಾಡಳಿತ ತಕ್ಷಣ ಕಾರ್ಯೋನ್ಮುಖವಾಗಿ ಪುರಸ್ ಕಾಲೋನಿಯ ಸುತ್ತ ಮುತ್ತ ಹೆಚ್ಚಿನ ಭದ್ರತೆ ವ್ಯವಸ್ಥೆ ಮಾಡಿದ್ದು, ಎಲ್ಲಾ ಕಡೆ ಬ್ಯಾರೀಕೇಟ್ ಗಳನ್ನು ಹಾಕಿ ಜನ ಓಡಾಡದಂತೆ ಬಿಗಿ ಭದ್ರಮಾಡಿದರು.
ಈಗ ಸದ್ಯದ ಪರಿಸ್ಥಿತಿಯಲ್ಲಿ ಪಿ.ಎಚ್ ಕಾಲೋನಿಯನ್ನು ಸಂಪೂರ್ಣವಾಗಿ ಕಂಟೈ ನ್ಮೆಂಟ್ ವಲಯ ವೆಂದು ಪರಿಗಣಿಸಿ ಸೀಲ್‌ಡೌನ್ ಮಾಡಲಾಗಿದೆ. ಈ ಪ್ರದೇಶದಲ್ಲಿ ಮೆಡಿಕಲ್
ತುರ್ತು ಸೇವೆ ಹೊರತುಪಡಿಸಿ, ಅನಗತ್ಯವಾಗಿ ಓಡಾಡಲು ಅವಕಾಶವಿರುವು ದಿಲ್ಲ ಎಂದು ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಆರೋಗ್ಯ ಇಲಾಖಾ ಸಿಬ್ಬಂದಿಗಳ ತಂಡವು ಮನೆ-ಮನೆಗೆ ಭೇಟಿ ನೀಡಿ, ಪ್ರತಿಯೊಬ್ಬರಿಗೂ ಆರೋಗ್ಯ ತಪಾಸಣೆ ಮಾಡುತ್ತಾರೆ. ಇವರಲ್ಲಿ ಸೋಂಕಿನ ಲಕ್ಷಣ ಕಂಡು ಬಂದರೆ ಅವರಿಗೆ ತುರ್ತಾಗಿ ಚಿಕಿತ್ಸೆಗೆ ಒಳಪಡಿಸಲಾಗುವುದು. ಈ ಪ್ರದೇಶದಲ್ಲಿರುವ ಜನರು ಭಯಪಡದೇ ಧೈರ್ಯವಾಗಿರ ಬೇಕು. ನಿಮಗೆ ಬೇಕಾಗುವ ಅಗತ್ಯ ವಸ್ತುಗಳನ್ನು ಮಹಾನಗರ ಪಾಲಿಕೆ
ವತಿಯಿಂದ ಮನೆ-ಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು. ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ. ತುಮಕೂರು ನಗರದಲ್ಲಿ
ಕಂಡುಬಂದಿ ರುವ ಸೋಂಕಿತ ವ್ಯಕ್ತಿಗೆ ಜಿಲ್ಲಾ ಕೊವಿಡ್ -19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವೀರಭದ್ರಯ್ಯ ತಿಳಿಸಿದರು.
ಬಿಗಿಭದ್ರತೆ: ನಗರದ ಪಿ.ಎಚ್.ಕಾಲೋನಿ ಸುತ್ತ ಮುತ್ತ ಬಾರೀ ಪೊಲೀಸ್ ಭದ್ರೆತೆ ವ್ಯವಸ್ಥೆ ಮಾಡಿದ್ದಾರೆ ರಸ್ತೆಯಲ್ಲಿ ಯಾರೂ ಓಡಾಡ ದಂತೆ ತಿಳಿಸಿದ್ದಾರೆ, ಸುಮ್ಮನೆ ಮನೆಯಿಂದ ಹೊರ
ಬಂದರೆ ಕ್ರಮ ಕೈಗೊಳ್ಳುತ್ತಿದ್ದಾರೆ.
ಸೋಂಕು ತಡೆಗೆ ಸ್ಪಂದಿಸಿ
ತುಮಕೂರಿನ ಪುರಸ್ ಕಾಲೋನಿಯ ಮಸೀದಿಯಲ್ಲಿದ್ದ ಗುಜರಾಜ್ ಮೂಲದ ವ್ಯಕ್ತಿಗೆ ಕೋವಿಡ್ ಸೋಂಕು ಧೃಢ ಪಟ್ಟಿರುವ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ವಾಸವಿರುವ ಎಲ್ಲರ ಆರೋಗ್ಯ ತಪಾಸಣೆ ಮಾಡಬೇಕಾಗಿದೆ, ಅಲ್ಲಿಗೆ ನಮ್ಮ ಆರೋಗ್ಯ ಸಿಬ್ಬಂದಿ ಬಂದಾಗ ಅವರಿಗೆ ಸ್ಪಂದಿಸಿ ಸರಿಯಾದ ಮಾಹಿತಿ ನೀಡಿ, ತಪ್ಪು ಮಾಹಿತಿ ನೀಡಿದರೆ ಸೋಂಕನ್ನು ತಡೆಗಟ್ಟುವುದು
ಕಷ್ಟವಾಗುತ್ತದೆ. ಈ ಸೋಂಕಿತ ವ್ಯಕ್ತಿಯ ಜೊತೆ ಯಾರಾದರೂ ಸಂಪರ್ಕದಲ್ಲಿ ಇದ್ದವರ ಕುರಿತು ಮಾಹಿತಿ ನೀಡಿದರೆ ಅಂತಹವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಜನರಲ್ಲಿ ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್ ಭೀತಿ!
IPL-2025: ಓಂಕಾರ್ ಸಾಳ್ವಿ ಆರ್‌ಸಿಬಿ ಬೌಲಿಂಗ್ ಕೋಚ್
MUDA: ಸುಮ್ನಿರಯ್ಯ ಗೊತ್ತಿಲ್ದೆ ಮಾತಾಡ್ತಿಯಾ: ಸೋಮಣ್ಣಗೆ ಸಿದ್ದರಾಮಯ್ಯ ಪ್ರೀತಿಯ ಗದರಿಕೆ!
Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!
Ration Card: ಬಡವರಿಗೆ ಬಿಪಿಎಲ್ ಕಾರ್ಡ್ ತಪ್ಪದಂತೆ ನೋಡಿಕೊಳ್ಳಿ: ಸಿಎಂ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.