ಕೆಮ್ಮಿದರೆ ಪರೀಕ್ಷಿಸಲಿದೆ ಆ್ಯಪ್
Team Udayavani, Apr 25, 2020, 3:45 PM IST
ಮಣಿಪಾಲ: ಸಾಂಕ್ರಾಮಿಕ ರೋಗಗಳು ಬಂದ ಬಳಿಕ ಉಸಿರಾಡಲು ಕಷ್ಟದ ಪರಿಸ್ಥಿತಿ. ಸೋಂಕಿನ ಸಣ್ಣಪುಟ್ಟ ಲಕ್ಷಣಗಳು ಕಾಣಿಸಿಕೊಂಡರೂ ಭಯ ಪಡಬೇಕಾದ ಸಂದರ್ಭ. ಆದರೆ ಇವುಗಳನ್ನು ಅಳೆಯಲು ಶೀಘ್ರದಲ್ಲಿ ಮೊಬೈಲ್ ಅಪ್ಲಿಕೇಶನ್‌ಗಳು ಬರಲಿವೆ. ಈ ಆ್ಯಪ್ ಕೆಮ್ಮನ್ನು ಗುರುತಿಸಲಿದ್ದು ಕೆಮ್ಮು ನಿಜವಾಗಿಯೂ ಕೋವಿಡ್ ಸೋಂಕಿನ ಲಕ್ಷಣವೇ ಎಂದು ಅದು ನಿರ್ಧರಿಸಲಿದೆ.
ಕೃತಕ ಬುದ್ಧಿಮತ್ತೆಯ (ಎಐ) ತಂತ್ರಜ್ಞಾನದಡಿಯಲ್ಲಿ ಇದು ಕಾರ್ಯನಿರ್ವಹಿಸಲಿದೆ. ಸ್ವಿಸ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳ ತಂಡ ನಿರ್ಮಿಸುತ್ತಿರುವ ಕೊಗ್ವಿಡ್ ಎಂಬ ಅಪ್ಲಿಕೇಶನ್ ಇದಾಗಿದೆ. ಈ ಆ್ಯಪ್ ಜನರು ಕೆಮ್ಮುವುದನ್ನು ರೆಕಾರ್ಡ್‌ಮಾಡಿಕೊಳ್ಳುತ್ತದೆ. ಕೆಮ್ಮುವ ವೇಳೆ ಕಫಗಳು ಕೋವಿಡ್ ವೈರಸ್ ಸೋಂಕಿತನಂತೆ ಧ್ವನಿಸುತ್ತದೆಯೇ ಎಂಬುದನ್ನು ಪರೀಕ್ಷೆ ಮಾಡಲಿದೆ.
ಈಗಾಗಲೇ ತಂಡವು ಕೆಮ್ಮು ಇರುವ 15,000ಕ್ಕೂ ಹೆಚ್ಚು ಜನರ ಶಬ್ದ ಮಾದರಿಗಳನ್ನು ಸಂಗ್ರಹಿಸಿ¨ªಾರೆ. ಅದರಲ್ಲಿ 1,000 ಜನರು ಕೋವಿಡ್-14 ಎಂದು ಗುರುತಿಸಲ್ಪಟ್ಟವರಿದ್ದಾರೆ. ಕಳೆದ ವಾರ “ದಿ ವಾಲ್ ಸ್ಟ್ರೀಟ್ ಜರ್ನಲ್’ ವರದಿ ಮಾಡಿದಂತೆ, ಕನಿಷ್ಠ ಮೂರು ಇತರ ಲ್ಯಾಬ್‌ಗಳು ಕೃತಕ ಬುದ್ಧಿ ಮತ್ತೆ-ಚಾಲಿತ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸುತ್ತಿವೆ. ಇದು ಉಸಿರಾಟ, ಮಾತನಾಡುವಿಕೆ ಮತ್ತು ಕೆಮ್ಮನ್ನು ವಿಶ್ಲೇಷಿಸಿ ವರದಿ ನೀಡುತ್ತದೆ ಎಂದಿದೆ. ಆದರೆ ಈ ಅಪ್ಲಿಕೇಶನ್ ಇನ್ನೂ ಅಭಿವೃದ್ಧಿಯ ಹಂತದಲ್ಲಿದ್ದು ಬಳಕೆ ಬರಬೇಕಾದರೆ ಹಲವು ಸುತ್ತಿನ ಪರೀಕ್ಷೆಗಳು ಅನಿವಾರ್ಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
MUST WATCH
ಹೊಸ ಸೇರ್ಪಡೆ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Love Reddy: ತೆರೆಗೆ ಬಂತು ʼಲವ್ ರೆಡ್ಡಿʼ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.