ರಾಜ್ಯದಲ್ಲಿ ಮತ್ತೆ 11 ಸೋಂಕು ಪ್ರಕರಣಗಳು: 500 ತಲುಪಿದ ಸೋಂಕಿತರ ಸಂಖ್ಯೆ
Team Udayavani, Apr 25, 2020, 6:05 PM IST
ಬೆಂಗಳೂರು: ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚಳವಾಗಿದ್ದು, ಇಂದು ಮತ್ತೆ ಹನ್ನೊಂದು ಪ್ರಕರಣಗಳು ದೃಢವಾಗಿದೆ. ಕಳೆದ 24 ಗಂಟೆಯಲ್ಲಿ 26 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದೆ.
ಬೆಂಗಳೂರು ನಗರದಲ್ಲಿ ಸೋಂಕಿತ ಸಂಖ್ಯೆ 419ರ ಸಂಪರ್ಕದಿಂದ ಮತ್ತಷ್ಟು ಜನರಿಗೆ ತಾಗಿದ್ದು, 419ರ ದ್ವಿತೀಯ ಸಂಪರ್ಕದಿಂದ ನಾಲ್ವರಿಗೆ ಸೋಂಕು ತಾಗಿದೆ. ಆರು ವರ್ಷದ ಮಗುವಿಗೆ ಸೋಂಕು ದೃಢವಾಗಿದ್ದರೆ, ಅದೇ ಸಂಪರ್ಕದಿಂದ 90 ವರ್ಷದ ವೃದ್ಧನಿಗೂ ಸೋಂಕು ಪತ್ತೆಯಾಗಿದೆ.
ಬೆಂಗಳೂರು ನಗರದಲ್ಲಿ ಮತ್ತೂ ಮೂವರು ಸೋಂಕು ಪ್ರಕರಣಗಳು ದೃಢವಾಗಿದ್ದು, ಸೋಂಕಿತ ಸಂಖ್ಯೆ 465ರ ಸಂಪರ್ಕದಿಂದ ಮೂವರಿಗೆ ಸೋಂಕು ತಾಗಿದೆ.
ಮೈಸೂರಿನ ನಂಜಗೂಡಿನಲ್ಲಿ 50 ವರ್ಷದ ಮಹಿಳೆಗೆ ಸೋಂಕು ತಾಗಿದ್ದು, ಸೋಂಕಿತ ಸಂಖ್ಯೆ 382ರ ಸಂಪರ್ಕದಿಂದ ಸೋಂಕು ತಾಗಿದೆ.
ಬೆಳಗಾವಿಯ ಹಿರೇಬಾಗೆವಾಡಿಯಲ್ಲಿ ಮೂರು ಸೋಂಕು ಪ್ರಕರಣ ದೃಢವಾಗಿದ್ದು, 128 ಸೋಂಕಿತ ಸಂಪರ್ಕದಿಂದ ಮೂವರಿಗೆ ಸೋಂಕು ತಾಗಿದೆ
ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 500 ತಲುಪಿದ್ದು, 18 ಜನರು ಸೋಂಕು ಕಾರಣದಿಂದ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಇದುವರೆಗೆ 158 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.