ಕಾರ್ಮಿಕರಿಗೆ ದಿನಸಿ ವಿತರಣೆ
Team Udayavani, Apr 26, 2020, 11:36 AM IST
ಆನೇಕಲ್: ಚೀನಾದವರು ಕುತಂತ್ರ ದಿಂದ ಕೋವಿಡ್ 19 ಮಾರಕ ಕಾಯಿಲೆ ಪ್ರಪಂಚದ ವ್ಯಾಪ್ತಿ ಹಬ್ಬಿದೆ ಎಂದು ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ದಿನ್ನೂರು ರಾಜು ತಿಳಿಸಿದರು.
ಪಟ್ಟಣದ ಸುಧಾಮ ನಗರ ವ್ಯಾಪ್ತಿಯ ನಿರಾಶ್ರಿತರಿಗೆ ಫೆಡರೇಷನ್ ಆಫ್ ಚಂದಾಪುರ ಅಸೋಸಿಯೇಷನ್ಸ್ ವತಿಯಿಂದ ಆಯೋಜಿಸಿದ್ದ ದಿನಸಿ ಪದಾರ್ಥ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ದೇಶದ ಪ್ರಧಾನಿ 1 ತಿಂಗಳ ಲಾಕ್ ಡೌನ್ ಮಾಡಿದ್ದು ದಿನಗೂಲಿ ಕಾರ್ಮಿಕರು ಕೆಲಸವಿಲ್ಲದೆ ಹಸಿವಿನಿಂದ ಬಳಲಬಾರದು ಎಂಬ ನಿಟ್ಟಿನಲ್ಲಿ ಸುಧಾಮ ನಗರ ವ್ಯಾಪ್ತಿಯಲ್ಲಿ ಈಗಾಗಲೇ ಹಲವು ಬಾರಿ ಬಡವರಿಗೆ ಆಹಾರ ಧಾನ್ಯ ವಿತರಣೆ ಮಾಡಲಾಗಿದ್ದು ಸಂಘ ಸಂಸ್ಥೆಗಳಿಂದಲೂ ಇದೇ ರೀತಿ ಮುಂದಿನ ದಿನಗಳಲ್ಲಿ ಸಹಾಯ ನೀಡಿದರೆ ಇನ್ನಷ್ಟು ಜನರಿಗೆ ಉಪಕಾರ ಆಗುತ್ತದೆ ಎಂದರು.
ಪೆಡರೇಷನ್ ಆಫ್ ಚಂದಾಪುರ ಅಸೋಸಿಯೇಷನ್ಸ್ ಅಧ್ಯಕ್ಷ ಜೋಸೆಫ್, ಕೋವಿಡ್ 19 ಸಂಕಷ್ಟದಿಂದ ತೊಂದರೆಗೊಳಗಾದ ಆಸಕ್ತರಿಗೆ ಚಂದಾಪುರ ಭಾಗದಲ್ಲಿರುವ ಅಪಾರ್ಟ್ ಮೆಂಟ್ ಗಳು ಬಡಾವಣೆಗಳ ಸಂಘಗಳಿಂದ ಪದಾರ್ಥ ಶೇಖರಣೆ ಮಾಡಿ ನೀಡುವ ಕೆಲಸಮಾಡಲಾಗುತ್ತಿದೆ ಎಂದರು.
ಬಿಜೆಪಿ ಮುಖಂಡ ಜನಾರ್ಧನ್, ಕರ್ಪೂರ ಗ್ರಾಪಂ ಸದಸ್ಯ ಗೋವಿಂದ ರಾಜು, ಆನೇಕಲ್ ಅಣ್ಣಯ್ಯಪ್ಪ, ಆನೇ ಕಲ್ ಪುಟ್ಟರಾಜು, ಬಿ. ಶ್ರೀನಿವಾಸ್, ಕೆ.ಮಂಜುನಾಥ್, ಅಶ್ವತ್ಥ, ಲಿಂಗರಾಜು ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.