ತವರು ಸೇರಿದ 33 ಕಾರ್ಮಿಕರು
Team Udayavani, Apr 26, 2020, 4:47 PM IST
ವಿಜಯಪುರ: ಲಾಕ್‌ಡೌನ್ ಬಳಿಕ ನಗರದಲ್ಲಿ ಜಿಲ್ಲಾಡಳಿತದ ಪುನರ್ವಸತಿಯಲ್ಲಿದ್ದ ವಿವಿಧ ಜಿಲ್ಲೆಗಳ ಕಾರ್ಮಿಕರನ್ನು ಜಿಲ್ಲಾಡಳಿತ ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ತವರಿಗೆ ಬೀಳ್ಕೊಟ್ಟಿತು.
ವಿಜಯಪುರ: ಲಾಕ್‌ಡೌನ್ ಬಳಿಕ ಜಿಲ್ಲೆಯಲ್ಲಿ ಸಿಲುಕಿಕೊಂಡಿದ್ದ ಉಡುಪಿ ಸೇರಿ ರಾಜ್ಯ ವಿವಿಧ ಜಿಲ್ಲೆಗಳ ಕಾರ್ಮಿಕರನ್ನು ಶನಿವಾರ ರಾತ್ರಿ ಜಿಲ್ಲಾಡಳಿತ ತವರಿಗೆ ಬೀಳ್ಕೊಟ್ಟಿದೆ.
ಬೇರೆ ಪ್ರದೇಶಗಳಿಂದ ಬಂದು ಲಾಕ್ ಡೌನ್ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಸಿಲುಕಿದ್ದ ರಾಜ್ಯದ ಉಡುಪಿ, ಮಂಗಳೂರು, ಬೆಂಗಳೂರು, ಬೆಳಗಾವಿ ಸೇರಿದಂತೆ 9 ಜಿಲ್ಲೆಗಳ 33 ಕಾರ್ಮಿಕರಿಗೆ ಜಿಲ್ಲಾಡಳಿತ ನಗರದಲ್ಲಿ ತಾತ್ಕಾಲಿಕ ಪುನರ್ವಸತಿ ಕಲ್ಪಿಸಿತ್ತು. ಇದೀಗ ಸರ್ಕಾರ ತಾತ್ಕಾಲಿಕ ಪುನರ್ವಸತಿಯಲ್ಲಿರುವ ರಾಜ್ಯದ ಒಳಗಡೆಯ ಅಂತರ ಜಿಲ್ಲಾ ಕಾರ್ಮಿಕರನ್ನು ತವರಿಗೆ ಕಳಿಸಲು ನಿರ್ಧರಿಸಿದೆ.
ಸರ್ಕಾರದ ಸೂಚನೆ ಮೇರೆಗೆ ಬೇರೆ ಬೇರೆ ಸ್ಥಳಗಳಿಗೆ ಸೇರಿದ ಕಾರ್ಮಿಕರಾಗಿದ್ದರಿಂದ ಕೆಲವರು ಸ್ವಂತ ವಾಹನದಲ್ಲಿ, ಮತ್ತೆ ಕೆಲವರು ಬಾಡಿಗೆ ವಾಹನದಲ್ಲಿ ತವರಿಗೆ ಮರಳಿದ್ದಾರೆ. 9 ಜಿಲ್ಲೆಗಳ ಎಲ್ಲ ಕಾರ್ಮಿಕರನ್ನು ಅವರ ತವರಿಗೆ ಕಳಿಸುವ ಮುನ್ನ ವೈದ್ಯಕೀಯ ಪರೀಕ್ಷೆ ನಡೆಸಿ, ಕೋವಿಡ್ ಸೋಂಕು ಇಲ್ಲ ಎಂಬುದನ್ನು ದೃಢಪಡಿಸಿಕೊಂಡು ಅವರ ಊರಿಗೆ ಕಳಿಸಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.