ಆರ್ಥಿಕ ಲೆಕ್ಕಾಚಾರದ ಆಸೆಯಲ್ಲಿ ಎಡವಿ ಮುಳುಗಿದ ಬ್ರಿಟನ್‌


Team Udayavani, Apr 26, 2020, 5:07 PM IST

ಆರ್ಥಿಕ ಲೆಕ್ಕಾಚಾರದ ಆಸೆಯಲ್ಲಿ ಎಡವಿ ಮುಳುಗಿದ ಬ್ರಿಟನ್‌

ಮಣಿಪಾಲ: ಜಗತ್ತಿನಾದ್ಯಂತ ರುದ್ರತಾಂಡವ ಮಾಡುತ್ತಿರುವ ಕೋವಿಡ್‌-19 ಬ್ರಿಟನ್‌ ದೇಶದಲ್ಲೂ ರಣಕೇಕೆ ಹಾಕಿದೆ. ಇಲ್ಲಿಯವರೆಗೆ 1.48 ಲಕ್ಷ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, 20 ಸಾವಿರಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಜನವರಿಯಿಂದಲೇ ಲಾಕ್‌ಡೌನ್‌ ನಿಯಮದ ಮೊರೆಹೋದ ಯುಕೆ ಪ್ರಾಂತ್ಯ ಈ ಬಿಕ್ಕಟ್ಟಿನಿಂದ ಹೊರಬರಲು ಪರದಾಡುತ್ತಿದೆ. ಹಾಗಾದರೆ ಈ ಬ್ರಿಟನ್‌ ಎಡವಿದ್ದೆಲ್ಲಿ ? ಎಂಬುದೇ ಕುತೂಹಲಕ್ಕೆ ಕಾರಣವಾಗಿದೆ.

ಜನವರಿ ತಿಂಗಳ ಪ್ರಾರಂಭದ ವೇಳೆಗೆ ಕೋವಿಡ್‌-19 ಕುರಿತಾದ ಕಳವಳದ ಸುದ್ದಿಗಳು ಬಿತ್ತರವಾಗಲು ಶುರುವಾಗಿತ್ತು. ಚೀನದಲ್ಲಿನ ಸಾವು-ನೋವಿನ ಸುದ್ದಿಗಳು ಕಿವಿಗೆ ಬಂದು ಅಪ್ಪಳಿಸಿದ್ದವು. ವಿಶ್ವದಲ್ಲಿ ಮಾರಣಾಂತಿಕ ಪಿಡುಗು ಕುರಿತಾದ ಚರ್ಚೆಗಳು ಪ್ರಾರಂಭಗೊಂಡು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವತ್ತ ಇತರೆ ದೇಶಗಳು ದಾಪುಗಾಲಿಡುತ್ತಿದ್ದರೆ, ಬ್ರಿಟನ್‌ ಮಾತ್ರ ತಲೆ ಕೆಡಿಸಿಕೊಂಡಿರಲಿಲ್ಲ.

ಬ್ರೆಕ್ಸಿಟ್‌ ಒಕ್ಕೂಟದ ಮೋಜಿನ ಪಾರ್ಟಿ ಆಯೋಜನೆಯಲ್ಲಿ ಮುಳುಗಿದ್ದ ಬ್ರಿಟನ್‌, ದೇಶದ ಸ್ಥಿತಿಗತಿಗಳನ್ನು ಅವಲೋಕಿಸಿ, ಬಿಕ್ಕಟ್ಟಿನ ಪರಿಹಾರಕ್ಕಾಗಿ ರೂಪುರೇಷೆ ಮಾಡಲೇ ಇಲ್ಲ. ಸಾಮಾಜಿಕ ಆರೋಗ್ಯಕ್ಕಿಂತ ರಾಜಕೀಯ ಬೆಳವಣಿಗೆಯತ್ತ ಮನಸ್ಸು ಹರಿದಿತ್ತು. ಆಗ ಕೊಂಚ ವಿಳಂಬ ಮಾಡಿದ ಪರಿಣಾಮ ಈಗ ಸಮಸ್ಯೆ ಮುಗಿಲೆತ್ತರಕ್ಕೆ ಬೆಳೆದಿದೆ.

ಕೂಗಿ ಹೇಳಿದರೂ ಕೇಳಲಿಲ್ಲ
ಲಂಡನ್‌ನ ಇಂಪೀರಿಯಲ್‌ ಕಾಲೇಜಿನ ಜಾಗತಿಕ ಆರೋಗ್ಯ ಪ್ರಾಧ್ಯಾಪಕ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ರಾಯಭಾರಿ ಡೇವಿಡ್‌ ನಬರೋ ಹೇಳಿರುವ ಪ್ರಕಾರ ಎಲ್ಲ ದೇಶದ ಸರಕಾರಗಳಿಗೆ ಜನವರಿ ಅಂತ್ಯದ ವೇಳೆಗೆ ಕೋವಿಡ್‌-19 ಮುಂದಿನ ದಿನಗಳಲ್ಲಿ ಗಂಭೀರವಾದ ಸಮಸ್ಯೆಗಳನ್ನು ಸೃಷ್ಟಿಸಬಹುದು ಎಂದು ವಿಶ್ವಸಂಸ್ಥೆ ಎಚ್ಚರಿಸಿತ್ತು. ಜತೆಗೆ ಜನವರಿ 30ರಂದು ಕೋವಿಡ್‌-19 ಅನ್ನು ಜಾಗತಿಕ ಪಿಡುಗು ಎಂದು ಘೋಷಿಸಿತು. ಆದರೆ ವಿಶ್ವಸಂಸ್ಥೆ ಎಚ್ಚರಿಕೆ ಕೂಗು ಬ್ರಿಟನ್‌ ಕಿವಿಗೆ ಕೇಳಲೇ ಇಲ್ಲ . ಪ್ರಧಾನಿ ಜಾನ್ಸನ್‌ ಬ್ರೆಕ್ಸಿಟ್‌ ಒಕ್ಕೂಟ ಮತ್ತು ಆರ್ಥಿಕತೆಯ ಕುರಿತಾದ ಚರ್ಚೆಗಳಲ್ಲಿ ಮುಳುಗಿದ್ದರು. ಮುಕ್ತ ವ್ಯಾಪಾರದತ್ತ ಒಲವು ತೋರುತ್ತಿದ್ದ ಅವರಿಗೆ ಸೋಂಕಿನ ತೀವ್ರತೆ ಅರಿವಾಗಲೇ ಇಲ್ಲ.

ನಿಯಮಗಳನ್ನು ಗೌರವಿಸಲೇ ಇಲ್ಲ
ಮಾರ್ಚ್‌ ಆರಂಭದ ವೇಳೆಗೆ ಅನೇಕ ದೇಶಗಳಲ್ಲಿ ಕೋವಿಡ್‌-19ನ ಭೀಕರತೆ ಅರಿವಾಗ ತೊಡಗಿತ್ತು. ಪ್ರಾರಂಭಿಕ ಹಂತದಲ್ಲೇ ಎಚ್ಚೆತ್ತ ದಕ್ಷಿಣ ಕೊರಿಯಾ, ಸಿಂಗಾಪುರ, ಜರ್ಮನಿ ಮುಂತಾದ ಕೆಲ ರಾಷ್ಟ್ರಗಳು ಸೋಂಕು ನಿಯಂತ್ರಿಸಲು ತೊಡಗಿದವು. ಆದರೆ ಆ ವೇಳೆಗಾಗಲೇ ಅಮೆರಿಕ, ಇಟಲಿ, ಸ್ಪೇನ್‌, ದೇಶಗಳಲ್ಲಿ ಸೋಂಕಿನ ಆರ್ಭಟ ಮುಗಿಲು ಮಟ್ಟಿತ್ತು. ಇದನ್ನೂ ಕಂಡೂ ಬ್ರಿಟನ್‌ನಲ್ಲಿ ಯಾವುದೇ ಪರಿಣಾಮಕಾರಿ ನಿಯಮಗಳನ್ನು ಜಾರಿ ಮಾಡಲೇ ಇಲ್ಲ. ಲಾಕ್‌ಡೌನ್‌ ನಿಯಮಗಳನ್ನು ಜನರು ಪಾಲಿಸುವುದಿಲ್ಲ ಎಂದು ತನ್ನಷ್ಟಕ್ಕೆ ತಾನೇ ನಿರ್ಧರಿಸಿದ ಸರಕಾರವು, ಸಾಮೂಹಿಕ ಕೂಟಗಳನ್ನು , ಪಬ್‌ಗಳು ಮತ್ತು ರೆಸ್ಟೋರೆಂಟ್‌ಗಳನ್ನು ಮುಚ್ಚಲೇ ಇಲ್ಲ. ಆ ಮೂಲಕ ಸಾಮಾಜಿಕ ಅಂತರ, ಲಾಕ್‌ಡೌನ್‌ ಮುಂತಾದ ನಿಯಮಗಳನ್ನು ಗಾಳಿಗೆ ತೂರಿದ ಬ್ರಿಟನ್‌ ಮಾರ್ಚ್‌ ಮಧ್ಯಾಂತರದಲ್ಲಿ ಲಾಕ್‌ಡೌನ್‌ ನಿರ್ಧಾರ ತಳೆಯಿತು. ಸೋಂಕು ತಡೆಯುವಲ್ಲಿ ಬ್ರಿಟನ್‌ ಟ್ರಯಲ್‌ ಆ್ಯಂಡ್‌ ಎರರ್‌ ಪದ್ಧತಿ ಅನುಸರಿಸಿತು. ಜಾಗತಿಕವಾಗಿ ಆಗುತ್ತಿರುವ ಬೆಳವಣಿಗೆಗಳಿಂದ ಕಲಿತು, ತನ್ನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಆಲೋಚಿಸಲಿಲ್ಲ. ಬದಲಾಗಿ ತನ್ನದೇ ರೀತಿಯಲ್ಲಿ ಬಿಕ್ಕಟ್ಟು ಪರಿಹರಿಸಲು ಹೋಗಿ, ಜಾಗತಿಕ ಮಟ್ಟದ ಪರಿಣಿತರ ಸಲಹೆಗಳನ್ನು ತಳ್ಳಿ ಹಾಕಿತು. ಆ ಪರಿಣಾಮ ಈಗ ಅನುಭವಿಸುವಂತಾಗಿದೆ.

ಟಾಪ್ ನ್ಯೂಸ್

1-qeq-wewqe

Constitution; ರಾಜ್ಯಸಭೆಯಲ್ಲಿ ಖರ್ಗೆ-ನಿರ್ಮಲಾ ಜಟಾಪಟಿ

High Court: 384 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳಿಗೆ ಮರು ಪರೀಕ್ಷೆ: ತಡೆ ತೆರವು

High Court: 384 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳಿಗೆ ಮರು ಪರೀಕ್ಷೆ: ತಡೆ ತೆರವು

Udupi: ಗೀತಾರ್ಥ ಚಿಂತನೆ-126: ವಾರ್ಧಕ್ಯಕ್ಕಾಗಿ ದುಃಖವಲ್ಲ, ಸಾಧನಾಚ್ಯುತಿಗಾಗಿ…

Udupi: ಗೀತಾರ್ಥ ಚಿಂತನೆ-126: ವಾರ್ಧಕ್ಯಕ್ಕಾಗಿ ದುಃಖವಲ್ಲ, ಸಾಧನಾಚ್ಯುತಿಗಾಗಿ…

Karnataka; ಸರಕಾರಿ ಅಂಗವಿಕಲ ನೌಕರರ ಪ್ರಯಾಣ ಭತ್ತೆ ದರ ಪರಿಷ್ಕರಣೆ

Karnataka; ಸರಕಾರಿ ಅಂಗವಿಕಲ ನೌಕರರ ಪ್ರಯಾಣ ಭತ್ತೆ ದರ ಪರಿಷ್ಕರಣೆ

1-hck

Hockey; ವನಿತಾ ಜೂನಿಯರ್‌ ವಿಶ್ವಕಪ್‌ : ಭಾರತ ಆಯ್ಕೆ

ಇದು 0 ಪರ್ಸೆಂಟ್‌ ಅಭಿವೃದ್ಧಿ,100 ಪರ್ಸೆಂಟ್‌ ಭ್ರಷ್ಟಾಚಾರದ ಸರಕಾರ: ಸುನಿಲ್‌

ಇದು 0 ಪರ್ಸೆಂಟ್‌ ಅಭಿವೃದ್ಧಿ,100 ಪರ್ಸೆಂಟ್‌ ಭ್ರಷ್ಟಾಚಾರದ ಸರಕಾರ: ಸುನಿಲ್‌

ಠೇವಣಿದಾರರ ಹಿತ ಕಾಯಲು ಸರ್ಕಾರ ಬದ್ಧ: ಸಚಿವ ಕೃಷ್ಣ ಬೈರೇಗೌಡ

ಠೇವಣಿದಾರರ ಹಿತ ಕಾಯಲು ಸರ್ಕಾರ ಬದ್ಧ: ಸಚಿವ ಕೃಷ್ಣ ಬೈರೇಗೌಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Cyclone: ಫ್ರಾನ್ಸ್ ನಲ್ಲಿ ಭೀಕರ ಚಂಡಮಾರುತದ… ಸಾವಿರ ಗಡಿ ದಾಟಿದ ಮೃತರ ಸಂಖ್ಯೆ

Chido Cyclone: ಫ್ರಾನ್ಸ್ ನಲ್ಲಿ ಭೀಕರ ಚಂಡಮಾರುತದ… ಸಾವಿರ ಗಡಿ ದಾಟಿದ ಮೃತರ ಸಂಖ್ಯೆ?

1-ewweqwe

San Francisco; ತಬಲಾ ಮಾಂತ್ರಿಕ ಜಾಕೀರ್ ಹುಸೇನ್ ಅವರಿಗೆ ​​​​ಐಸಿಯುನಲ್ಲಿ ಚಿಕಿತ್ಸೆ

1-miss

‘Miss Netherlands’ ಇನ್ನು ಮುಂದೆ ನಡೆಯುವುದಿಲ್ಲ…: ಸೌಂದರ್ಯಕ್ಕೆ ಮಹತ್ವ ಬೇಡ!

1-sk

South Korea; ಮಿಲಿಟರಿ ಆಡಳಿತ ಹೇರಿ ಅಧಿಕಾರ ಕಳೆದುಕೊಂಡ ಅಧ್ಯಕ್ಷ!

1-geo

Football ಮಾಜಿ ತಾರೆ ಮಿಖಾಯಿಲ್‌ ಈಗ ಜಾರ್ಜಿಯಾ ಅಧ್ಯಕ್ಷ

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

Accident-logo

Putturu: ಕಲ್ಲರ್ಪೆ ಸಮೀಪ ಕಾರುಗಳ ನಡುವೆ ಸರಣಿ ಅಪಘಾತ

Omar Abdulla

EVM; ಒಮರ್‌ ಅಬ್ದುಲ್ಲಾ, ಕಾಂಗ್ರೆಸ್‌, ಬಿಜೆಪಿ ನಡುವೆ ಜಟಾಪಟಿ

1-bang

Bangladesh Liberation: ಭಾರತ- ಬಾಂಗ್ಲಾದಲ್ಲಿ ವಿಜಯ ದಿವಸ್‌

1-qeq-wewqe

Constitution; ರಾಜ್ಯಸಭೆಯಲ್ಲಿ ಖರ್ಗೆ-ನಿರ್ಮಲಾ ಜಟಾಪಟಿ

High Court: 384 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳಿಗೆ ಮರು ಪರೀಕ್ಷೆ: ತಡೆ ತೆರವು

High Court: 384 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳಿಗೆ ಮರು ಪರೀಕ್ಷೆ: ತಡೆ ತೆರವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.