ನಮ್ಮ ಆಶಯ ನಿಮ್ಮ ಆರೋಗ್ಯ ಕಾಳಜಿ
ಕೋವಿಡ್ ತಡೆಗೆ ಶ್ರಮಿಸುತ್ತಿದ್ದಾರೆ ಆರೋಗ್ಯ ಕಾರ್ಯಕರ್ತೆಯರು
Team Udayavani, Apr 27, 2020, 6:10 AM IST
ನೀವೆಲ್ಲ ಮನೆಯಲ್ಲಿಯೇ ಇರಿ. ಆರೋಗ್ಯವಾಗಿರಿ ಎನ್ನುತ್ತಾ ಮನೆ ಮನೆ ಭೇಟಿ ನೀಡುವ ಆರೋಗ್ಯ ಯೋಧರ ಪರಿಶ್ರಮಕ್ಕೆ ಎಲ್ಲರೂ ಸಲಾಂ ಹೇಳಲೇಬೇಕು.
ಜಗತ್ತಿಗೇ ಸವಾಲಾಗಿ ನಿಂತಿರುವ ಕೋವಿಡ್ 19 ತಡೆಗಟ್ಟಲು ಸರಕಾರದೊಂದಿಗೆ ಆರೋಗ್ಯ ಕಾರ್ಯಕರ್ತೆಯರು ಇನ್ನಿಲ್ಲದ ಶ್ರಮ ಪಡುತ್ತಿದ್ದಾರೆ. ಸುಡು ಬಿಸಿಲಿನಲ್ಲಿ ಮನೆ ಮನೆ ಸುತ್ತಿ ಮಾಹಿತಿ ನೀಡುತ್ತಿರುವುದು ನಮ್ಮೆಲ್ಲರ ಆರೋಗ್ಯ ಕಾಳಜಿಗಾಗಿಯೇ. ಆದುದರಿಂದ ಅವರ ಪ್ರಶ್ನೆಗಳಿಗೆ ಉತ್ತರಿಸಿ ಸಹಕರಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ಒಂದು ವೇಳೆ ಯಾವುದೇ ಮನೆಯ ವರು ಮಾಹಿತಿ ನೀಡಲು ನಿರಾಕರಿಸಿದರೆ ಆ ಮನೆಯ ಮಾಹಿತಿಯನ್ನು ಹಿರಿಯ ಅಧಿಕಾರಿಗಳಿಗೆ ನೀಡುವುದು ಕಡ್ಡಾಯ ವಾಗಿರುತ್ತದೆ. ಅನಂತರ ಹಿರಿಯ ಅಧಿಕಾರಿಗಳು ಈ ಮನೆಗೆ ಭೇಟಿ ನೀಡಿ ವಸ್ತುಸ್ಥಿತಿ ತಿಳಿ ಹೇಳುವರು.
ಏನು ಸಲಹೆ ನೀಡುವರು
1 ಅನಾವಶ್ಯವಾಗಿ ಮನೆಯಿಂದ ಹೊರಗೆ ಬರಬೇಡಿ
2 ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸುತ್ತಿರಿ
3 ಹೊರಗೆ ಬರುವಾಗ ಪ್ರತಿಯೊಬ್ಬರೂ ಮುಖಗವಸು ಧರಿಸಿ
4 ಜ್ವರ ಕೆಮ್ಮು ಇದ್ದರೆ ತತ್‌ಕ್ಷಣವೇ ವೈದ್ಯರ ಗಮನಕ್ಕೆ ತನ್ನಿ
5 ಶರೀರ ಮತ್ತು ಪರಿಸರ ಸ್ವತ್ಛತೆಯ ಕಡೆ ಹೆಚ್ಚಿನ ಗಮನ ನೀಡಿ.
6 ಕೈಯನ್ನು ಆಗಾಗ್ಗೆ ಸ್ಯಾನಿಟೈಸರ್ ಅಥವಾ ಸಾಬೂನಿನಿಂದ ತೊಳೆಯಿರಿ
ಯಾವ ಮಾಹಿತಿ ಬಯಸುವರು
1 ಮನೆಯ ಯಜಮಾನರ ಹೆಸರು ಮತ್ತು ಫೋನ್ ನಂಬರ್
2 ಮನೆಯಲ್ಲಿ ಒಟ್ಟು ಎಷ್ಟು ಮಂದಿ ವಾಸವಾಗಿರುವಿರಿ
3 ಹಿರಿಯ ನಾಗರಿಕರು ಮತ್ತು ಪುಟ್ಟ ಮಕ್ಕಳ ಬಗ್ಗೆ ಮಾಹಿತಿ
4 ಗರ್ಭಿಣಿಯರು ಮತ್ತು ಬಾಣಂತಿಯರಿದ್ದರೆ ಅವರ ಆರೋಗ್ಯ ಸ್ಥಿತಿಗತಿ
5 ಮನೆಯಲ್ಲಿ ಯಾರಿಗಾದರೂ ಜ್ವರ, ಕೆಮ್ಮು, ಬಿಪಿ, ಶುಗರ್, ಅಸ್ತಮಾ, ಹೃದಯ ಸಂಬಂಧಿ ಕಾಯಿಲೆ, ಕಿಡ್ನಿ ಸಮಸ್ಯೆಗಳಿದ್ದರೆ ಮಾಹಿತಿ
6 ಯಾರಾದರೂ ವಿದೇಶದಲ್ಲಿ ಇದಾರೆಯೇ, ಬಂದಿದ್ದಾರೆಯೇ, ಅಂತರ್ ರಾಜ್ಯ ಪ್ರವಾಸ ಕೈಗೊಂಡಿದ್ದರೆ ಮಾಹಿತಿ, ನಿಮ್ಮ ಪರಿಸರದಲ್ಲಿ ಯಾರಾ ದರೂ ಹೀಗೆ ಬಂದವರಿದ್ದರೆ ಮಾಹಿತಿ
ಸ್ವಚ್ಛತೆಗೆ ಆದ್ಯತೆ
ಮನೆಯವರಿಗೆ ಸ್ವತ್ಛತೆಯ ಅರಿವು ಮೂಡಿಸುವ ಆರೋಗ್ಯ ಕಾರ್ಯಕರ್ತೆಯರು ಕೂಡ ಸ್ವತಃ ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡುತ್ತಾರೆ. ದಿನಕ್ಕೆ 20-25 ಮನೆಗಳಿಗೆ ಭೇಟಿ ನೀಡುವ ಅವರು ಮುಖಕ್ಕೆ ಮಾಸ್ಕ್, ಕೈಗೆ ಗ್ಲೌಸ್ ಧರಿಸುವರು. ಪ್ರತಿ ಮನೆಗೆ ಭೇಟಿ ನೀಡಿದ ಬಳಿಕ ಸ್ಯಾನಿಟೈಸರ್‌ನಿಂದ ಕೈ ಸ್ವಚ್ಛಗೊಳಿಸುವರು. ಮನೆಗೆ ಭೇಟಿ ನೀಡುವ ಸಂದರ್ಭವೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವರು. ಮನೆಯ ಅಂಗಳದಲ್ಲಿ ನಿಂತುಕೊಂಡೇ ಹೆಚ್ಚಾಗಿ ಮಾಹಿತಿ ಪಡೆಯುವರು.
ನಾವೇನು ಮಾಡಬೇಕು
1 ಮಾಹಿತಿ ಬಯಸಿ ಮನೆಗೆ ಬರುವ ಆರೋಗ್ಯ ಕಾರ್ಯಕರ್ತೆಯರನ್ನು ಗೌರವದಿಂದ ಕಾಣುವುದು.
2 ಕೇಳಿದ ಪ್ರಶ್ನೆಗಳಿಗೆ ಸರಿಯಾಗಿ ಮಾಹಿತಿ ನೀಡುವುದು.
3 ಪರಿಸರದವರು ಯಾರಾದರೂ ಹೊರಗಿನ ಪ್ರದೇಶಗಳಿಗೆ ಹೋಗಿದ್ದರೆ, ಆ ಬಗ್ಗೆ ಮಾಹಿತಿ ಒದಗಿಸುವುದು.
4 ಏನಾದರೂ ಸಂಶಯಗಳಿದ್ದರೆ ಮಾಹಿತಿ ಕೇಳಿ ಪಡೆದು ನಿವಾರಿಸಿಕೊಳ್ಳುವುದು.
ಸಂಪರ್ಕ ಕೊಂಡಿಯಾಗಿ ಕರ್ತವ್ಯ
ಅಂಗನವಾಡಿ ಕಾರ್ಯಕರ್ತೆಯರು ಗ್ರಾ.ಪಂ. ಮಟ್ಟದ ಟಾಸ್ಕ್ ಸಮಿತಿಯಲ್ಲಿ ಇದ್ದುಕೊಂಡು ಆರೋಗ್ಯ ಇಲಾಖೆಗಳ ಜತೆಯೂ ಸಂಪರ್ಕ ಇರಿಸಿಕೊಂಡು ಸೋಂಕು ತಡೆಗೆ ಎಲ್ಲ ರೀತಿಯ ಸಹಕಾರ ನೀಡುತ್ತಿದ್ದಾರೆ.
– ಆರ್. ಶೇಷಪ್ಪ , ಉಪನಿರ್ದೇಶಕರು, ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಇಲಾಖೆ ಉಡುಪಿ
ಜನರಿಗಾಗಿ ಶ್ರಮ
ಕೋವಿಡ್ 19 ತಡೆಗಟ್ಟಲು ನಾವು ಸಾಕಷ್ಟು ಶ್ರಮ ಪಡುತ್ತಿದ್ದೇವೆ. ಒಂದು ಮನೆಯನ್ನೂ ಬಿಡದೆ ಸಂಪರ್ಕಿಸುತ್ತಿದ್ದೇವೆ. ಮನೆ ಮನೆ ಭೇಟಿ ಕಾರ್ಯದಲ್ಲಿ ತೊಡಗಿರುವ ಎಲ್ಲ ವಲಯಗಳ ಕಾರ್ಯಕರ್ತೆಯರಿಗೆ ಸರಕಾರವೇ ಎಲ್ಲ ಸವಲತ್ತು ಒದಗಿಸಲು ಕ್ರಮವಹಿಸಬೇಕು.
– ಸುಶೀಲಾ ನಾಡ,
ಅಂಗನವಾಡಿ ಕಾರ್ಯಕರ್ತೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?
Bengaluru: ಬಸ್‌ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್ ನ ಅನ್ನಪೂರ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.