ಎಪ್ರಿಲ್ ತಿಂಗಳ ಅಂತ್ಯದೊಳಗೆ ಪಡೆಯದಿದ್ದರೆ ಕೋಟಾ ಕಡಿತ
"ಉಜ್ವಲ' ಉಚಿತ ರಿಫಿಲ್ಲಿಂಗ್ ಯೋಜನೆ
Team Udayavani, Apr 27, 2020, 6:25 AM IST
ಮಂಗಳೂರು: ಕೋವಿಡ್ 19 ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಡ ಕುಟುಂಬಗಳಿಗೆ ನೆರವಾಗುವ ಉದ್ದೇಶದಿಂದ ಕೇಂದ್ರ ಸರಕಾರ ಘೋಷಿಸಿದ ಪ್ಯಾಕೇಜ್‌ನಂತೆ “ಉಜ್ವಲ (ಪಿಎಂ ಯುವೈ)’ ಯೋಜನೆಯ ಫಲಾನುಭವಿಗಳಿಗೆ ಉಚಿತ ಅಡುಗೆ ಅನಿಲ ನೀಡಲಾಗುತ್ತಿದ್ದು, ಮೊದಲ ತಿಂಗಳ ಕೋಟಾದಡಿ ದ.ಕ. ಮತ್ತು ಉಡುಪಿ ಜಿಲ್ಲೆಯ ಶೇ.50ರಷ್ಟು ಫಲಾನುಭವಿಗಳು ಮಾತ್ರ ಅಡುಗೆ ಅನಿಲ ಪಡೆದುಕೊಂಡಿದ್ದಾರೆ.
ದ.ಕ.ಜಿಲ್ಲೆಯಲ್ಲಿ 48,700, ಉಡುಪಿ ಯಲ್ಲಿ 25,000 ಫಲಾನು ಭವಿಗಳಿದ್ದಾರೆ. ಅವರಿಂದ ರಿಫಿಲ್ ಬುಕಿಂಗ್ ಮಾಡಿಸಿಕೊಳ್ಳಲು ಗ್ಯಾಸ್ ಏಜೆನ್ಸಿಗಳು ನಿರಂತರವಾಗಿ ಮನೆ -ಮನೆಗಳಿಗೆ ತೆರಳುತ್ತಿವೆ.
ಕೋಟಾ ಕಡಿತ
ಸರಕಾರ ಎಪ್ರಿಲ್, ಮೇ ಮತ್ತು ಜೂನ್ ತಿಂಗಳಿಗೆ ಉಚಿತವಾಗಿ ಅನಿಲ ಪೂರೈಸಲಿದ್ದು, ಈಗಾಗಲೇ ಒಂದು ತಿಂಗಳ ಫಿಲ್ಲಿಂಗ್ ಮೊತ್ತವನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ. ಎಪ್ರಿಲ್‌ನ ಸಿಲಿಂಡರ್ ಪಡೆಯುವವರು ಎ. 30ರೊಳಗೆ ಪಡೆಯಬೇಕು. ಮೇ 1ರಿಂದ ಮೇ ತಿಂಗಳಿನ ಕೋಟಾದಡಿ ಮಾತ್ರ ಸಿಗಲಿದೆ.
ಎಪ್ರಿಲ್‌ನ ಕೋಟಾ ಪಡೆಯಲು ಸಾಧ್ಯ ವಿಲ್ಲ. ಅಂತೆಯೇ ಮೇ ಅಂತ್ಯದೊಳಗೆ ಪಡೆಯದಿದ್ದರೆ ಜೂನ್ ತಿಂಗಳ ಕೋಟಾ ಮಾತ್ರ ಪಡೆಯಬಹುದಾಗಿರುತ್ತದೆ.
ಯಾರಿಗೆ ಅನ್ವಯ
ಈ ಪ್ಯಾಕೇಜ್ ಪ್ರಸ್ತುತ ಕೇವಲಕೇಂದ್ರದ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಮಾತ್ರ ಅನ್ವಯ. ಇವು ಮಹಿಳೆಯರ ಹೆಸರಿನಲ್ಲಿರುವ ಅಡುಗೆ ಅನಿಲ ಸಂಪರ್ಕಗಳು. ಈ ಹಿಂದೆ ಬಿಪಿಎಲ್ ಫಲಾನುಭವಿಗಳಿಗೆ ನೀಡ ಲಾದ ಮುಖ್ಯಮಂತ್ರಿ ಅನಿಲಭಾಗ್ಯ ಹಾಗೂ ಇತರ ಉಚಿತ ಅನಿಲ ಸಂಪರ್ಕಯೋಜನೆಗಳಿಗೆ ಅನ್ವಯಿಸುವುದಿಲ್ಲ.
ಮುಖ್ಯಮಂತ್ರಿ ಅನಿಲ ಸಂಪರ್ಕ ಯೋಜನೆಯಡಿ ಕೂಡ ಉಚಿತ ವಾಗಿ ಗ್ಯಾಸ್ ನೀಡುವುದಾಗಿ ಸರಕಾರ ಘೋಷಿಸಿದ್ದು, ಇನ್ನಷ್ಟೇ ಅನುಷ್ಠಾನ ಗೊಳ್ಳಬೇಕಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖಾ ಧಿಕಾರಿಗಳು ತಿಳಿಸಿದ್ದಾರೆ.
ಸ್ಥಳದಲ್ಲಿಯೇ ಬುಕ್ಕಿಂಗ್
ಮೊದಲ ತಿಂಗಳಲ್ಲಿಯೇ ಶೇ. 100ರಷ್ಟು ಗುರಿ ತಲುಪುವ ಉದ್ದೇಶದಿಂದ ಪೆಟ್ರೋಲಿಯಂ ಕಂಪೆನಿಗಳು ಫಲಾನು
ಭವಿಗಳ ಮನೆ ಮನೆಗೆ ತೆರಳುತ್ತಿವೆ. ಸ್ಥಳದಲ್ಲಿಯೇ ರಿಫಿಲ್ಲಿಂಗ್ ಬುಕ್ಕಿಂಗ್ ಕೂಡ ಮಾಡಲಾಗುತ್ತಿದೆ. ಆದಾಗ್ಯೂ ಅನೇಕ ಮಂದಿ ಬುಕ್ಕಿಂಗ್ ಮಾಡಿ ಕೊಂಡಿಲ್ಲ. ಹೆಚ್ಚಿನವರು ಒಂದೇ ಸಿಲಿಂಡರ್ ಹೊಂದಿರುವ ಕಾರಣ ಅದು ಖಾಲಿಯಾಗದೆ ಬುಕಿಂಗ್ ಮಾಡುವುದು ಹೇಗೆ ಎಂಬ ಸಂಕಷ್ಟದಲ್ಲಿದ್ದಾರೆ. ಇನ್ನು ಕೆಲವು ಫಲಾನುಭವಿಗಳ ಬ್ಯಾಂಕ್ ಖಾತೆಯಲ್ಲಿ ಸಮಸ್ಯೆಗಳಿರು ವುದರಿಂದಾಗಿಯೂ ವಿಳಂಬವಾಗಿದೆ. ಬ್ಯಾಂಕ್‌ಗಳ ಜತೆಗೂ ಪೆಟ್ರೋಲಿಯಂ ಕಂಪೆನಿಗಳು ಸಂಪರ್ಕದಲ್ಲಿದ್ದು ಫಲಾನುಭವಿಗಳಿಗೆ ಅಗತ್ಯ ನೆರವು ಒದಗಿಸುವಂತೆ ಸೂಚಿಸುತ್ತಿದ್ದಾರೆ.
ಎ. 30 ಕೊನೆಯ ದಿನ
ಉಜ್ವಲ ಯೋಜನೆಯಡಿ ಈ ತಿಂಗಳ ಉಚಿತ ಅಡುಗೆ ಅನಿಲ ಪಡೆಯಲು ಎ. 30 ಕೊನೆಯ ದಿನ. ಫಲಾನುಭವಿಗಳು ಎರಡು ದಿನಗಳ ಮೊದಲಾದರೂ ಬುಕ್ಕಿಂಗ್ ಮಾಡಿಕೊಳ್ಳಬೇಕು. ಇಲ್ಲವಾದರೆ ಈ ತಿಂಗಳ ಕೋಟಾ ಕಳೆದುಕೊಳ್ಳುತ್ತಾರೆ. ಕೂಡಲೇ ತಮ್ಮ ಅಧಿಕೃತ ಡೀಲರ್‌ಗಳ ಬಳಿ ತೆರಳಿ ಬುಕ್ಕಿಂಗ್ ಮಾಡಿಕೊಳ್ಳಬೇಕು. ಸ್ಥಳೀಯಾಡಳಿತ ಸಂಸ್ಥೆಗಳು ಕೂಡ ಗ್ರಾಮೀಣ ಭಾಗದ ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ.
– ಪವನ್ ನೋಡೆಲ್ ಅಧಿಕಾರಿ, ಉಜ್ವಲ ಯೋಜನೆ ದ.ಕ. ಜಿಲ್ಲೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
MUST WATCH
ಹೊಸ ಸೇರ್ಪಡೆ
IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್ ಹೂಡಾ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.