ಕುಂಬಳಕಾಯಿ ಬೆಳೆದವರಿಗೆ ಸಿಹಿ ಉಣಿಸಿದ ರೈತ ಸೇತು

Team Udayavani, Apr 27, 2020, 11:35 AM IST

3

ಚಿತ್ರದುರ್ಗ: ಮಲ್ಲಪ್ಪನಹಳ್ಳಿ ರೈತರ ಜಮೀನಿನಲ್ಲಿ ಬೆಳೆದಿದ್ದ ಸಿಹಿ ಕುಂಬಳ ಖರೀದಿಸಿ ಲಾರಿಗೆ ತುಂಬಿಸಲಾಯಿತು.

ಚಿತ್ರದುರ್ಗ: ಕೋವಿಡ್ ತಡೆಗಾಗಿ ಲಾಕ್‌ಡೌನ್‌ ಘೋಷಿಸಿದ ನಂತರ ರೈತರ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಹಾಗೂ ನೆರವು ನೀಡುವ ಉದ್ದೇಶದಿಂದ “ಉದಯವಾಣಿ’  ರೂಪಿಸಿದ “ರೈತಸೇತು’ ಜಿಲ್ಲೆಯ ರೈತರ ಬದುಕಿನಲ್ಲಿ ಸಿಹಿ ತಂದಿದೆ. ಹೊಸದುರ್ಗ ತಾಲೂಕು ಮಲ್ಲಪ್ಪನಹಳ್ಳಿ ಗ್ರಾಮದ ಆನಂದ್‌ ಹಾಗೂ ಎಂ.ಕೆ. ಕಾಂತರಾಜು ಎಂಬುವವರು ಒಟ್ಟು ಐದು ಎಕರೆಯಲ್ಲಿ ಬೆಳೆದಿದ್ದ ಸಿಹಿ ಕುಂಬಳಕ್ಕೆ ಮಾರುಕಟ್ಟೆ ಒದಗಿಸಿಕೊಟ್ಟಿದೆ. ಸಿಹಿ ಕುಂಬಳದ ಬೀಜ ನಾಟಿ ಮಾಡಿದ
ದಿನ ದಿಂದಲೂ ಉತ್ತಮ ಲಾಭದ ಕನಸು ಕಾಣುತ್ತಿದ್ದ ರೈತರಿಗೆ ಕೋವಿಡ್ ಲಾಕ್‌ಡೌನ್‌ ಸಂಕಷ್ಟಕ್ಕೆ ಸಿಲುಕಿಸಿತು. ಇದರಿಂದ ಕಂಗೆಟ್ಟಿದ್ದ ಆನಂದ್‌ ಹಾಗೂ ಕಾಂತರಾಜು ಪತ್ರಿಕೆಯನ್ನು ಸಂಪರ್ಕಿಸಿ ತಮ್ಮ ಬೆಳೆ ವಿವರಗಳನ್ನು ನೀಡಿದ್ದರು.

ಪತ್ರಿಕೆಯಲ್ಲಿ ರೈತರ ಊರು, ಬೆಳೆದಿರುವ ಬೆಳೆಯ ಹೆಸರು, ಅದರ ಪ್ರಮಾಣ ಹಾಗೂ ರೈತ ಅದಕ್ಕೆ ನಿಗ ದಿ ಮಾಡಿರುವ ಬೆಲೆ ಅವರ ಮೊಬೈಲ್‌ ಸಂಖ್ಯೆಯನ್ನು ರೈತಸೇತು ಅಂಕಣದಲ್ಲಿ ಪ್ರಕಟಿಸಿತ್ತು. ಈ ವಿಷಯವನ್ನು ಗಮನಿಸಿದ ಬೆಂಗಳೂರು ಮೂಲದ ಶರತ್‌ ಎಂಬುವವರು ಪ್ರತಿ ವಾರ ಮೂರು ಟನ್‌ನಂತೆ ಇಬ್ಬರೂ ರೈತರಿಂದ ಸಿಹಿ ಕುಂಬಳ ಖರೀದಿ  ಮಾಡಿ ತಮ್ಮ ಹಂದಿ ಫಾರಂಗೆ ಬಳಕೆ ಮಾಡಿಕೊಳ್ಳಲು ಮುಂದೆ ಬಂದಿದ್ದಾರೆ. ಹೊಸದುರ್ಗ ತಾಲೂಕಿನ ಮಲ್ಲಪ್ಪನಹಳ್ಳಿ ರೈತರು ಪ್ರತಿ ವರ್ಷವೂ ಸಿಹಿಕುಂಬಳ ಬೆಳೆಯುತ್ತಾರೆ. ಎಕರೆಗೆ 25 ರಿಂದ 30 ಸಾವಿರ ಖರ್ಚು ಬರುತ್ತದೆ. ಇದರಿಂದ ಒಂದು ಲಕ್ಷದವರೆಗೆ ಲಾಭ ಸಿಗುತ್ತದೆ. ಪ್ರತಿ ಎಕರೆಗೆ 6 ರಿಂದ 7 ಟನ್‌ ಇಳುವರಿ ಬಂದರೆ ಪ್ರತಿ ಕೆಜಿಗೆ 15 ರೂ.ವರೆಗೆ ಬೆಲೆ ಇರುತ್ತದೆ. ಮಲ್ಲಪ್ಪನಹಳ್ಳಿ ರೈತ ಆನಂದ್‌ ಮೂರು ಎಕರೆಯಲ್ಲಿ ಬೆಳೆ ಬೆಳೆದಿದ್ದಾರೆ. ಕಾಂತರಾಜು ಎರಡು ಎಕರೆಯಲ್ಲಿ ಬೆಳೆದಿದ್ದಾರೆ. ಸದ್ಯ 6 ರೂ.ನಂತೆ ಪ್ರತಿ ಕೆಜಿ ಸಿಹಿ ಕುಂಬಳ ಖರೀದಿಯಾಗುತ್ತಿದೆ.

ನಮ್ಮ ಬೆಳೆ ಹೊಲದಲ್ಲೇ ಕೊಳೆಯುತ್ತದೆ ಎಂಬ ಆತಂಕದಲ್ಲಿದ್ದಾಗ “ಉದಯವಾಣಿ’ ಪತ್ರಿಕೆಯ ರೈತಸೇತು ಅಂಕಣ ನಮಗೆ ಹೊಸ ದಾರಿ ತೋರಿಸಿದೆ. ಲಾಭ
ಬಾರದಿದ್ದರೂ ಪರವಾಗಿಲ್ಲ, ನಷ್ಟವಾಗದಂತೆ ಕಾಪಾಡಿದೆ. ರೈತರು ಮಾರಾಟಗಾರರ ನಡುವಿನ ಸೇತುವೆಯಾದ ಪತ್ರಿಕೆಗೆ ಆಭಾರಿ.
ಎಂ.ಕೆ. ಕಾಂತರಾಜು,
ಮಲ್ಲಪ್ಪನಹಳ್ಳಿ ರೈತ

ಟಾಪ್ ನ್ಯೂಸ್

Ullala–Encroch

Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು

Adani; ಆಸೀಸ್‌ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ

Adani; ಆಸೀಸ್‌ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

Delhi: ಕೇಜ್ರಿವಾಲ್‌ಗಿಂತ ಆತಿಶಿ ಸಾವಿರಪಟ್ಟು ಉತ್ತಮ: ಲೆ.ಗ.ಸಕ್ಸೇನಾ!

Delhi: ಕೇಜ್ರಿವಾಲ್‌ಗಿಂತ ಆತಿಶಿ ಸಾವಿರಪಟ್ಟು ಉತ್ತಮ: ಲೆ.ಗ.ಸಕ್ಸೇನಾ!

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ

Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ

Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು

Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು

accident

Holalkere: ಕೆರೆಗೆ ಉರುಳಿದ ಕಾರು: ಅತ್ತೆ-ಸೊಸೆ ಸಾವು

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ;

Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ; ಆತ್ಮಹ*ತ್ಯೆಗೆ ಶರಣಾದ ವ್ಯಾಪಾರಿ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Ullala–Encroch

Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು

Adani; ಆಸೀಸ್‌ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ

Adani; ಆಸೀಸ್‌ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

Delhi: ಕೇಜ್ರಿವಾಲ್‌ಗಿಂತ ಆತಿಶಿ ಸಾವಿರಪಟ್ಟು ಉತ್ತಮ: ಲೆ.ಗ.ಸಕ್ಸೇನಾ!

Delhi: ಕೇಜ್ರಿವಾಲ್‌ಗಿಂತ ಆತಿಶಿ ಸಾವಿರಪಟ್ಟು ಉತ್ತಮ: ಲೆ.ಗ.ಸಕ್ಸೇನಾ!

Exam

VAO ಹುದ್ದೆ: ಅಂತಿಮ ಕೀ ಉತ್ತರ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.